ಮನೆ ವ್ಯಕ್ತಿತ್ವ ವಿಕಸನ ವ್ಯಕ್ತಿತ್ವ ವಿಕಾಸ ತರಬೇತಿ

ವ್ಯಕ್ತಿತ್ವ ವಿಕಾಸ ತರಬೇತಿ

0

     ಪರ್ಸನಾಲಿಟಿ ಡೇವಲಪ್ ಮೆಂಟ್ ವ್ಯಕ್ತಿತ್ವ ವಿಕಾಸ ತರಬೇತಿ ಎಂಬ ಮಾತುಗಳು ಇತ್ತೀಚೆಗೆ ಹೆಚ್ಚು ಪ್ರಚಾರದಲ್ಲಿದೆ. ಸಮಾವೇಶ ಗಳಿಗೆ, ಸೆಮಿನಾರ್ ಗಳಿಗೆ ಮಕ್ಕಳು, ದೊಡ್ಡವರು ಅತ್ಯಧಿಕಾ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬದಲಾವಣೆ. ವ್ಯಕ್ತಿತ್ವ ವಿಕಾಸಕ್ಕೆ ಎಲ್ಲರೂ ಶ್ರಮವಹಿಸುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಇದು ಅಗತ್ಯವಿರಲಿಲ್ಲ ಆ ದಿನಗಳಲ್ಲಿ ಗ್ರಾಮೀಣ ವಿಕಾಸಕಾಗಿ ಎಲ್ಲರೂ ಕೃಷಿ ಮಾಡುತ್ತಿದ್ದರು.ನಿಸ್ವಾರ್ಥ ಮನೋಭಾವದಿಂದ ಎಲ್ಲರೂ ಕೆಲಸ ಮಾಡುತ್ತಿದ್ದರಿಂದ ವೈಯಕ್ತಿಕ ಸಮಸ್ಯೆಗಳಿರಲಿಲ್ಲ. ದೊಡ್ಡವರು ಹೇಳಿದ ಹಾಗೆ ಚಿಕ್ಕವರು ಕೇಳುತ್ತಿದ್ದರು ಮರು ಮಾತನಾಡದೆ ನಡೆದುಕೊಳ್ಳುತ್ತಿದ್ದರು.

Join Our Whatsapp Group

     ದಿನಗಳು ಬದಲಾಗಿವೆ.ಅವಿಭಕ್ತ ಕುಟುಂಬಗಳು ಮಾಯವಾಗಿ ಸಣ್ಣ ಸಣ್ಣ ಕುಟುಂಬಗಳಾಗಿ ರೂಪುಗೊಳ್ಳುತ್ತಿವೆ. ಸಲಹೆಯನ್ನು ಕೊಡುತ್ತಿದ್ದ ಹಿರಿಯರೆಂದರೆ ನಿರ್ಲಕ್ಷ್ಯ  ಅವರು ವೃದಾಶ್ರಮದ ಪಾಲಾಗುತ್ತಿದ್ದಾರೆ.ಹೀಗಾಗಿ ಇಂದಿನ ಯುವಜನತೆಗೆ ಸಲಹೆ ನೀಡುವವರೇ ಇಲ್ಲದಂತಾಗಿದೆ. ಶಾಲೆಗಳಲ್ಲಿ ಸಿಲಬಸ್ ಹೆಚ್ಚಾಗಿರುವುದರಿಂದ  ಅಲ್ಲೂ ಕೂಡಾ ಗೈಡ್ ಮಾಡುವವರಿಲ್ಲ ಆದ್ದರಿಂದ ಪ್ರತಿ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ತಾನೇ ಸರಿಪಡಿಸಿಕೊಳ್ಳಬೇಕು. ಹಿರಿಯರ ಮುಂದೆ ತಮ್ಮತನವನ್ನು ಸರಿಪಡಿಸಿಕೊಂಡು

ನಂತರ ತಮ್ಮ ಮಕ್ಕಳಿಗೆ ವ್ಯಕ್ತಿತ್ವ ವಿಕಾಸ ಕುರಿತಂತೆ ಕಳಿಸಬೇಕು.

