ಮನೆ ಜ್ಯೋತಿಷ್ಯ ಮೀನ ರಾಶಿ

ಮೀನ ರಾಶಿ

0

 ಆಕಾಶ ಮಂಡಲದಲ್ಲಿ ಮೀನ ರಾಶಿಯು ರಾಶಿ ಚಕ್ರದಲ್ಲಿ 330 ರಿಂದ 360 ಅಂಶಗಳವರೆಗೆ,ಭೂಮಧ್ಯರೇಖೆಯಿಂದ 12 ರಿಂದ 10 ಡಿಗ್ರಿವರೆಗೆ ಇರುವುದು. ಈ ರಾಶಿಯಲ್ಲಿ ಪೂರ್ವ ಭಾದ್ರಪದ,ಉತ್ತರಾ ಭಾದ್ರಪದ ಮತ್ತು ರೇವತಿ, ನಕ್ಷತ್ರಗಳಿರುವವು.ಇವುಗಳ ಸ್ವಾಮಿಗಳು ಕ್ರಮವಾಗಿ ಗುರು, ಶನಿ ಮತ್ತು ಬುಧರಾಗಿದ್ದಾರೆ.ಗುರು ಈ ರಾಶಿಯ ಸ್ವಾಮಿಯಾಗಿದ್ದಾನೆ.ಇಂಗ್ಲಿಷ್ನಲ್ಲಿ ಈರಾಶಿಗೆ ‘ಪಾಯಿಸೇಜ’ ಎನ್ನುವರು. ಮೀನ ರಾಶಿಯ ಸಂಚಾಲನ ಗುರುವಿಯಿಂದ ಆಗುವುದು.

Join Our Whatsapp Group

     ಪೌರಾಣಿಕ ಕಥೆಗಳಿಗನುಸಾರವಾಗಿ ಶ್ರೀ ವಿಷ್ಣು ಆಮೆಯಾದ ಅವತಾರದ ಸಂಬಂಧವನ್ನೇ ಈ ರಾಶಿಯು ಹೊಂದಿರುವುದು. ಆದುದರಿಂದ ಈ ರಾಶಿಯ ಸಂಬಂಧ ಸಮುದ್ರ,ಜಲಾಶಯ,ನದಿಗಳಲ್ಲಿ ಆಗುವುದು. ಚೈತ್ರ ಮಾಸದವರೆಗೆ ಸೂರ್ಯನು ಈ ರಾಶಿಯಲ್ಲಿ ರುವನು. ಜಲಸಂಪತ್ತು, ಮೀನುಗಾರಿಕೆ, ಜಲಕ್ರೀಡೆ, ಮೀನು ವ್ಯಾಪಾರ ಮುಂತಾದವುಗಳೊಂದಿಗೆ ಈ ರಾಶಿಯು ಸಂಬಂಧ ಹೊಂದಿರುವದು ಶಾಂತ ಸ್ವಭಾವದ,ಕಫ ಪ್ರಕೃತಿಯ ಬ್ರಾಹ್ಮಣ ಜಾತಿಯ  ರಾತ್ರಿ ಬಲಿಷ್ಠವಾದ,ಸದ್ಗುಣಿ,ಬಿಳಿ ಬಣ್ಣದ,ಜಲತತ್ವ ಹೊಂದಿದ ರಾಶಿಯಾಗಿರುವದು. ಕಾಲ ಪುರುಷನ ದೇಹದಲ್ಲಿ ಮೀನ ರಾಶಿಯ ಸ್ಥಾನ ಬೆರಳು, ಪಾದ,ಅಂಗಾಲುಗಳಲ್ಲಿರುವುದು.ಭೂಮಿ ಸಮುದ್ರ  ನದಿಗಳು ಮೋಕ್ಷ ಪಿತೃಗಳೊಡನೆ ಸಂಬಂಧ ಹೊಂದುವುದು.

   ಆಧುನಿಕ ಜಗತ್ತಿನಲ್ಲಿ ಮನೋರಂಜನೆ ವ್ಯವಸಾಯ ಸಂಸ್ಕೃತಿಕ ಕಾರ್ಯಗಳು, ಲೇಖನ , ಶೋಧನೆ, ಚಲನಚಿತ್ರ ಆಧ್ಯಾತ್ಮಗಳೊಡನೆ ಔಷಧಿ ವಿಜ್ಞಾನದ ಪ್ರತೀಕವಾಗಿರುವುದು.

.     ಈ ರಾಶಿಯ ಸಂಬಂಧ ಹೊಂದಿದ ದ್ರವ್ಯಗಳೆಂದರೆ ಮೀನು, ಸಮುದ್ರ ಉತ್ಪನ್ನಗಳು ಮುತ್ತು – ರತ್ನ ಹವಳ, ಚಿಪ್ಪು, ಶಂಖ ಗೋರೋಜನ,ಮಲಗುವ ಕೋಣೆಯ ವಾಸ್ತುಗಳಾಗಿವೆ. ಲೋಕಿಕ ಜ್ಯೋತಿಷ್ಯದಲ್ಲಿ ಸಹರಾ, ಜಂಬದ್ವೀಪ,ಲಕ್ಷದ್ವೀಪ ಲಂಕಾಸ್ವರ ಈ ದೇಶಗಳ ಪ್ರತಿನಿಧಿ ಆಗಿರುವದು.

