ನೈಸರ್ಗಿಕವಾಗಿ ಸಿಗುವ ಎಲ್ಲಾ ಬಗೆಯ ಹಣ್ಣು-ತರಕಾರಿ ಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು, ವಿವಿಧ ಬಗೆಯ ವಿಟಮಿನ್ಸ್’ಗಳು, ಖನಿಜಾಂಶಗಳು, ಕಬ್ಬಿಣಾಂಶಗಳು ಲಭ್ಯವಿರುವುದು.
ಹೀಗಾಗಿ ಇಂತಹ ಹಣ್ಣು ತರಕಾರಿಗಳನ್ನು ನಿಯಮಿತವಾಗಿ ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬಳಿಸಿ ಕೊಂಡರೆ, ಆರೋಗ್ಯ ವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ..
ಅನಾನಸ್ ಹಣ್ಣು
• ಇನ್ನು ಕೆಲವೊಂದು ಹಣ್ಣುಗಳು ವಿಶೇಷವಾದ ಆರೋಗ್ಯ ಗುಣಗಳನ್ನು ಹೊಂದಿದ್ದು, ಮನುಷ್ಯನ ಹಲವಾರು ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡುವಂತಹ ಗುಣಲಕ್ಷಣಗಳನ್ನು ಹೊಂದಿದೆ.
• ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಅನಾನಸ್ ಹಣ್ಣು! ಬನ್ನಿ ಇಂದಿನ ಲೇಖನದಲ್ಲಿ ನೋಡಲು ಮೈ ತುಂಬಾ ಮುಳ್ಳಿನ ಹೊದಿಕೆ ತಲೆಯ ಮೇಲೊಂದು ಹಸಿರು ಜುಟ್ಟುನಂತೆ ಕಾಣುವ ಈ ಅನಾನಸ್ ಹಣ್ಣಿನ ಜ್ಯೂಸ್ನಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನ ಗಳು ಅಡಗಿದೆ ಎನ್ನುವುದನ್ನು ನೋಡೋಣ…
ಅನಾನಸ್ ಹಣ್ಣಿನ ಜ್ಯೂಸ್
• ಹುಳಿ ಸಿಹಿ ಮಿಶ್ರಿತ ಅನಾನಸ್ ಹಣ್ಣು ಎಂದರೆ ಹೆಚ್ಚಿನವರಿಗೆ ಪ್ರಿಯ! ಅದರಲ್ಲೂ ಈ ಹಣ್ಣಿನ ಜ್ಯೂಸ್ ಅಂತೂ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಕೂಡ ಇಷ್ಟಪಟ್ಟು ಸೇವಿಸುತ್ತಾರೆ.
• ಪ್ರಮುಖವಾಗಿ ಈ ಹಣ್ಣಿನ ಜ್ಯೂಸ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ಸ್ಗಳಾದ ವಿಟಮಿನ್ ಸಿ, ವಿಟಮಿನ್ ಬಿ6, ತಾಮ್ರ, ಮ್ಯಾಂಗನೀಸ್ ಅಂಶಗಳು, ಕಬ್ಬಿಣದ ಅಂಶ, ಕ್ಯಾಲ್ಸಿಯಂ ಅಂಶ, ಹೆಚ್ಚಾಗಿ ಸಿಗುತ್ತದೆ.
• ಇವು ನಮ್ಮ ದೇಹದ ಆರೋಗ್ಯವನ್ನು ವೃದ್ಧಿಗೊಳಿ ಸುವುದು ಮಾತ್ರವಲ್ಲದೆ, ಮೂಳೆಗಳ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ.
ಆರೋಗ್ಯ ತಜ್ಞರು ಹೇಳುವ ಹಾಗೆ
• ಇನ್ನು ಅನಾನಸ್ ಹಣ್ಣಿನ ಜ್ಯೂಸ್ನಲ್ಲಿ ಆರೋಗ್ಯಕ್ಕೆ ಬೇಕಾಗುವ ಒಳ್ಳೆಯ ಪ್ರಮಾಣದ ಆಂಟಿ ಆಕ್ಸಿಡೆಂಟ್ ಅಂಶಗಳು ಕಂಡು ಬರುವ ಕಾರಣದಿಂದಾಗಿ, ಹಲವಾರು ಆರೋಗ್ಯ ಸಮಸ್ಯೆಗಳು ನಮ್ಮಿಂದ ದೂರವಾಗಲು ನೆರವಾಗುತ್ತದೆ.
• ಬಹುಮುಖ್ಯವಾಗಿ ಆಂಟಿಆಕ್ಸಿಡೆಂಟ್ ಅಂಶಗಳು ನಮ್ಮ ದೇಹಕ್ಕೆ ಹಾನಿ ಉಂಟು ಮಾಡುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವುದು ಮಾತ್ರವಲ್ಲದೆ, ನಮ್ಮ ಅಂಗಾಗಳ ಪ್ರಮುಖ ಜೀವಕೋಶಗಳಿಗೆ ಯಾವುದೇ ಬಗೆಯಲ್ಲಿ ಹಾನಿಗೆ ಒಳಗಾಗದಂತೆ ನೋಡಿಕೊಳ್ಳುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಅನಾನಸ್ ಹಣ್ಣಿನಲ್ಲಿ ಕಂಡುಬರುವ ಬ್ರೋಮೇಲೈನ್ ಎನ್ನುವ ಸಂಯುಕ್ತ ಅಂಶ ನಮ್ಮ ಹೃದಯದ ಆರೋಗ್ಯಕ್ಕೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.
ಕ್ಯಾನ್ಸರ್ ಕಾಯಿಲೆ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ
• ಮೊದಲೇ ಹೇಳಿದ ಹಾಗೆ, ಈ ಹಣ್ಣಿನ ಜ್ಯೂಸ್ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.
• ಇವು ದೇಹದಲ್ಲಿ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗ ದಂತೆ ತಡೆದು, ಮುಂದಿನ ದಿನಗಳಲ್ಲಿ ಇದರಿಂದ ಬರುವ ಅಪಾಯವನ್ನು ತಡೆಯುತ್ತದೆ.
• ಹೀಗಾಗಿ ನಾವು ಈಗಿನಿಂದಲೇ ಈ ಹಣ್ಣಿನ ಜ್ಯೂಸ್ ಅನ್ನು ನಿಯಮಿತವಾಗಿ ಸೇವನೆ ಮಾಡುವ ಅಭ್ಯಾಸ ಇಟ್ಟು ಕೊಂಡರೆ ಕ್ಯಾನ್ಸರ್ ಕಾಯಿಲೆಯ ಅಪಾಯ ವನ್ನು ತಪ್ಪಿಸಿಕೊಳ್ಳಬಹುದು.
ಜೀರ್ಣಕ್ರಿಯೆ ಸಮಸ್ಯೆ ಇದ್ದವರಿಗೆ ಒಳ್ಳೆಯದು
ಅನಾನಸ್ ಹಣ್ಣಿನಲ್ಲಿ ಅಮೈನೋ ಆಮ್ಲಗಳು ಹಾಗೂ ಸಣ್ಣ ಪ್ರಮಾಣದ ಪೆಪ್ಟೈಡ್ ಅಂಶಗಳು ಯಥೇಚ್ಛವಾಗಿ ಕಂಡು ಬರುವುದರಿಂದ, ದೇಹದಲ್ಲಿ ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ದೂರ ಮಾಡಲು ನೆರವಿಗೆ ಬರುತ್ತದೆ.