     ವ್ಯಕ್ತಿತ್ವ ವಿಕಾಸದಲ್ಲಿ ಮೊದಲಿಗೆ ಮಕ್ಕಳಿಗೆ ಆತ್ಮವಿಶ್ವಾಸ ಹಾಗೂ ಸ್ವಯಂ ಗೌರವ ಕುರಿತಂತೆ ಕಲಿಸಬೇಕು.ಎಲ್ಲಾ ಮಕ್ಕಳೂ ಇದನ್ನು ಬೆಳೆಸಿಕೊಳ್ಳಬೇಕು.ತಾಯಿ ತಂದೆಯರು ಮಕ್ಕಳೊಂದಿಗೆ ಚೆನ್ನಾಗಿ ಸಂವೇದಿಸುತ್ತ ಅವರನ್ನು ಉತ್ತಮ ಸಂವೇದಕರಾಗಿ ಮಾಡಬೇಕು.ಗಿಡವಾಗಿ ಬಗ್ಗದ್ದು ಮರವಾಗಿ ಬಗುವುದೇ ಎಂಬುದು ನಾಣ್ನುಡಿ ಈಗ ಸಸ್ಯಗಳನ್ನು ಬಗ್ಗಿಸಬಹುದು. ಹೇಗಾದರೂ  ಆಗಲಿ ಸೂಕ್ತ ಪ್ರಯತ್ನ ಮಾಡಬೇಕು. ಅದಕ್ಕಿರುವ  ಒಂದೇ ಮಾರ್ಗವೆಂದರೆ ಮಕ್ಕಳೊಂದಿಗೆ ಅಧಿಕ ಸಮಯವನ್ನು ಕಳೆಯುವುದು ಫ್ಯಾಮಿಲಿ ಮಿಟ್ಸ್ ಇರಬೇಕು. ಮಕ್ಕಳು ಮಾತನಾಡುವುದನ್ನು ಮಧ್ಯದಲ್ಲಿ ಅಡ್ಡಿಪಡಿಸದೆ ಕೇಳಬೇಕು. ಹೇಳುವುದನ್ನು ಕಡಿಮೆ ಮಾಡಿ ಹೆಚ್ಚಾಗಿ ಕೇಳಿಸಿಕೊಳ್ಳಬೇಕು.ಹೇಳುವುದನ್ನು ಮಾಡಬಹುದಾದ್ದನ್ನು ಹೇಳಬೇಕು.ಗೊತ್ತಿಲ್ಲದ ವಿಷಯಗಳ ಮೇಲೆ ಅಗತ್ಯದ ಚರ್ಚೆ ಮಾಡದೆ ಸಂಪೂರ್ಣ ತಿಳಿದುಕೊಂಡು ಹೇಳಬೇಕು.

 ಮಕ್ಕಳಲ್ಲಿ ಆತ್ಮ ಗೌರವವನ್ನು ಬೆಳೆಸಿ :

        ನಮ್ಮ ಬಗ್ಗೆ ನಾವೆಂದು ಕೊಳ್ಳುತ್ತಿದ್ದೆವೆಯೋ, ಅವನ್ನು ಸ್ವಯಂಭಾವನೆ ಎನ್ನುತ್ತಾರೆ. ಈ ಭಾವನೆಯು ಪಾಸಿಟಿವ್ ಅಥವಾ ನೆಗೆಟಿವ್ ಆಗಿರಬಹುದು. ಈ ಬಗೆಯ ಭಾವನೆ ನಮ್ಮಲ್ಲಿ ಮೂಡಲು ಹೆತ್ತವರು ಕೂಡ ಸ್ವಲ್ಪ ಮಟ್ಟಿಗೆ ಕಾರಣ.

 “ನಾನು ಯಾವ ಕೆಲಸಕ್ಕೂ ಬಾರದವನು”

 “ನಾನಂದುಕೊಂಡ ಯಾವುದನ್ನು ಸಾಧಿಸಲಾರೆ ”

 “ನನಗೆ ಸೈನ್ಸ್ ನಲ್ಲಿ ಉತ್ತಮ ಅಂಕಗಳು ಬರುವುದಿಲ್ಲ”

 “ನನಗೆ ಇಂಗ್ಲಿಷ್ ಬರುವುದಿಲ್ಲ ”

 “ನನ್ನೊಂದಿಗೆ ಯಾರು ಸ್ನೇಹವನ್ನು ಬಯಸಲು”

