ಕೊಪ್ಪಳ: ಟಿಪ್ಪುವನ್ನು ಪ್ರೀತಿಸುವ ಜನರು ಇಲ್ಲಿ ಉಳಿಯಬಾರದು. ಭಗವಾನ್ ರಾಮನ ಭಜನೆಗಳನ್ನು ಹಾಡುವ ಮತ್ತು ಭಗವಾನ್ ಹನುಮಂತನನ್ನು ಆಚರಿಸುವ ಜನರು ಮಾತ್ರ ಇಲ್ಲಿ ವಾಸಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಕಟೀಲ್, ಶ್ರೀರಾಮ ಮತ್ತು ಹನುಮಂತನ ಭಕ್ತರು. ನಮ್ಮದು ಟಿಪ್ಪುವಿನ ಸಂತತಿಯಲ್ಲ. ಅವರ ವಂಶಸ್ಥರನ್ನು ನಾವು ವಾಪಸ್ ಕಳುಹಿಸುತ್ತೇವೆ ಎಂದರು.
ಈ ರಾಜ್ಯಕ್ಕೆ ಟಿಪ್ಪು ಸಂತಾನ ಬೇಕಾ? ಅಥವಾ ಹನುಮಂತ, ಶ್ರೀರಾಮನ ಭಕ್ತರು ಬೇಕಾ? ಎಂಬ ಯೋಚನೆ ಮಾಡಿ ಯಲಬುರ್ಗಾ ಜನರನ್ನು ಕೇಳುತ್ತೇನೆ ಎಂದರು.
ಬಿಜೆಪಿಗೆ ಹನುಮಮಾಲೆ, ದತ್ತಮಾಲೆ ಮೇಲೆ ನಂಬಿಕೆ ಇದೆ. ಆದರೆ ಕಾಂಗ್ರೆಸ್’ಗೆ ಟಿಪ್ಪು ಮಾಲೆ ಮೇಲೆ ನಂಬಿಕೆ ಇದೆ. ರಾಜ್ಯದ ಬೇರೆಡೆಯಂತೆ ಯಲಬುರ್ಗಾ ಕ್ಷೇತ್ರವೂ ಕಾಂಗ್ರೆಸ್ ಮುಕ್ತ ಆಗುತ್ತದೆ ಎಂದು ತಿಳಿಸಿದರು.