ಮನೆ ರಾಜ್ಯ ಶಿಕ್ಷಕರಿಗೆ ಪಿಂಚಣಿ: ಎನ್’ಪಿಎಸ್ಅನ್ನು ಒಪಿಎಸ್ ಆಗಿ ಪರಿವರ್ತಿಸಲು ಕ್ರಮ- ಸಿಎಂ ಬೊಮ್ಮಾಯಿ

ಶಿಕ್ಷಕರಿಗೆ ಪಿಂಚಣಿ: ಎನ್’ಪಿಎಸ್ಅನ್ನು ಒಪಿಎಸ್ ಆಗಿ ಪರಿವರ್ತಿಸಲು ಕ್ರಮ- ಸಿಎಂ ಬೊಮ್ಮಾಯಿ

0

ಬೆಂಗಳೂರು:  ಪಿಂಚಣಿ ನೀಡುವಂತೆ ಆಗ್ರಹಿಸಿ ಅನುದಾನಿತ ಶಾಲಾ ಶಿಕ್ಷಕರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಈ ಮಧ್ಯೆ ಎನ್ ಪಿಎಸ್ ಅನ್ನು ಒಪಿಎಸ್ ಆಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಶಿಕ್ಷಕರಿಗೆ ಪಿಂಚಣಿ ನೀಡುವಂತೆ ಇಂದು ವಿಧಾನ ಪರಿಷತ್’ನಲ್ಲಿ ಆಗ್ರಹಿಸಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್  ಅನುದಾನಿತ ಶಿಕ್ಷಕರಿಗೆ ಪಿಂಚಣಿ ಕೊಡಬೇಕು. ಪಿಂಚಣಿಗಾಗಿ ಆಗ್ರಹಿಸಿ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಈ ವೇಳೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, 2006ಕ್ಕೂ ಮೊದಲು ನೇಮಕವಾದವರಿಗೆ ಒಪಿಎಸ್ ಪಿಂಚಣಿ ನೀಡುತ್ತಿದ್ದೇವೆ. 2006 ನಂತರ ನೇಮಕ ಆದವರಿಗೆ ಎನ್ ಪಿಎಸ್ ಪಿಂಚಣಿ ನೀಡುತ್ತಿದ್ದೇವೆ.  ಎನ್’ಪಿಎಸ್ ಅನ್ನು ಒಪಿಎಸ್ ಆಗಿ ಪರಿವರ್ತಿಸಲು ಕ್ರಮ  ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಹಿಂದಿನ ಲೇಖನಬಿಎಸ್’ವೈ ನನ್ನ ಮೇಲಿನ ಪ್ರೀತಿಯಿಂದ ಬಾದಾಮಿಯಲ್ಲಿ ಸ್ಪರ್ಧಿಸಲು ಹೇಳಿದ್ದಾರೆ: ಸಿದ್ದರಾಮಯ್ಯ
ಮುಂದಿನ ಲೇಖನಹರಿಹರದ ಬೆಸ್ಕಾಂ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