 “ನನ್ನ ತಮ್ಮನಷ್ಟು ಸ್ಮಾರ್ಟ್ ಅಲ್ಲ”

 “ನಾನೆಷ್ಟೇ ಓದಿದರೂ ತಲೆಗೆ ಹತ್ತುವುದಿಲ್ಲ”

 “ನಾನು ಅಂದವಾಗಿಲ್ಲ, ಕುರೂಪಿ”

 “ಮುಖ್ಯವಾಗಿ ನನ್ನ ಹೆಸರೇ ನನಗೆ ಇಷ್ಟವಾಗುತ್ತಿಲ್ಲ ”

       ಇಂತಹ ನೆಗೆಟಿವ್ ಸೆಂಮಜೇಷನ್ಸ್  ಬಗ್ಗೆ ಯೋಚಿಸುವ ಮಕ್ಕಳನ್ನು ನಾವು ಪ್ರತಿ ಶಾಲೆಯಲ್ಲೂ ನೋಡುತ್ತಿರುತ್ತೇವೆ. ಮಕ್ಕಳು ತಮ್ಮ ಬಾಹ್ಯ ಸ್ವರೂಪ ಕುರಿತು,ಬುದ್ಧಿ,ಜಾಗಳಣ್ಮೆಗಳ ಕುರಿತು ಕೀಳಾಗಿ ಭಾವಿಸುವುದು ಸಹಜ.ಇಂತಹ ಸಮಯದಲ್ಲಿ ಅವರಿಗೆ ಸಮಾಜ ಸಹಾಯಹಸ್ತ ನೀಡದಿರಬಹುದು,ಟೀಚರ್ ಗಳಿಗೆ ಬಿಡುವಿಲ್ಲದಿರಬಹುದು ಆದ್ದರಿಂದ ತಾಯಿ ತಂದೆಯರು ಅಥವಾ ಪೋಷಕರು ಈ ಜವಾಬ್ದಾರಿಯಿಂದ ಮಕ್ಕಳನ್ನು ಪಾಜಿಟಿವ್ ಆಗಿ ಯೋಚಿಸುವಂತೆ ಮಾಡಬೇಕು. ಓದಿನಲ್ಲಿ ಹಾಗೂ ಇತರ ವಿಷಯಗಳಲ್ಲಿ ವೈಫಲ್ಯಗಳನ್ನು ಎದುರಾದರೆ ನಿರಾಸೆ ಹೊಂದಬೇಡಿಯೆಂದು ಹೇಳಬೇಕು. ಸೋಲು ವೈಫಲ್ಯ ಕೂಡಾ ಗೆಲುವಿನ ಒಂದು ಭಾಗವೆಂದು ತಿಳಿ ಹೇಳಬೇಕು. ಪ್ರಖ್ಯಾತ ಸೈಂಟಿಸ್ಟ್ ಗಳು ಕೂಡಾ ಪ್ರಾರಂಭದ ತಮ್ಮ ಪ್ರಯೋಗಗಳಲ್ಲಿ ಮೊದ ಮೊದಲಿಗೆ ಭಾರಿ ಸೋಲುಗಳನ್ನು ಅನುಭವಿಸಿದರೆಂದು ಹೇಳಬೇಕು.

