ಇಂದು ಜನರು ಹಲವಾರು ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಉತ್ತಮ ಆರೋಗ್ಯಕ್ಕೆ ಅನುಕೂಲಕರವಾದ ವಾತಾವರಣ ಅಷ್ಟಾಗಿ ಕಾಣಸಿಗುತ್ತಿಲ್ಲ. ಮಧ್ಯಪಾನದಂತಹ ಕೆಟ್ಟ ಚಟಗಳನ್ನು ಅಂಟಿಸಿಕೊಂಡಿರುವ ಜನರು ಇಂದು ತಮ್ಮ ಆರೋಗ್ಯಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಏಕೆಂದರೆ ಇದರಿಂದ ಮಧುಮೇಹ ಹೆಚ್ಚಾಗುತ್ತದೆ, ಮತ್ತು ಕ್ರಮೇಣವಾಗಿ ಲಿವರ್ ಕಾಯಿಲೆ ಶುರುವಾಗುತ್ತದೆ. ಆದರೆ ಕಾಫಿ ಕುಡಿಯುವುದು ಲಿವರ್ ಕಾಯಿಲೆಯಿಂದ ರಕ್ಷಿಸುತ್ತದೆ ಎನ್ನುವ ಭರವಸೆ ಮೂಡಿಸಿದೆ.
ಕಾಫಿಯಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶಗಳು
• ಇದಕ್ಕೆ ಪ್ರಮುಖ ಕಾರಣ ಕಾಫಿ ತನ್ನಲ್ಲಿ ಅಪಾರ ಪ್ರಮಾಣದ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು, ಇದು ನಮ್ಮ ದೇಹಕ್ಕೆ ರಕ್ಷಣಾತ್ಮಕ ಪ್ರಭಾವಗಳನ್ನು ಉಂಟು ಮಾಡು ತ್ತದೆ. ಹೃದಯದ ಕಾಯಿಲೆ, ಪಾರ್ಶ್ವವಾಯು, ಮಧುಮೇಹ, ಪಾರ್ಕಿನ್ಸನ್ ಕಾಯಿಲೆ ಇತ್ಯಾದಿಗಳನ್ನು ಬರದಂತೆ ತಡೆಯುತ್ತದೆ.
• ಆದರೆ ಕಾಫಿ ಕುಡಿಯುವಾಗ ಸಕ್ಕರೆ ಹಾಕಬಾರದು. ಏಕೆಂದರೆ ಸಕ್ಕರೆ ಹಾಕಿದರೆ ಕೆಫಿನ್ ಅಂಶದ ಪ್ರಭಾವ ಕಡಿಮೆಯಾಗುತ್ತದೆ. ಹಾಲನ್ನು ಕಡಿಮೆ ಸೇರಿಸಬೇಕು ಅಥವಾ ಹಾಲು ಹಾಕದೆ ಕಾಫಿ ಕುಡಿಯುವ ಅಭ್ಯಾಸ ಇದ್ದರೆ ಒಳ್ಳೆಯದು.
• ಕಾಫಿ ಲಿವರ್ ಆರೋಗ್ಯದ ಮೇಲೆ ಉತ್ತಮ ಪ್ರಭಾವ ಬೀರುತ್ತದೆ. ಸಂಶೋಧನೆ ಹೇಳುವ ಪ್ರಕಾರ ಪ್ರತಿದಿನ ಮೂರು ಕಪ್ ಕಾಫಿ ಕುಡಿಯುವುದು ಲಿವರ್ ಹಾನಿ ಯನ್ನು ತಪ್ಪಿಸುತ್ತದೆ.
ಮೂರು ಕಪ್ ಗಿಂತ ಹೆಚ್ಚು ಬೇಡ
• ದಿನಕ್ಕೆ ಮೂರು ಕಪ್ ಕಾಫಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬಾರದು. ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ ಇದ್ದವರಿಗೆ ಫ್ಯಾಟಿ ಲಿವರ್ ಸಮಸ್ಯೆ ಒಂದು ಹಂತದಲ್ಲಿ ಕಡಿಮೆ ಯಾಗುತ್ತದೆ.
• ಇಲಿಗಳ ಮೇಲೆ ನಡೆದ ಸಂಶೋಧನೆಯಲ್ಲಿ ಇದು ಸಾಬೀತಾಗಿದೆ. ಮುಖ್ಯವಾಗಿ ಬ್ಲಾಕ್ ಕಾಫಿ ಕುಡಿಯುವು ದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಮತ್ತು ಇದರಿಂದ ಲಿವರ್ ಕಾಯಿಲೆ ಸಹ ಕಡಿಮೆಯಾಗುತ್ತದೆ.
ಕೆಫಿನ್ ಅಂಶ ಹೊಂದಿರುವ ಪಾನೀಯಗಳು
• ಇನ್ನಿತರ ಕೆಫಿನ್ ಅಂಶ ಹೊಂದಿರುವ ಯಾವುದೇ ಪಾನೀಯ ಗಳು ಲಿವರ್ ಕಾಯಿಲೆಯ ವಿರುದ್ಧ ಇದೇ ರೀತಿಯ ರಕ್ಷಣೆ ಕೊಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ.
• ಕಾಫಿ ಕುಡಿಯುವುದರಿಂದ ಮೆಟಬಾಲಿಸಂ ಪ್ರಕ್ರಿಯೆ ಯಲ್ಲಿ ಉತ್ತಮ ಅಭಿವೃದ್ಧಿ ಕಾಣುತ್ತದೆ ಮತ್ತು ಲಿವರ್ ಕಾಯಿಲೆಯನ್ನು ಅಭಿವೃದ್ಧಿಪಡಿಸಿಕೊಳ್ಳುವ ತೊಂದರೆ ಇರುವುದಿಲ್ಲ.
• ಮಕ್ಕಳು ಮತ್ತು ಪ್ರೌಢಾವಸ್ಥೆಗೆ ಬಂದಿರುವ ಮಂದಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯಬಾರದು ಎಂದು ಹೇಳುತ್ತಾರೆ. ಏಕೆಂದರೆ ಇದರಿಂದ ಮಾನಸಿಕ ಆತಂಕ, ತಲೆನೋವು, ನಿದ್ರಾಹೀನತೆ ಸಮಸ್ಯೆ ತಲೆದೋರುತ್ತದೆ.
• ಅತಿಯಾಗಿ ಕೆಫೀನ್ ಅಂಶ ಇರುವ ಬ್ಲ್ಯಾಕ್ ಕಾಫಿ ಸೇವನೆ ಮಾಡುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಹೀಗಾಗಿ ಆದಷ್ಟು ಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ
• ಒಂದು ವೇಳೆ, ನಿಮಗೆ ಈಗಾಗಲೇ ಹೃದಯರಕ್ತನಾಳದ ಕಾಯಿಲೆಯ ಸಮಸ್ಯೆ ಇದ್ದರೆ, ವೈದ್ಯರ ಸಲಹೆಗಳನ್ನು ಪಡೆದುಕೊಂಡು ಮಾತ್ರ ಮುಂದುವರೆಯಿರಿ
• ದೇಹದ ತೂಕ ಇಳಿಸಲು ಬಯಸುವವರು, ಪ್ರತಿದಿನ ಮಿತವಾಗಿ, ಒಂದೆರಡು ಬಾರಿ ಬ್ಲ್ಯಾಕ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು .