ಮನೆ ಪ್ರವಾಸ ಪಿಲಿಕುಳ ನಿಸರ್ಗಧಾಮ

ಪಿಲಿಕುಳ ನಿಸರ್ಗಧಾಮ

0

ಪಿಲಿಕುಳ ಮಂಗಳೂರು ಮೂಡುಬಿದಿರೆ ರಸ್ತೆಯಲ್ಲಿ ೦೧-೧೨ಕಿಲೋ ಮೀಟರ್ ಹೋಗುವಾಗ ವಾಮಂಜೂರು ಎಂಬ ಸ್ಥಳ ಸಿಗುತ್ತದೆ. ಇಲ್ಲಿಂದ ಎರಡು ಕಿಲೋ ಮೀಟರ್ ಎಡಕ್ಕೆ ಹೋದರೆ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಪ್ರದೇಶ ಸಿಗುತ್ತದೆ.

Join Our Whatsapp Group

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಶ್ರೀಯುತ ಭರತ್‍‍‍‍‍‍‍‍ಲಾಲ್ ಮೀನ ಮತ್ತು ಮಂಗಳೂರಿನ ಈಗಿನ ಶಾಸಕರಾದ ಜೆ.ಆರ್.ಲೋಬೊ, ಜೈವಿಕ ಉದ್ಯಾನವನದ ನಿರ್ದೇಶಕ ಎಚ್ ಜಯಪ್ರಕಾಶ್ ಭಂಡಾರಿ, ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ.ಕೆ.ವಿ ರಾವ್ ಇವರ ಮುಖಂಡತ್ವದಲ್ಲಿ ಆಗ ಪಿಲಿಕುಳ ಎಂಬ ಹೆಸರನ್ನು ಈ ಸ್ಥಳಕ್ಕೆ ಇಟ್ಟರು.

ಪಿಲಿಕುಳ ನಿಸರ್ಗದಾಮ

ತುಳು ಸಂಸ್ಕೃತಿಯನ್ನು ಬೆಳೆಸುವ ಉಳಿಸುವ ನೆಲೆಯಲ್ಲಿ ಮಂಗಳೂರು ನಗರದಿಂದ ಹೊರವಲಯದಲ್ಲಿ ವಿಸ್ತಾರವಾದ ಪ್ರದೇಶವಾದ ವಾಮಂಜೂರಿನಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗದಾಮ ನಿಂತಿದೆ.

ಸ್ಥಳನಾಮ

ಪಿಲಿಕುಳ ಎನ್ನುವುದು ತುಳುವಿನ ಪದ (ಪಿಲಿ+ಕುಳ).ಪಿಲಿ ಎಂದರೆ ಕನ್ನಡದಲ್ಲಿ ಹುಲಿ ಎಂದು,ಕುಳ ಎಂದರೆ ಕೊಳ ಎಂಬ ಅರ್ಥವನ್ನು ನೀಡುತ್ತದೆ “ಹುಲಿಗಳ ಕೊಳ”.ಅಂದರೆ ಹಿಂದಿನ ಕಾಲದಲ್ಲಿ ಪಿಲಿಕುಳ ಎಂಬ ಸ್ಥಳವು ದಟ್ಟಾರಣ್ಯದಿಂದ ಕೂಡಿತ್ತು.ಅಲ್ಲಿ ಹುಲಿಗಳು ಯತೇಚ್ಚವಾಗಿ ಇದ್ದವು.ಹಾಗಾಗಿ ಹುಲಿಗಳು ಅಯಾಸವನ್ನು ಪರಿಹರಿಸಿಕೊಳ್ಳಲು ಆ ಕೆರೆಗೆ ಬರುತ್ತಿದ್ದವು.ಹಾಗಾಗಿ ಪಿಲಿಕುಳ ಎಂಬ ಹೆಸರು ಬಂತು.

ಕುಶಲ ಕರ್ಮಿ ಗ್ರಾಮ

ಕುಶಲಕರ್ಮಿ ಗ್ರಾಮ ಪಿಲಿಕುಳ ನಿಸರ್ಗಧಾಮ ದ ಒಂದು ಪ್ರಮುಖ ಅಂಗ. ಇಲ್ಲಿ ಅಳಿದು ಹೋಗುವ ತುಳುನಾಡಿನ ಕೃಷಿ ಪರಂಪರೆಯ ಮೂಲ ಕೆಲಸಗಳನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ನೋಡಲು ಸಾಧ್ಯ. ಈ ಗ್ರಾಮದಲ್ಲಿ ಮಡಿಕೆ ಮಾಡುವವ ಮನೆ(ಕುಂಬಾರ), ಅವಲಕ್ಕಿ ಗುದ್ದುವವರ ಮನೆ, ಮರದ ಕೆಲಸ ಮಾಡುವವರ ಮನೆ(ಬಡಗಿ), ಗಾಣದವರ ಮನೆ(ಗಾಣಿಗ), ಬೆತ್ತ ನೇಯುವವರ ಮನೆ, ಬಟ್ಟೆ ನೇಯುವವರ ಮನೆ(ನೇಕಾರ), ಕಬ್ಬಿಣದ ಆಚಾರಿಗಳ ಮನೆ(ಕಮ್ಮಾರ), ಕಲ್ಲುಕುಟ್ಟಿಗಳ ಮನೆ ಹೀಗೆ ಹಲವು ಮನೆಗಳವರು ಸಂಸಾರ ಸಮೇತ ಬದುಕುತ್ತಿದ್ದಾರೆ.

