ಮನೆ ಸುದ್ದಿ ಜಾಲ ಬೇಸಿಕ್ ಸೆಟ್‌ನಿಂದಲೂ ಹಣ ಪಾವತಿಗೆ ಅವಕಾಶ: ಆರ್‌ಬಿಐ

ಬೇಸಿಕ್ ಸೆಟ್‌ನಿಂದಲೂ ಹಣ ಪಾವತಿಗೆ ಅವಕಾಶ: ಆರ್‌ಬಿಐ

0

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಇಂದು ಎರಡು ಸೇವೆ ಹೊಂದಿರುವ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಫೀಚರ್ ಫೋನ್‌ಗಳಿಗೆ ಅಂದರೆ ಬೇಸಿಕ್ ಸೆಟ್ ಗಳಿಗೆ ಮೊದಲ UPI ಸೌಲಭ್ಯ ಮತ್ತು ಎರಡನೇ ೨೪x೭ ಸಹಾಯವಾಣಿ ಸೌಲಭ್ಯ.

 ವೈಶಿಷ್ಟ÷್ಯದ ಫೋನ್‌ಗಳಲ್ಲಿ ಬಳಸಲಾಗುವ ಈ UPI ಸೌಲಭ್ಯವನ್ನು UPI೧೨೩Pಚಿಥಿ ಎಂದು ಹೆಸರಿಸಲಾಗಿದೆ. ಇದರ ಮೂಲಕ, ಫೀಚರ್ ಫೋನ್ ಬಳಸುವ ಜನರು ಸ್ಮಾರ್ಟ್ಫೋನ್ ಇಲ್ಲದೆ ಮತ್ತು ಇಂಟರ್ನೆಟ್ ಇಲ್ಲದೆ ಡಿಜಿಟಲ್ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಭಾರತದಲ್ಲಿ ೪೦ ಕೋಟಿಗಿಂತ ಹೆಚ್ಚು ಫೀಚರ್ ಫೋನ್ ಬಳಕೆದಾರರಿದ್ದಾರೆ. ಈ ಬಳಕೆದಾರರು ಡಿಜಿಟಲ್ ಪಾವತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.  ಈ ವಿಚಾರವನ್ನು ಅರಿತಿರುವ ಆರ್ ಬಿ ಐ, ಇಂಟರ್ ನೆಟ್ ಅಗತ್ಯವಿಲ್ಲದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಬೇಸಿಕ್ ಫೋನ್‌ಗಳಲ್ಲಿ ಬಳಕೆಯಾಗುವ ಈ ಯುಪಿಐ ಸೌಲಭ್ಯವು ಹಲವು ಭಾಷೆಗಳಲ್ಲಿ ಲಭ್ಯವಿದೆ. ಈ UPI ಸೌಲಭ್ಯದ ಹೆಸರು ೧೨೩ಪೇ. UPI೧೨೩ಠಿಚಿಥಿ ಸೌಲಭ್ಯದೊಂದಿಗೆ ವೈಶಿಷ್ಟ÷್ಯದ ಫೋನ್ ಬಳಕೆದಾರರು ಮೂರು ಸುಲಭ ಹಂತಗಳಲ್ಲಿ ಪಾವತಿಗಳನ್ನು ಮಾಡಬಹುದು. ಅವುಗಳೆಂದರೆ ಕರೆ, ಆಯ್ಕೆ ಮತ್ತು ಪಾವತಿ.

ಹಣ ಪಾವತಿಸುವುದು ಹೇಗೆ?

ಫೀಚರ್ ಫೋನ್‌ನಲ್ಲಿ UPI ಸೌಲಭ್ಯದ ಪ್ರಯೋಜನವನ್ನು ಪಡೆಯಲು, ಬಳಕೆದಾರರು ಮೊದಲು ತಮ್ಮ ಬ್ಯಾಂಕ್ ಖಾತೆಯನ್ನು ತಮ್ಮ ಬೇಸಿಕ್ ಫೋನ್‌ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಬಳಕೆದಾರರು ತಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ತಮ್ಮ UPI ಪಿನ್ ಅನ್ನು ರಚಿಸಕೊಳ್ಳಬೇಕಾಗುತ್ತದೆ. ಅದರ ನಂತರ ನೀವು ಪಾವತಿ ಮಾಡಲು ಸಾಧ್ಯವಾಗುತ್ತದೆ.

