ಕಂಭಗಳನ್ನು ನುಣುಪಾಗಿಯೂ, ನೀಟಾಗಿಯೂ ದಪ್ಪವಾಗಿಯೂ, ದಪ್ಪವಾಗಿಯೂ,ಇರುವಂತೆ ಮಾಡಿಸಬೇಕು. ಡೊಂಕಾಗಿ ಇದ್ದರೆ ಪುತ್ರ ಹಾನಿಯು, ಹಾಗೂ ಯಾವ ಬಾಗಿಲದ ಎದುರಿಗೆ ಆಗಲಿ,ಮನೆಯ ಮಧ್ಯದಲ್ಲಿ ಕಂಭವು ಇರಬಾರದು. ಇದ್ದರೆ ಅದು ಶೂಲ ಗಂಭವೆನಿಸುತ್ತದೆ. ಇದು ಪ್ರಾಣ ಹಾನಿಯನ್ನೂ ಉಂಟುಮಾಡುತ್ತದೆ.ಆದ್ದರಿಂದ, ಹೀಗೆ ಇರದಂತೆ ಕಂಭವನ್ನು ನಿಲ್ಲಿಸಬೇಕು.ಸಿಮೆಂಟಿನ ಮನೆಗೂ ಇದು ಅನ್ವಯಿಸುವುದು.
ಮನೆಯ ಅಂಕಣಗಳನ್ನು ಬೆಸ ಸಂಖ್ಯೆಯುಳ್ಳವರಿಗಳಿರಬೇಕು.ಅಂದರೆ ಮಹಾಶುಭವು ಸರಿ ಸಂಖ್ಯೆಯ ಅಂಕಣಗಳಿದ್ದರೆ ದರಿದ್ರವು, ಧನ ನಷ್ಟವು, ವಂಶ ನಾಶವು ಇತ್ಯಾದಿ, ದುಷ್ಟ ಫಲವುಂಟಾಗುವವು.
ಹರಳಾಗಿಯ ವಿಚಾರ :
ಮನೆಯ ಹರನಾಳಿಗೆಯ ನೀರು ಪೂರ್ವ ದಿಕ್ಕಿಗೆ ಹರಿದರೆ ಆರೋಗ್ಯವು.ಉತ್ತರ ದಿಕ್ಕಿಗೆ ಹರಿದರೆ ಸಂಪತ್ತು ವೃದ್ಧಿಯು. ಪಶ್ಚಿಮಕ್ಕೆ ಹರಿದರೆ ಧನ ಹಾನಿಯು ದಕ್ಷಿಣ ದಿಕ್ಕಿಗೆ ಹರಿದರೆ ಮಹಾ ಭಯವುಂಟಾಗುವುದು. ಮತ್ತು ಪರರ ಮನೆಯ ಮಾಳಿಗೆಯ ನೀರು ತಮ್ಮ ಮನೆಯ ಮಾಳಿಗೆಯ ಮೇಲೆ ಬಂದರೆ ಹಾನಿಯೂ ಮತ್ತು ಹಾಗಾಗೆ ಕಲಹಗಳು ಉಂಟಾಗುತ್ತವೆ.
ಸತ್ವಾದಿ ಗುಣ ಫಲವು : ಅಷ್ಟ ದಿಕ್ಪಾಲಕರ ಗಣಿತ ಮಾಡಿದ ನಂತರ ಎಷ್ಟು ಸಂಖ್ಯೆ ಬಂದಿರುತ್ತದೆಯೋ, ಆ ಸಂಖ್ಯೆಗೆ 8 ರಿಂದ ಗುಣಿಸಿ ಮೂರರಿಂದ ಭಾಗಿಸಲು ಶೇಷ ಒಂದು ಬಂದರೆ ಇದುನ್ನ ಸತ್ವಗುಣ ಇದು ಅತಿ ಶ್ರೇಷ್ಠವಾದದ್ದು ಶೇಷ ಎರಡು ಬಂದರೆ ರಾಜಗುಣ. ಇದು ಮಧ್ಯಮ ಫಲಕಾರಿಯಾಗಿರುತ್ತದೆ ಶೇಷವು ಮೂರು ಉಳಿದರೆ ತಮೋಗುಣವು ಇದು ಕನಿಷ್ಠ ಫಲಕಾರಿಯಾಗಿರುತ್ತದೆ.