ಮನೆ ಸುದ್ದಿ ಜಾಲ ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಸಿಗರೇಟ್ ವ್ಯಾಪಾರ ಸ್ಥಗಿತಗೊಳಿಸಲು ಒತ್ತಾಯಿಸಿ ನಗರ ಪೊಲೀಸ್ ಆಯುಕ್ತರಿಗೆ ಮನವಿ

ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಸಿಗರೇಟ್ ವ್ಯಾಪಾರ ಸ್ಥಗಿತಗೊಳಿಸಲು ಒತ್ತಾಯಿಸಿ ನಗರ ಪೊಲೀಸ್ ಆಯುಕ್ತರಿಗೆ ಮನವಿ

0

ಮೈಸೂರು(Mysuru): ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ವ್ಯಸನಕ್ಕೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜಿನ ಆವರಣದಲ್ಲಿ ಅಪ್ರಾಪ್ತರಿಗೆ ದ್ವಿಚಕ್ರವಾಹನ ಮೊಬೈಲ್’ಗೆ ಅವಕಾಶ ನೀಡದಂತೆ ಹಾಗೂ ಶಾಲಾ ಕಾಲೇಜಿನ ಸುತ್ತಮುತ್ತಲು ಸಿಗರೇಟ್ ವ್ಯಾಪಾರ  ಸ್ಥಗಿತಗೊಳಿಸಬೇಕೆಂದು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರಿಗೆ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.

ಕೆಲವು ಕಿಡಿಗೇಡಿಗಳು ಮಾದಕ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ವ್ಯಸನಿಗಳನ್ನಾಗಿ ಮಾಡುವ ದಂಧೆ ಹೆಚ್ಚಾಗಿ ನಡೆಯುತ್ತಿದ್ದು, ಮುಂದಿನ ಭವಿಷ್ಯದ ವಾರಸುದಾರರಾದ ಯುವ ಪೀಳಿಗೆಗಳಿಗೆ ಗಾಂಜ, ಅಫೀಮ್ ನಂತಹ ನಶೆ ಹತ್ತಿಸುವ ಕೃತ್ಯ ನಡೆಯುತ್ತಿದ್ದು, ಅವರಲ್ಲಿರುವ ಕ್ರಿಯಾಶೀಲತೆಯನ್ನು ಕಳೆದುಕೊಂಡು ಜಗತ್ತಿನ ಪರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. 

ಶ್ರೀಮಂತ ಮನೆತನದ ವಿದ್ಯಾರ್ಥಿಗಳ ಹಾದಿಯಾಗಿ ಈ ರೀತಿಯ ಹೀನ ಕೃತ್ಯಗಳು ಬಡ ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೂ  ತಲುಪಿಸುವ ಷಡ್ಯಂತ್ರ ನಡೆಯುತ್ತಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಇಡೀ ವಿಶ್ವದಲ್ಲಿ ಪ್ರವಾಸ ಮತ್ತು ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾಗಿದ್ದು, ದೇಶ ವಿದೇಶಗಳಿಂದ ರಾಜ್ಯ ಹೊರರಾಜ್ಯಗಳಿಂದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಬಂದು ನೆಲೆಸಿರುವುದು ಸಂತಸದ ಸಂಗತಿ. ಆದರೆ ಕೆಲವು ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಈ ರೀತಿಯ ಮಾದಕವಸ್ತುಗಳ ಮಾರಾಟ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮುಖಾಂತರ ಜಗತ್ಜಾಹೀರಾಗಿದ್ದು ಇದಕ್ಕೆ ಬಲಿಯಾಗುತ್ತಿರುವ ಅಮಾಯಕ ವಿದ್ಯಾರ್ಥಿಗಳ  ಭವಿಷ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಸದೃಢಗೊಳ್ಳಬೇಕಿದೆ.

ಈ ರೀತಿಯ ಅಮಾನವೀಯ ಕೃತ್ಯವನ್ನು (ದಂಧೆಯನ್ನು) ನಡೆಸುತ್ತಿರುವ ನೀಚರನ್ನು ಬಂಧಿಸಿ ಇದರಲ್ಲಿ ಭಾಗಿಯಾಗಿರುವ ಯುವಸಮುದಾಯವನ್ನು ಎಚ್ಚರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ಗೌರವಧ್ಯಕ್ಷ  ಎಂ. ಚಂದ್ರಶೇಖರ್, ಪ್ರಧಾನ ಸಂಚಾಲಕರಾದ ಕಮಲ ಅನಂತರಾಮು, ಅರವಿಂದ ಶರ್ಮ, ರದಿವುಲ್ಲ ಖಾನ್, ಮಾಜಿ ಮಹಾಪೌರರಾದ ಪುರುಷೋತ್ತಮ್, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಪ್ರಶಾಂತ್ ಆರ್ಯ, ಪ್ರಗತಿಪರ ಹೋರಾಟಗಾರರು ದ್ಯಾವಪ್ಪ ನಾಯ್ಕ, ಸಮಾಜಪರ  ಚಿಂತಕ ಶಿವಪ್ಪ ಇದ್ದರು.