ಇದರ ಪ್ರಕ್ರಿಯೆ ಹೇಗೆ?

ಹಂತ ೧. ಫೀಚರ್ ಫೋನ್ ಬಳಕೆದಾರರು ಮೊದಲು Iಗಿಖ ಸಂಖ್ಯೆ ೦೮೦೪೫೧೬೩೬೬೬ ಗೆ ಕರೆ ಮಾಡಬೇಕು.

ಹಂತ ೨. ಈಗ ನಿಮಗೆ ಅನೇಕ ಆಯ್ಕೆಗಳು ಲಭ್ಯವಾಗುತ್ತವೆ. ಈ ಆಯ್ಕೆಗಳೆಂದರೆ ಹಣ ವರ್ಗಾವಣೆ, ಐPಉ ಗ್ಯಾಸ್ ರೀಫಿಲ್, ಈಂSಖಿಚಿg ರೀಚಾರ್ಜ್, ಮೊಬೈಲ್ ರೀಚಾರ್ಜ್, ಇಒI ಮರುಪಾವತಿ ಮತ್ತು ಬ್ಯಾಲೆನ್ಸ್ ಚೆಕ್.

ಹಂತ ೩. ಬಳಕೆದಾರರು ನೀಡಿರುವ ಆಯ್ಕೆಗಳಿಂದ ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳಬಹುದು. ನೀವು ಯಾರಿಗಾದರೂ ಹಣವನ್ನು ಕಳುಹಿಸಲು ಬಯಸಿದಾಗ ಹಣ ವರ್ಗಾವಣೆ ಆಯ್ಕೆ ಮಾಡಿಕೊಳ್ಳಬೇಕು.

ಹಂತ ೪. ಈಗ ನೀವು ಯಾರಿಗೆ ಹಣವನ್ನು ಕಳುಹಿಸಬೇಕು ಅವರ ನಂಬರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ ೫. ಈಗ ನಿಮ್ಮ ಮೊಬೈಲ್ ನಲ್ಲಿ ಹಣ ಮತ್ತು UPI ಪಿನ್ ಅನ್ನು ನಮೂದಿಸಬೇಕು. ಇದರೊಂದಿಗೆ ವಹಿವಾಟು ಪೂರ್ಣಗೊಳ್ಳುತ್ತದೆ. ಇದೇ ರೀತಿ ಯಾವುದೇ ಅಂಗಡಿಯವರಿಗೂ ಪಾವತಿ ಮಾಡಬಹುದು.

ಹಣ ವರ್ಗಾವಣೆಯಾಗಲಿಲ್ಲ? ಏನಾದ್ರೂ ಸಮಸ್ಯೆ ಉಂಟಾದ್ರೆ ಏನು ಮಾಡುವುದು ಅನ್ನೋ ಬಗ್ಗೆ ನಿಮ್ಗೆ ಪ್ರಶ್ನೆಗಳಿದ್ದರೆ, ಇದಕ್ಕಾಗಿ ಪರಿಹಾರವೊಂದನ್ನು ಆರ್ ಬಿ ಐ ನೀಡಿದೆ. ಡಿಜಿಸಾಥಿ ಎಂಬ ಸಮಸ್ಯೆ ಪರಿಹಾರ ವ್ಯವಸ್ಥೆಯನ್ನು ಆರ್ ಬಿ ಐ ಪ್ರಾರಂಭಿಸಿದೆ. ಬಳಕೆದಾರರು ತಮ್ಮ ಡಿಜಿಟಲ್ ಪಾವತಿಗಳಿಗೆ ಸಂಬAಧಿಸಿದ ಯಾವುದೇ ಪರಿಹಾರ ಅಥವಾ ಮಾಹಿತಿಗಾಗಿ ಆigisಚಿಣhi ಅನ್ನು ಸಂಪರ್ಕಿಸಬಹುದು. ಇದಕ್ಕಾಗಿ, ಬಳಕೆದಾರರು ೧೪೪೧ ಅಥವಾ ೧೮೦೦೮೯೧೩೩೩೩ ಗೆ ಕರೆ ಮಾಡಬೇಕಾಗುತ್ತದೆ. ಇಲ್ಲಿ ಬಳಕೆದಾರರು ತಮ್ಮ ಪ್ರತಿಯೊಂದು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.