ಮನೆ ರಾಷ್ಟ್ರೀಯ ಚೆನ್ನೈನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಚೆನ್ನೈನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

0

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮುಂದುವರೆದಿದೆ. ಇದರ ಆಧಾರದ ಮೇಲೆ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರ್ಧರಿಸಲಾಗುತ್ತದೆ. ದೀರ್ಘಕಾಲದಿಂದ ರಾಷ್ಟ್ರಮಟ್ಟದಲ್ಲಿ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಕರ್ನಾಟಕ, ಗೋವಾದಲ್ಲಿ ಮಾತ್ರ ಲೋಕಸಭಾ ಚುನಾವಣೆ ಮುಗಿದ ಬಳಿಕ ಇಂಧನ ದರ ಹೆಚ್ಚಳ ಮಾಡಲಾಗಿತ್ತು.

Join Our Whatsapp Group

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ 72 ಡಾಲರ್‌ಗಿಂತ ಹೆಚ್ಚಿದೆ. ಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 72.98 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಡಬ್ಲ್ಯೂಟಿಐ ಕಚ್ಚಾತೈಲ ಪ್ರತಿ ಬ್ಯಾರೆಲ್​ಗೆ 70.18ನಂತೆ ವಹಿವಾಟು ನಡೆಸುತ್ತಿದೆ. ಇಂದು ದೇಶದ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಬೆಲೆ 87.62 ರೂ. ಆದರೆ, ಮುಂಬೈನಲ್ಲಿ ಡೀಸೆಲ್ ಬೆಲೆ 92.15 ರೂ. ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 90.76 ರೂ ಮತ್ತು ಚೆನ್ನೈನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 92.34 ರೂ. ಇದೆ.

ದೇಶದ ಅನೇಕ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಿದ್ದು, ಕೆಲವು ನಗರಗಳಲ್ಲಿ ಅವುಗಳ ಬೆಲೆ ಹೆಚ್ಚಾಗಿದೆ. ಇಂದು ಕೂಡ ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಚೆನ್ನೈನಲ್ಲಿ ಪೆಟ್ರೋಲ್ 10 ಪೈಸೆ ಮತ್ತು ಡೀಸೆಲ್ 9 ಪೈಸೆ ಹೆಚ್ಚಾಗಿದೆ.ಬೆಂಗಳೂರಿನಲ್ಲಿ ಪೆಟ್ರೋಲ್ 102.86 ರೂ., ಡೀಸೆಲ್ 88.94 ರೂ. ಇದೆ.

ಇಂಡಿಯನ್ ಆಯಿಲ್ ಸಂಖ್ಯೆ 9224992249 ಗೆ RSP ಸ್ಪೇಸ್ ಮತ್ತು ಸಿಟಿ ಪಿನ್ ಕೋಡ್ ಅನ್ನು ಸಂದೇಶ ಕಳುಹಿಸಿ. ಭಾರತ್ ಪೆಟ್ರೋಲಿಯಂ ಸಂಖ್ಯೆ 9223112222 ಗೆ RSP ಸ್ಪೇಸ್ ಮತ್ತು ಸಿಟಿ ಪಿನ್ ಕೋಡ್ ಅನ್ನು ಸಂದೇಶ ಕಳುಹಿಸಿ.