ಮನೆ ರಾಷ್ಟ್ರೀಯ ಇಂದಿನ ಪೆಟ್ರೋಲ್‌-ಡೀಸೆಲ್‌ ಬೆಲೆ: ದಕ್ಷಿಣ ಕನ್ನಡದಲ್ಲಿ ಬೆಲೆ ಏರಿಕೆ

ಇಂದಿನ ಪೆಟ್ರೋಲ್‌-ಡೀಸೆಲ್‌ ಬೆಲೆ: ದಕ್ಷಿಣ ಕನ್ನಡದಲ್ಲಿ ಬೆಲೆ ಏರಿಕೆ

0

ನವದೆಹಲಿ (New Delhi)-ಇಂದಿನ ಪ್ರೆಟ್ರೋಲ್‌, ಡೀಸೆಲ್‌ ದರ ಇಂತಿವೆ. ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಬೆಲೆ ಸದ್ಯ 101.94 ರೂ. ಮತ್ತು ಡೀಸೆಲ್ 87.89 ರೂ. ಇದೆ.

ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 96.72 ರೂ. ಇದ್ದರೆ, ಲೀಟರ್‌ ಡೀಸೆಲ್ ಬೆಲೆ 89.62 ರೂ. ಇದೆ. ಹಾಗಾಗಿ ನಿನ್ನೆಯ ದರವೇ ಇಂದು ಕೂಡ ಕೆಲವು ನಗರಗಳಲ್ಲಿ ಮುಂದುವರಿದರೆ, ಕೆಲವು ನಗರಗಳಲ್ಲಿ ಏರಿಕೆ ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರ ತಲಾ 12 ಪೈಸೆ ಏರಿಕೆ ಆಗಿದೆ.

ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಮೇ 22 ರಿಂದ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 8 ರೂ., ಡೀಸೆಲ್‌ ದರ ಪ್ರತಿ ಲೀಟರ್‌ ಮೇಲೆ 6 ರೂ. ಕಡಿಮೆಯಾಗಿದೆ. ಆ ಬಳಿಕ ಕೆಲವೆಡೆ ಪೈಸೆ ಲೆಕ್ಕದಲ್ಲಿ ಮತ್ತೆ ಬೆಲೆ ಏರಿಕೆ ಇಳಿಕೆ ಆಗುತ್ತಲೇ ಇದೆ. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ಬೆಲೆ ವಿವರ ಇಲ್ಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ:

ನವದೆಹಲಿಯಲ್ಲಿ ಪೆಟ್ರೋಲ್: 96.72 ರೂ., ಡೀಸೆಲ್: 89.62 ರೂ., ಕೋಲ್ಕೊತ್ತಾ
ಪೆಟ್ರೋಲ್ : 106.03 ರೂ., ಡೀಸೆಲ್ : 92.76 ರೂ., ಮಹಾರಾಷ್ಟ್ರ ಮುಂಬೈಯಲ್ಲಿ ಪೆಟ್ರೋಲ್ : 111.35 ರೂ. , ಡೀಸೆಲ್ : 97.28 ರೂ., ಚೆನ್ನೈನಲ್ಲಿ ಪೆಟ್ರೋಲ್ : 102.75 ರೂ., ಡೀಸೆಲ್: 94.34 ರೂ., ಬೆಂಗಳೂರಿನಲ್ಲಿ ಪೆಟ್ರೋಲ್: 101.94 ರೂ., ಡೀಸೆಲ್: 87.89 ರೂ., ದಕ್ಷಿಣ ಕನ್ನಡ ಪೆಟ್ರೋಲ್: 101.47 ರೂ., ಡೀಸೆಲ್: 87.43 ರೂ., ಧಾರವಾಡ ಪೆಟ್ರೋಲ್: 101.69 ರೂ., ಡೀಸೆಲ್ : 87.68 ರೂ. ಇದೆ.