ಮನೆ ರಾಷ್ಟ್ರೀಯ ಕೋವಿಶೀಲ್ಡ್ ಲಸಿಕೆಯ ಅಪಾಯಕಾರಿ ಅಂಶ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ಸುಪ್ರೀಂಗೆ ಅರ್ಜಿ

ಕೋವಿಶೀಲ್ಡ್ ಲಸಿಕೆಯ ಅಪಾಯಕಾರಿ ಅಂಶ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ಸುಪ್ರೀಂಗೆ ಅರ್ಜಿ

0

ಕೋವಿಶೀಲ್ಡ್ ಲಸಿಕೆಯನ್ನು ಅಧ್ಯಯನ ಮಾಡಲು ಮತ್ತು ಅದರ ಅಡ್ಡಪರಿಣಾಮಗಳು, ಅಪಾಯಕಾರಿ ಅಂಶಗಳನ್ನು ಪರಿಶೀಲಿಸಲು ದೆಹಲಿಯ ಏಮ್ಸ್‌ನಿಂದ ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮಾಜಿ ಮುಖ್ಯ ನ್ಯಾಯಮೂರ್ತಿಗಳು ಅಧ್ಯಯನದ ಮೇಲ್ವಿಚಾರಣೆ ಮಾಡಲು ಅರ್ಜಿದಾರರು ಕೋರಿದ್ದಾರೆ. ಕೋವಿಡ್ 19 ರ ಸಮಯದಲ್ಲಿ ನೀಡಲಾದ ವ್ಯಾಕ್ಸಿನೇಷನ್​​ನಿಂದ ಯಾರಾದರೂ ಅಂಗವಿಕಲರಾಗಿದ್ದಾರೆ ಹಾಗೂ ಇದರಿಂದ ಮರಣ ಹೊಂದಿದ್ದರೆ ಅವರಿಗೆ ಕೇಂದ್ರ ಸರ್ಕಾರ ಪರಿಹಾರವನ್ನು ನೀಡಬೇಕು ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿದೆ. ಇದರ ಜತೆಗೆ ಕೇಂದ್ರ ಸರ್ಕಾರ ಈ ಬಗ್ಗೆ ಒಂದು ನಿರ್ದೇಶನವನ್ನು ನೀಡಬೇಕು ಎಂದು ಹೇಳಿದೆ.

Join Our Whatsapp Group

ಯುಕೆ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ ಅಸ್ಟ್ರಾಜೆನೆಕಾ ತಾನು ತಯಾರಿಸಿದ ಕೋವಿಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು. ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಇದು ಉಂಟುಮಾಡಬಹುದು ಎಂದು ಹೇಳಿ, ಇದೀಗ ಆತಂಕದ ಜತೆಗೆ ಚರ್ಚೆ ಕಾರಣವಾಗಿದೆ.

ಅಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಾಹಯದಿಂದ ಅಭಿವೃದ್ಧಿಪಡಿಸಲಾದ ಈ ಲಸಿಕೆಯು ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಉಂಟುಮಾಡಬಹುದು ಎಂದು ಲಂಡನ್ ಹೈಕೋರ್ಟ್‌ಗೆ ಸಲ್ಲಿಸಿದ ಕಾನೂನು ದಾಖಲೆಯಲ್ಲಿ ಅಸ್ಟ್ರಾಜೆನೆಕಾ ಹೇಳಿರುವುದಾಗಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ಅದೇ ಲಸಿಕೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ತಯಾರಿಸಿದೆ. ಇದನ್ನು ಭಾರತದಲ್ಲಿ ಕೋವಿಶೀಲ್ಡ್ ಎಂದು ಕರೆಯಲಾಗುತ್ತದೆ. ಇನ್ನು ಈ ಲಸಿಕೆಯನ್ನು ತೆಗೆದುಕೊಂಡು ಸಾವನ್ನಪ್ಪಿದ ಮಹಿಳೆಯ ಪೋಷಕರು SII ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಲಸಿಕೆ ಬಹಳ ಅಪರೂಪದ ಸಂದರ್ಭಗಳಲ್ಲಿ TTS ಗೆ ಕಾರಣವಾಗಬಹುದು ಎಂದು ಒಪ್ಪಿಕೊಳ್ಳಲಾಗಿದೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಅಸ್ಟ್ರಾಜೆನೆಕಾ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಯಾರಿಗಾದರೂ ದುಃಖ ಇರುತ್ತದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆ ರೋಗಿಗೆ ಈ ಲಸಿಕೆ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬ ಬಗ್ಗೆ ಆತಂಕ ಬೇಡ. ನಮ್ಮ ರೋಗಿಗಳ ಸುರಕ್ಷತೆಯು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂದು ಹೇಳಿದೆ.