ಮೈಸೂರು(Mysuru): ವಿವಾಹವಾಗುವುದಾಗಿ ನಂಬಿಸಿ ೫ ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿದ್ದು, ನಂತರ ಮದುವೆಗೆ ನಿರಾಕರಿಸಿದ ವ್ಯಕ್ತಿಯ ವಿರುದ್ಧ ತಲಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಿ. ನರಸೀಪುರ ತಾಲೂಕಿನ ತೊಟ್ಟವಾಡಿ ಗ್ರಾಮದ ಮಹಿಳೆಯನ್ನು ಅದೇ ಗ್ರಾಮದ ಶಿವನಾಗು ಎಂಬುವ ವ್ಯಕ್ತಿ ಕಳೆದ ೫ ವರ್ಷದಿಂದ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ. ಮಹಿಳೆ ಗರ್ಭವತಿಯಾದಾಗ ಗರ್ಭಪಾತ ಮಾಡಿಸಿ ಈಗ ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದ್ದಾನೆ. ಈ ಹಿನ್ನೆಲೆ ವ್ಯಕ್ತಿ ವಿರುದ್ಧ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ.
ಶಿವನಾಗು ಜೊತೆ ತನ್ನ ಮದುವೆ ಮಾಡಿಸಿ ಎಂದು ತಲಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜೊತೆಗೆ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.