     ಮೀನ ರಾಶಿಯು ಉದಯಿಸುವಾಗ ಜನಿಸಿದವರು ವಿಶ್ವಾಸಿಗಳು ಈಶ್ವರನ ಭಕ್ತರು,ಭಾಷಾ ಪ್ರವೀಣರು, ಮಾತುಗಾರರು, ಗುಂಗುರು,ಕೂದಲಿನವರು ಅಚಿಂತಾರಹಿತರು ಪರೋಪಕಾರಿಗಳು ಸಮರ್ಥರು ಲಜ್ಜಾಶೀಲರು ದೊಡ್ಡ ಪರಿವಾರದಲ್ಲಿ ಇರುವವರು ಆಗು ವರು ಸುಶಿಕ್ಷಿತರು ಸದ್ಗುಹಸ್ಥರು ಆರ್ಥಿಕ ಲಾಭ ಪಡೆಯುವವರು ಮಿತ್ರ ಸಮುದಾಯ ಉಳ್ಳವರೂ ಆಗುವರು.

   ಮೀನ ರಾಶಿಯವರು ಅಧ್ಯಯನ ಲೇಖಕ,ಇತಿಹಾಸ ಪತ್ರಕರ್ತರಾಗುವರು,ಲಲಿತಕಲೆ,ಸಂಗೀತದಲ್ಲಿ ಆಸಕ್ತಿ ಹೊಂದುವರು ಆತ್ಮವಿಶ್ವಾಸಿಗಳು ವ್ಯವಹಾರ ಕುಶಲರು ಆಗುವರು. ಮೀನ ಲಗ್ನದಲ್ಲಿ ಜನಿಸಿದವರು ಸಮಾಜ ಸುಧಾರಕರು,ದೇಶಪ್ರೇಮಿಗಳು ,  ಆಡಳಿತಗಾರರು ಹಾಸ್ಯವ್ಯಂಗ್ಯ  ಲೇಖಕರು, ಟಿ.ವಿ. ರೇಡಿಯೋ,ಕಲಾವಿದರು ಔಷಧಿ ತಜ್ಞರು ಆಗಬಹುದಾಗಿದೆ.

     ಸೂರ್ಯನು ಈ ರಾಶಿಯಲ್ಲಿ ಮಾರ್ಚ್ 14 ರಿಂದ ಏಪ್ರಿಲ್ 13ರ ವರೆಗಿನವರು. 16, 22,28, ಮತ್ತು 32 ಭಾಗ್ಯೋದಯವಾಗುವ ವರ್ಷಗಳಾಗಿವೆ. ಇವರಿಗೆ ಶೀತ ಮತ್ತು ತಂಪಿನ ಕಾರಣದ ರೋಗ ಬರಬಹುದಾಗಿದೆ. ಅಂತರಾಷ್ಟ್ರೀಯ ಆಮದು ರಪ್ತು ವ್ಯವಹಾರ ಮಾಡಬಹುದಾಗಿದೆ. ಚಂದ್ರನು ಈ ರಾಶಿಯಲ್ಲಿದ್ದಾಗ ಜನಿಸಿದವರು ಸುಂದರ ಶರೀರಗಳು, ಶಿಲ್ಪ ತಂತ್ರಜ್ಞರು ಆಗುವರು.ಇವರು ಆಕರ್ಷಕ  ವ್ಯಕ್ತಿತ್ವವುಳ್ಳವರು, ವಿರೋಧಿಗಳನ್ನು ನಿಯಂತ್ರಿಸುವವರು,ಸಮಾಜದಲ್ಲಿ ಹೆಸರು ಗಳಿಸುವವರು ಆಗುವರು.  ಸುಂದರ ವಸ್ತ್ರಾಭರಣಗಳಲ್ಲಿ ಆಸಕ್ತಿ ಹೊಂದಿದವರು ಅಧ್ಯಾತ್ಮಿಕತೆಯನ್ನು ಸ್ವೀಕರಿಸುವವರೂ ಆಗುವರು. ನಿಯಮಿತ ಜೀವನ ಶೈಲಿ ಹೊಂದುವವರು, ಧೈರ್ಯವಿದ್ದರೂ ನಿಧಾನವಾಗಿ ಕಾರ್ಯ ಮಾಡುವವರೂ ಆಗುವರು.

   ಅಲ್ಪವಿದ್ಯೆ ಹೊಂದಿ ಧನಾ ಭಾವದಿಂದ ತೊಂದರೆ ಅನುಭವಿಸುವರು. ಮಾನವೀಯ ಸಂವೇದನೆಗಳಿಗೆ ಸಹಾನುಭೂತಿ ಹೊಂದುವರು, ಮೀನ ರಾಶಿಯವರು ಎಲ್ಲ ರೀತಿಯಿಂದಲೂ ಸಮಾಜದ ಹಿತಕಾರಿಗಳು, ಶ್ರೇಷ್ಠ ಜೀವನ ಹೊಂದುವವರಾಗುವರು.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಮಾಡಾಯಿಕಾವಿಲಮ್ಮ: ಭದ್ರಕಾಳಿ