ಮನೆ ವ್ಯಕ್ತಿತ್ವ ವಿಕಸನ ವ್ಯಕ್ತಿತ್ವದ ಸಾಧನಗಳು

ವ್ಯಕ್ತಿತ್ವದ ಸಾಧನಗಳು

0

ವ್ಯಕ್ತಿತ್ವ ಅಂದರೆ ಏನು ಎಂಬ ಪ್ರಶ್ನೆಗೆ ಐಸೆಂಕ್ ಎಂಬ ವಿದ್ವಾಂಸರು ನೀಡುವ ಉತ್ತರವು ಹೀಗಿದೆ : ವ್ಯಕ್ತಿಯು ಪರಿಸರದೊಂದಿಗೆ ಸಾಧಿಸುವ ವಿಶಿಷ್ಟ ರೀತಿಯ ಹೊಂದಾಣಿಕೆಯನ್ನು ನಿರ್ಧರಿಸುವ ವ್ಯಕ್ತಿಯ ಚಾರಿತ್ರ್ಯ ಮನಃಸ್ಥಿತಿ,ಬುದ್ಧಿಶಕ್ತಿ,, ದೇಹ ದಾರ್ಢ್ಯತೆ ಮುಂತಾದ ಗುಣಗಳ ಸಾಪೇಕ್ಷೆ ಹಾಗೂ ಬಹುಮಟ್ಟಿಗೆ ಸ್ಥಿರವಾದ ಸಂಘಟನೆಯೇ ವ್ಯಕ್ತಿತ್ವ ಐಸೆಂಕ್ ಅವರ ವ್ಯಾಖ್ಯೆಯಲ್ಲಿ ಗಮನಿಸಬೇಕಾದ ಬಹುಮುಖ್ಯ  ಅಂಶವೆಂದರೆ ವ್ಯಕ್ತಿತ್ವವು ಅನೇಕ ಗುಣಗಳಿಂದ ಒಟ್ಟಾಗಿ ಸಂಘಟಿಸಲ್ಪಟ್ಟಿದ್ದಾಗಿದೆ ಎನ್ನುವುದು. ವ್ಯಕ್ತಿತ್ವವು ಲಕ್ಷಣಗಳು ಕೂಡ ಈ ಅಂಶಗಳನ್ನೇ ಹೇಳುತ್ತದೆ. ವ್ಯಕ್ತಿತ್ವದ  ಪ್ರಮುಖ ಲಕ್ಷಣಗಳಾದ ಅನುವಂಶೀಯಂತೆ, ಈ ಪರಿಸರ ಮತ್ತು ಸ್ವಂತಿಕೆ ಅಂಶಗಳೆಲ್ಲವೂ ವ್ಯಕ್ತಿತ್ವದ ಮೇಲೆ ಪ್ರಭಾವವನ್ನುಂಟುಮಾಡುತ್ತವೆ. ವ್ಯಕ್ತಿತ್ವದಲ್ಲಿ ನಿರಂತರವಾಗಿ ಬದಲಾವಣೆ ಮತ್ತುಞಞ ಪರಿಷ್ಕರಣೆಗಳಿವೆ ಒಳಗಾಗುವ ಅನೇಕ ಸಂಗತಿಗಳಿರುತ್ತವೆ. ಈ ರೀತಿ ಪರಿಷ್ಕ್ರತಗೊಳ್ಳುವ ಅನೇಕ ಅಂಶಗಳು  ಇದ್ದರೂ ಕೂಡ ವ್ಯಕ್ತಿತ್ವವು ಸ್ಥಿರವಾಗಿರುವ ಅನೇಕ ಗುಣ ಲಕ್ಷಣಗಳು ಹೊಂದಿರುತ್ತದೆ.  ಇದನ್ನು ಕೂಡ ವ್ಯಕ್ತಿತ್ವವು ಸ್ಥಿರವಾಗಿರುವ ಅನೇಕ ಗುಣಲಕ್ಷಣಗಳನ್ನು ಹೊಂದಿರುತ್ತದೆ ಇದನ್ನು ನೀವು ಒಂದು ಪುಟ್ಟ ಮಗುವಿಗೆ ಮಾಡುವ ಅಲಂಕಾರಕ್ಕೆ ಹೋಲಿಸಬಹುದು.ಒಂದೊಂದು ದಿವಸ ಒಂದೊಂದು ಬಗೆಯ ಉಡುಪುಗಳನ್ನು ತೊಡಿಸುತ್ತೀರಿ ತಲೆಗೂದಲಿನ ವಿನ್ಯಾಸವನ್ನು ಬದಲಾಯಿಸುತ್ತಿರುತ್ತೀರಿ. ಆದರೆ ಮಗು ಮಾತ್ರ ಅದೇ ಆಗಿರುತ್ತದೆ. ವ್ಯಕ್ತಿತ್ವದಲ್ಲಿ ಸ್ಥಿರವಾಗಿರಲು ಅಂಶವನ್ನು ಮಗುವೆಂದೂ, ಪರಿಷ್ಕೃತಗೊಳ್ಳುವ ಅಂಶಗಳನ್ನು ಅಲಂಕಾರವೆಂದೂ ಅರ್ಥ ಮಾಡಿಕೊಳ್ಳಬಹುದು. ವ್ಯಕ್ತಿತ್ವಕ್ಕೆ ಬಹುಮುಖತೆ ಇರುತ್ತದೆ. ವ್ಯಕ್ತಿತ್ವವು ವಿಕಾಸದ ಪ್ರಕ್ರಿಯೆಯೊಂದಿಗೆ ತನ್ನ ಸ್ವರೂಪವನ್ನು ಬದಲಾಯಿಸುತ್ತದೆ.

