ಮನೆ ರಾಜಕೀಯ ಮಗ್ಗುಲಲ್ಲಿ ಕತ್ತಿ ಮಸಿಯುತ್ತಿರುವವರ ಕಡೆ ಮೊದಲು ಗಮನಕೊಡಿ: ಕಾಂಗ್ರೆಸ್‌ ಗೆ ಜೆಡಿಎಸ್ ತಿರುಗೇಟು

ಮಗ್ಗುಲಲ್ಲಿ ಕತ್ತಿ ಮಸಿಯುತ್ತಿರುವವರ ಕಡೆ ಮೊದಲು ಗಮನಕೊಡಿ: ಕಾಂಗ್ರೆಸ್‌ ಗೆ ಜೆಡಿಎಸ್ ತಿರುಗೇಟು

0

ಬೆಂಗಳೂರು : ತಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದು ನಾರುತ್ತಿದ್ದರೂ, ಪಕ್ಕದ ಎಲೆಯ ಮೇಲೆ ಕಣ್ಣು ಹಾಕುವುದಲ್ಲವೇ ಕಾಂಗ್ರೆಸ್‌ ನ ನರಿಬುದ್ಧಿಯಾಗಿದೆ ಎಂದು ರಾಜ್ಯ ಜೆಡಿಎಸ್ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದೆ.

ಈ ಕುರಿತು ಟ್ವಿಟ್‌ ಮಾಡಿ, ಕಾಂಗ್ರೆಸ್‌ ನಲ್ಲಿ ಕುದಿಯುತ್ತಿರುವ ಒಳಬೇಗುದಿಗಳು ಈಗಾಗಲೇ ಜಗಜ್ಜಾಹೀರಾಗಿದೆ. ಕೈ ಪಡೆಯಲ್ಲಿ ಬಣ ಬಣಗಳಾಗಿ ಹಾದಿಬೀದಿಯಲ್ಲಿ ಬಡಿದಾಡುತ್ತಾ, ರಾಜಕೀಯ ಸ್ವಾರ್ಥಕ್ಕಾಗಿ ಮಗ್ಗುಲಲ್ಲಿಯೇ ಕತ್ತಿ ಮಸಿಯುತ್ತಿರುವವರ ಕಡೆ ಮೊದಲು ಗಮನಕೊಡಿ ಎಂದು ಛೇಡಿಸಿದೆ.

ಪ್ರಾದೇಶಿಕ ಪಕ್ಷದ ತಲೆಬಿಸಿ ಬಿಟ್ಟು ಮನೆಯೊಂದು ನೂರು ಬಾಗಿಲಾಗಿರುವ ನಿಮ್ಮ ಪರಿಸ್ಥಿತಿಗಳನ್ನು ಒಮ್ಮೆ ಅವಲೋಕಿಸಿ ಎಂದು ಚಾಟಿ ಬೀಸಿದೆ.

ನಿಮ್ಮ ಬೀದಿ ಜಗಳಕ್ಕೆ ಸರ್ಕಾರ ಉರುಳುವ ಸಮಯ ಹತ್ತಿರದಲ್ಲಿದೆ. ಅದರತ್ತ ಚಿತ್ತ ಹರಿಸಿ. ಜಾಮೂನು, ವಿಷ, ಜೆಡಿಎಸ್ ಪ್ರಾಣದ ವಿಷಯ ಇರಲಿ, ಬೀದಿ ಬೀದಿಯಲ್ಲಿ ನಿಮ್ಮ ಮಾನ ಹರಣ ಆಗದಂತೆ ಎಚ್ಚರ ವಹಿಸಿ ಎಂದು, ಈಗ ಬಿಜೆಪಿಯ ಜಾಮೂನು ತಿನ್ನುತ್ತಿರುವ ಕುಮಾರಸ್ವಾಮಿಯವರು ಮುಂದೆ ವಿಷ ತಿನ್ನಲು ತಯಾರಿರುವುದು ಒಳ್ಳೆಯದು ಎಂದಿದ್ದ ಕಾಂಗ್ರೆಸ್‌ ಗೆ ಜೆಡಿಎಸ್ ತಿರುಗೇಟು ನೀಡಿದೆ.

ಮೈತ್ರಿ, ಸಹಬಾಳ್ವೆ ಬಗ್ಗೆ ಹೇಳುವ ನೀವು, ನೀರಿಗೆ ಇಳಿಯುವ ಮುನ್ನವೇ ಬಿರುಕು ಬಿಟ್ಟಿರುವ ‘ಇಂಡಿಯಾ’ ಹಡಗಿನಿಂದ ಹೊರಗೆ ಜಿಗಿಯಲು ಹೊರಟವರ ಬಗ್ಗೆ ಗಮನ ಕೊಡಿ ಎಂದು ಕುಟುಕಿದೆ.

ಬಿಜೆಪಿಯವರು ಜಾಮೂನಿನ ಒಳಗೆ ವಿಷ ಬೆರೆಸಿರುತ್ತಾರೆ ಸತ್ಯ ವಲಸಿಗರಿಗೆ ಅರಿವಾಗಿದೆ, ಮುಂದೆ ಕುಮಾರಸ್ವಾಮಿಯವರಿಗೂ ಅರಿವಾಗಲಿದೆ.. ಅರಿವಾಗುವುದರೊಳಗೆ ಜೆಡಿಎಸ್ ಪ್ರಾಣ ಹೋಗಿರುತ್ತದೆ!! ಎಂದು ಕಾಂಗ್ರೆಸ್ ವ್ಯಂಗ್ಯವಾಡಿತ್ತು.