•       ನೇಕಾರಿಕೆ

•       ಬಡಿಗಾರ

•       ಎಣ್ಣೆ ಗಾಣ

•       ಅವಲಕ್ಕಿ ಕುಟ್ಟುವುದು

•       ಕಮ್ಮಾರಿಕೆ

•       ಕುಂಬಾರಿಕೆ

ಸಂಸ್ಕೃತಿ ಗ್ರಾಮ

•       ಗುತ್ತಿನ ಮನೆ

•       ಗದ್ದೆ ಬೇಸಾಯ

•       ಅಡಿಕೆ ತೋಟ

•       ಸಿರಿತುಪ್ಪೆ

•       ಭತ್ತ ಕುಟ್ಟುವ ಗುಳಿ

•       ಕಂಬಳದ ಗದ್ದೆ

ಸಸ್ಯ ಕಾಶಿ

ಅಪೂರ್ವ ಸಸ್ಯಗಳ ಸಂಗ್ರಹ ಇಲ್ಲಿದೆ.ಇಂಡೊ-ಸ್ಪೇನ್ ಸರಕಾರದ ಜಂಟಿ ಅಶ್ರಯದಲ್ಲಿ ಅಭಿವೃದ್ಧಿ ಮಾಡಲಾಯಿತು.ಪಶ್ಚಿಮ ಘಟ್ಟದಲ್ಲಿ ಅಳಿವನ ಆಂಚಿನಲ್ಲಿ ಇರುವ ಸಸ್ಯಗಳನ್ನು ಬೇಳೆಸಲಾಗುತ್ತದೆ.ಹೆಬ್ಬಲಸು,ರಾಮಪತ್ರೆ,ಜಾಯಿಕಾಯಿ,ಪುರ್ನಪುಳಿ,ಮಾವಿನ ಸ್ಥಳಿಯ ತಳಿಗಳು,ಬಾಗೆ,ಹೊನ್ನೆ,ಅಂಟುವಾಳ,ಕಾಡು ಮಡ್ಡಿ(ದೂಪ),ಕಿಲಾರ್ ಬೋಗಿ,ದರ್ಬೆ,ಕಾಡುಬಾಳೆ,ಇನ್ನು ಹಲವಾರು ಸಸ್ಯಗಳು ಇವೆ.

ಜೈವಿಕ ಉದ್ಯಾನವನ

ಪಿಲಿಕುಳ ನಿಸರ್ಗಧಾಮದಲ್ಲಿರುವ ೮೨ ಎಕರೆಗಳಷ್ಟು ವಿಸ್ತಾರವಾಗಿದೆ. ಮಲೆನಾಡು ಮತ್ತು ಸಹ್ಯಾದ್ರಿ ಬೆಟ್ಟಗಳಲ್ಲಿ ಜೀವಿಸುವ ಹಲವಾರು ಪ್ರಾಣಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಇದರ ಸಂದರ್ಶನ ಸಮಯ:ಬೆಳಗ್ಗೆ ೯:೩೦ ಇಂದ ಸಂಜೆ ೫:೩೦ರ ತನಕ. ವಾರದ ರಜೆ:ಸೋಮವಾರ

ಪಿಲಿಕುಳ ದೋಣಿವಿಹಾರ ಕೇಂದ್ರ

ಪಿಲಿಕುಳಕ್ಕೆ ಈ ಕೊಳದಿಂದಲೇ ಈಗಿನ ಹೆಸರು ಬಂದಿತು ಎಂದು ಜನರು ನಂಬುತ್ತಾರೆ. ಇಲ್ಲಿಗೆ ಮುಂಚೆ ಹುಲಿಗಳು ಭೇಟಿ ನೀಡುತ್ತಿದ್ದವಂತೆ. ಹಾಗಾಗಿ ಹುಲಿಗಳು(ಪಿಲಿ) ಭೇಟಿ ನೀಡುವ ಕೊಳ(ಕುಳ), ಪಿಲಿಕುಳ ಆಯಿತು ಎನ್ನುತ್ತಾರೆ. ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿಯ ಸಮಯದಲ್ಲಿ ಈ ಕೆರೆಯ ಹೂಳೆತ್ತಿ ಈಗಿನಂತೆ ಅಭಿವೃದ್ಧಿಪಡಿಸಲಾಗಿದೆ. ಈ ದೋಣಿವಿಹಾರ ಕೇಂದ್ರವಿರುವ ಕೆರೆ ೩೦ ಅಡಿ ಆಳವೂ, ೫ ಎಕರೆಯಷ್ಟು ವಿಸ್ತಾರವೂ ಇದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸುತ್ತಾರೆ.

ಹಿಂದಿನ ಲೇಖನಮದುವೆ ಸಮಾರಂಭದಲ್ಲೇ ವಿಷ ಸೇವಿಸಿದ ವಧು – ವರ
ಮುಂದಿನ ಲೇಖನಸಿದ್ದರಾಮಯ್ಯ ರಾಜ್ಯದ ನೂತನ ಸಿಎಂ: ಎಐಸಿಸಿಯಿಂದ ಅಧಿಕೃತ ಘೋಷಣೆ