ತುಮಕೂರು: ಕಾಂಗ್ರೆಸ್ ಕಾರ್ಯಕರ್ತರು ‘ಪೇ ಸಿಎಂ’ ಅಭಿಯಾನ ಬಳಿಕ ಹೊಸದಾಗಿ ‘ಪೇ ಎಂಎಲ್‌ಎ’ ಅಭಿಯಾನವನ್ನು ನಗರದಲ್ಲಿ ಆರಂಭಿಸಿದ್ದಾರೆ.
ನಗರದ ಬಿಜಿಎಸ್ ವೃತ್ತ, ಬಿ.ಎಚ್.ರಸ್ತೆ, ಹೊರಪೇಟೆ ಸೇರಿದಂತೆ ವಿವಿಧೆಡೆಯ ರಸ್ತೆ ಗೋಡೆಗಳ ಮೇಲೆ ‘ಪೇ ಎಂಎಲ್‌ಎ’ ಪೋಸ್ಟರ್’ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ರಾತ್ರಿ ಅಂಟಿಸಿದ್ದಾರೆ.
ಪೋಸ್ಟರ್ ಮಧ್ಯದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭಾವಚಿತ್ರವಿದೆ. ‘ನಿಮ್ಮ ಕೆಲಸ ಆಗಬೇಕೆ? ನನಗೆ ಪೇ ಮಾಡಿ. ಭ್ರಷ್ಟಾಚಾರವೇ ನನ್ನ ಮೊದಲ ಆದ್ಯತೆ’ ಎಂದು ಪೋಸ್ಟರ್‌ನಲ್ಲಿ ನಮೂದಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶಾಸಕರು ಲಂಚ ಪಡೆದಿದ್ದಾರೆ ಎಂಬ ಆರೋಪ ಇಟ್ಟುಕೊಂಡು ಈ ಅಭಿಯಾನ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಪೊಲೀಸರು ಪೋಸ್ಟರ್’ಗಳನ್ನು ಕಿತ್ತು ಹಾಕಿದ್ದಾರೆ.
Saval TV on YouTube