        ವಿಕ್ಕಿ,ಮಿಕ್ಕಿ ಎಂಬ ಹುಡುಗಿಯರು ಬಾಲ್ಯದಿಂದಲೇ ಸಹಪಾಠಿಗಳು ಅರ್ಥ ವಾರ್ಷಿಕ ಪರೀಕ್ಷೆಗಳಲ್ಲಿ ವಿಕ್ಕಿಗೆ ಮ್ಯಿಥ್ಸ್ ನಲ್ಲಿ 80ರಷ್ಟು  ಅಂಕಗಳು ಪಡೆದ ಆಕೆ ಗೋಳೋ ಎಂದು ಅಳಲಾರಂಭಿಸಿದಳು. “ಛೀ… ಛೀ.. ಇಷ್ಟೊಂದು ಕಡಿಮೆ ಅಂಕಗಳೇ?  ನಾನಿನ್ನು ಮುಂದಕ್ಕೆ ಓದಲಾರೆ.ಯಾವ ಮುಖವನ್ನಿ ಟ್ಟುಕೊಂಡು ಈ ಅಂಗಗಳನ್ನು ಅಪ್ಪ ಅಮ್ಮನಿಗೆ ತೋರಿಸಲಿ? ನಮ್ಮ ಟೀಚರ್ ಗಳು ಕೂಡಾ ನನ್ನನ್ನು ಕೀಳಾಗಿ ನೋಡುತ್ತಾರೆ ”ಎಂದು ಒಳಗೊಳಗೆ ಕೊರಗಿದಳು. ಮಿಕ್ಕಿ ಎಂಬ ಹುಡುಗಿಯು ಕೂಡಾ 80 ಅಂಕಗಳನ್ನು ಪಡೆದವಳು. ಆಕೆ ಅತ್ಯಂತ ಆನಂದದಿಂದ ಅಬ್ಬಾ, ನನಗೆ 80 ಅಂಕಗಳು ಬಂದಿವೆ ಅಂದರೆ ನೂರಕ್ಕೆ 20 ಕಡಿಮೆ.ನಾನು ಅದೆಷ್ಟು “ಅದೃಷ್ಟವಂತೆ!ನಾನು ಹಿಂಗೇ ಓದಿದರೆ ನನಗೆ ರಾಂಕ್  ಗ್ಯಾರಂಟಿ ರ್‍ಯಾಂಕ್ ಬರದಿದ್ದರೂ ನನಗೆ ಬೇಕಾದ ಕೋರ್ಸ್ ನಲ್ಲಿ ಸೀಟು ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವನೆ ಇತ್ತು.

         ನೋಡಿದಿರಾ, ಎಷ್ಟು ವ್ಯತ್ಯಾಸ ! ಒಂದೇ ರೀತಿಯ ಅಂಕಗಳನ್ನು ಗಳಿಸಿದವರ ಪ್ರತಿಕ್ರಿಯೆ ನಂತರ ಹುಡುಗಿಯರಿಬ್ಬರೂ ಅಂದುಕೊಂಡ ಹಾಗೆಯೇ ಮೆಡಿಕಲ್ ಕಾಲೇಜಿಗೆ ಸೇರಿದರು. ವಿಕ್ಕಿ ಮಾತ್ರ ಅಂಕಗಳು ಕಡಿಮೆ ಬಂದಾಗಲೆಲ್ಲಾ ಅಳುವುದು, ಮಿಕ್ಕಿ ಪಾಸಾಗಿದ್ದಕ್ಕಾಗಿ ಸಂತೋಷಪಡುವುದು ನಡೆಯುತ್ತಲೇ ಬಂದಿತು. ಅಂದರೆ ವಿಧಿ ವಿಚಿತ್ರ ಒಂದು ಬಾರಿ ವಿಕ್ಕಿಗೆ ಒಂದು ಇಂಟರ್ನಲ್ ಪರೀಕ್ಷೆಯಲ್ಲಿ ಬಹಳ ಕಡಿಮೆ ಅಂಕಗಳು ಬಂದಿದ್ದರಿಂದ ಮಾನಸಿಕವಾಗಿ ಖಿನ್ನಳಾಗಿ ಕಾಲೇಜು ಬಿಲ್ಡಿಂಗ್ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು.ಕಾರಣವನ್ನರಿಯದ ಸಮಾಜ ಪ್ರೇಮ ವ್ಯವಹಾರದ ಬಣ್ಣ ಬೆಳೆದು ಬೆಳೆದು ಸುಮ್ಮನಾಯಿತು ಪತ್ರಿಕೆಗಳು ಕೂಡಾ ಅದೇ ಅನುಮಾನಗಳನ್ನು ವ್ಯಕ್ತಪಡಿಸಿದವು. ಮಿಕ್ಕಿ ಮಾತ್ರ ಅನುತ್ತೀರ್ಣಳಾಗದೆ ಪ್ರತಿವರ್ಷ ಪಾಸಾಗಿ ಅನಂತರ ಪಿ.ಜಿ ಮಾಡಿ ಈಗ ಒಬ್ಬ ಕ್ಯಾತ ಡಾಕ್ಟರಾಗಿ ಪ್ರಸಿದ್ಧಳಾಗಿದ್ದಾಳೆ.