ಮನೆ ಕಾನೂನು ಸ್ಟ್ಯಾಂಪ್ ಡ್ಯೂಟಿ ಪಾವತಿ- ಬದಲಾದ ನ್ಯಾಯಾಲಯದ ಕೆ-2 ಲೆಕ್ಕಶೀರ್ಷಿಕೆ

ಸ್ಟ್ಯಾಂಪ್ ಡ್ಯೂಟಿ ಪಾವತಿ- ಬದಲಾದ ನ್ಯಾಯಾಲಯದ ಕೆ-2 ಲೆಕ್ಕಶೀರ್ಷಿಕೆ

0

ಕರ್ನಾಟಕ ಮುದ್ರಾಂಕ ಶುಲ್ಕ ಕಾಯ್ದೆಯಡಿ ನ್ಯಾಯಾಲಯವು ಪಾವತಿಸಲು ಆದೇಶಿಸಿದ ಸ್ಟಾಂಪ್ ಡ್ಯೂಟಿ ಅಂಡ್ ಪೆನಾಲ್ಟಿ ಹಾಗೂ ಆರ್ಬಿಟೇಶನ್ ಅವಾರ್ಡ್, ಸೇಲ್ ಸರ್ಟಿಫಿಕೇಟ್, ನ್ಯಾಯಾಲಯದ ವಿಭಾಗ ಪತ್ರ ಮುಂತಾದ ದಾಖಲೆಗಳ ಮೇಲೆ ಪಾವತಿಸಬೇಕಾದ ನಾನ್ ಜುಡಿಷಿಯಲ್ ಸ್ಟ್ಯಾಂಪ್ ಶುಲ್ಕವನ್ನು ಕೆ-2 ಚಲನ್ ಮೂಲಕ ಇದುವರೆಗೂ ಈ ಕೆಳಗಿನ ಲೆಕ್ಕ ಶೀರ್ಷಿಕೆಗೆ ಪಾವತಿಸಲಾಗುತ್ತಿತ್ತು.

0030-02-102-0-01

ಆದರೆ ದಿನಾಂಕ 11.8.2022 ರಂದು ರಾಜ್ಯದ ಎಲ್ಲಾ ಡಿ.ಡಿ.ಒ.ರವರಿಗೆ ನೀಡಿದ ಸೂಚನೆ ಪ್ರಕಾರ ನಾನ್ ಜುಡಿಷಿಯಲ್ ಸ್ಟ್ಯಾಂಪ್ ಬಾಬ್ತು ಕೆ-2 ಚಲನ್ ಮೂಲಕ ಪಾವತಿಸಬೇಕಾದ ನ್ಯಾಯಾಲಯದ ಲೆಕ್ಕ ಶೀರ್ಷಿಕೆ ಈ ಕೆಳಗಿನಂತಿದೆ.

0070-01-102-0-01

ಮೇಲ್ಕಾಣಿಸಿದ ಲೆಕ್ಕ ಶೀರ್ಷಿಕೆ ಈ ಕೆಳಗಿನ ಉಪ ಉದ್ದೇಶಗಳಿಗೆ ಸಂಬಂಧಪಟ್ಟ ಕೆ-2 ಚಲನ್ ಪಾವತಿಗಳಿಗೆ ಸಂಬಂಧಪಟ್ಟದ್ದಾಗಿದೆ.

  1. Court order-Duty/Stamp Duty/Duty and Penalty.
  2. Court order-Deficit Stamp Duty.
  3. Court order- Revenue stamp Fee.
  4. Court order-Receipts on non judicial stamp.
  5. Court order-others