Join Our Whatsapp Group

 ಯೌವನದ ವ್ಯಕ್ತಿತ್ವಕೂ ವೃದ್ಧಾಪ್ಯದ ವ್ಯಕ್ತಿತ್ವಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸಿದರೆ ಈ ವಿಚಾರವು ಅರ್ಥವಾಗುತ್ತದೆ.ನಿರ್ಧಿಷ್ಟವಾದ ಉದ್ದೇಶ  ಇಟ್ಟುಕೊಳ್ಳದೆ ಇದ್ದರೂ,ವ್ಯಕ್ತಿತ್ವಕ್ಕಾಗಿ ಯಾವ ಪ್ರಯತ್ನವನ್ನೂ ಮಾಡದೆ ಇದ್ದರೂ ಒಂದು ವ್ಯಕ್ತಿತ್ವವು ರೂಪು ಗೊಳ್ಳುತ್ತದೆ.ಹಾಗೆಯೇ ಪ್ರಯತ್ನ ಪೂರ್ವಕ ಸಾಧನೆಯಿಂದಲೂ ನಮಗೆ ಬೇಕಾದ ವ್ಯಕ್ತಿತ್ವವನ್ನುಗಳಿಸಿಕೊಳ್ಳಬಹುದಾಗಿದೆ. ವ್ಯಕ್ತಿತ್ವದ ನಿರ್ಮಾಣದಲ್ಲಿ ದೈಹಿಕ,ಭೌದ್ಧಿಕ ಭಾವನಾತ್ಮಕ ಅಂಶಗಳೆಲ್ಲವೂ ಕಾರ್ಯ ನಿರ್ವಹಿಸುತ್ತವೆ. ವ್ಯಕ್ತಿತ್ವಕ್ಕೆ ತೀರಾ ಸರಳವಾದ ಗುಣ ಸ್ವಭಾವಗಳೂ, ಬಹಳ ಸಂಕೀರ್ಣವಾದ ಗುಣ ಸ್ವಭಾವಗಳಿಗೂ ಇರುತ್ತವೆ. ವ್ಯಕ್ತಿತ್ವದ ನಿರ್ಮಾಣದಲ್ಲಿ ಒಬ್ಬ ವ್ಯಕ್ತಿಯ ಧೈರ್ಯಗಳು, ಆದರ್ಶಗಳು ಮೌಲ್ಯಗಳು ಮತ್ತು ಪ್ರೇರಣೆಗಳು ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

    ಈ ಲಕ್ಷಣಗಳನ್ನೆಲ್ಲ ನಾವೇಕ ಅರ್ಥ ಮಾಡಿಕೊಳ್ಳಬೇಕೆಂದರೆ ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಲು ಸಹಾಯಕವಾಗುವ ವ್ಯಕ್ತಿತ್ವದ ಲಕ್ಷಣಗಳನ್ನು ತಿಳಿದುಕೊಳ್ಳುವುದಕ್ಕಾಗಿ.ಯದ್ ಭಾವಂ ತದ್ ಭವತಿ ಎಂಬ ಸಂಸ್ಕೃತ ಮಾತು ಇದೆ. ನಮ್ಮ ಧೈರ್ಯ ಏನು,ನಮ್ಮ ಗುರಿ ಏನು,ನಮ್ಮ ಆದರ್ಶ ಗಳೇನು ; ಅದಕ್ಕಾಗಿ ನಾವು ತುಳಿಯುವ ದಾರಿ ಯಾವುದು ಎಂಬುದು ನಮ್ಮ ಧೈರ್ಯವನ್ನು ಸಾಧಿಸುವುದಕಷ್ಟೇ ಅಲ್ಲ; ನಮ್ಮ ವ್ಯಕ್ತಿತ್ವವು ರೂಪುಗೊಳ್ಳುವುದಕ್ಕೂ ಕಾರಣವಾಗುತ್ತವೆ. ಯಾಕೆಂದರೆ ಈ ಆಯ್ಕೆಗಳು ಪರಿಸರದೊಂದಿಗೆ ನಮ್ಮ ಮುಖಾಮುಖಿಯನ್ನು ಉಂಟುಮಾಡುತ್ತವೆ ಈ ಮುಖಾಮುಖಿಯಲ್ಲೆ ವ್ಯಕ್ತಿತ್ವವು ರೂಪಗೊಳ್ಳುತ್ತದೆ.