Saval TV on YouTube
ಹುಬ್ಬಳ್ಳಿ(Hubballi): ನಗರದ ರೈಲ್ವೆ ಮೈದಾನದಲ್ಲಿ ಇಂದು ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆಗಾಗಿ ನಗರಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ.
ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 3.30ಕ್ಕೆ ಬಂದಿಳಿಯಲಿರುವ ಮೋದಿ ಅವರು, ನಿಲ್ದಾಣದಿಂದ ಗೋಕುಲ ರಸ್ತೆ ಮಾರ್ಗವಾಗಿ ರೈಲ್ವೆ ಮೈದಾನಕ್ಕೆ ತೆರಳಿದ್ದಾರೆ.
ಈ ವೇಳೆ ಜನರು ರಸ್ತೆ ಬದಿ ನಿಂತು, ಮೋದಿ ಅವರನ್ನು ನೋಡುವುದಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ, ರಸ್ತೆಯ ಎರಡೂ ಬದಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಮುಖ್ಯ ರಸ್ತೆಯನ್ನು ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ರಸ್ತೆಯ ಎರಡೂ ಬದಿ ಹಾಕಿರುವ ಬ್ಯಾರಿಕೇಡ್ ಗಳ ಬಳಿ ಜನ ಜಮಾಯಿಸುತ್ತಿದ್ದಾರೆ. ಮೋದಿ ಭಾವಚಿತ್ರವನ್ನು ಕೈಯಲ್ಲಿ ಹಿಡಿದು “ಮೋದಿ, ಮೋದಿ, ಮೋದಿ” ಎಂದು ಜೈಕಾರ ಹಾಕುತ್ತಾ ಮೋದಿ ಬರುವಿಕೆಗಾಗಿ ಕಾಯುತ್ತಿದ್ದಾರೆ.














