ಮನೆ ಆರೋಗ್ಯ ಪಿತ್ತ ಜನಾಂಗವನ್ನು ಕಾಪಾಡುವ ಗುಣ

ಪಿತ್ತ ಜನಾಂಗವನ್ನು ಕಾಪಾಡುವ ಗುಣ

0

    1. ಎಥನಾಲ್ ದ್ರಾವಣ ಮತ್ತು ನೀರು ಮತ್ತು ಮಧ್ಯಸಾರ ಮಿಶ್ರಣ ಉಪಯೋಗಿಸಿ ಅಳಲೆ ಕಾಯಿಯಿಂದ ತಯಾರಿಸಿದ ಸತ್ವವನ್ನು ಇಲಿಗಳಿಗೆ ಸೇವಿಸಲು ಕೊಟ್ಟು ತಯಾರು ಮಾಡಲಾಯಿತು.ಇಂತಹ ಇಲಿಗಳಿಗೆ ಕ್ಷಯ ರೋಗಕ್ಕೆ ಉಪಯೋಗಿಸುವ ರೀಪ್ಯಾಂಪಿಸಿನ್,  ಐಸೊನಯಜಿಡ್, ಪೈರಜಿನಮೈಡ್ ಎಂಬ ಔಷಧಿಗಳನ್ನು ಮತ್ತು ಇತರ ರಾಸಾಯನಿಕಗಳನ್ನು ಪಿತ್ತ ಜನಕಾಂಗವನ್ನು ಹಾನಿಗೊಳಿಸುವ ಉದ್ದೇಶದಿಂದ ಅಳತೆ ಮೀರಿ ಸೇವಿಸುವಂತೆ ಮಾಡಲಾಯಿತು.

Join Our Whatsapp Group

ನಂತರ ಇಲಿಗಳನ್ನು ಪರೀಕ್ಷೆಗೆ  ಒಳಪಡಿಸಿದಾಗ,  ಔಷಧಿಗಳಿಂದ ಮತ್ತು ರಾಸಾಯನಿಕಗಳಿಂದ ಪಿತ್ತಜನಕಾಂಗಕ್ಕೆ ಯಾವುದೇ ರೀತಿಯ ಹಾನಿಯಾಗದಿರುವುದು  ಕಂಡು ಬಂದಿದೆ, ಈ ಪ್ರಯೋಗದಿಂದ ತಿಳಿದು ಬಂದ ಅಂಶವೆಂದರೆ ಅಳಲೆಕಾಯಿಗೆ ಪಿತ್ತ ಜನಾಂಗವನ್ನು ಕಾಪಾಡುವ ಗುಣವಿರುವುದು ದೃಢಪಟ್ಟಿದೆ ಅಳಲೆಕಾಯಿಯ ಸತ್ವದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಚೆಬುಲಿಕ್ ಮತ್ತು ನಿಯೋಚಬುಲಿಕ್  ಆಮ್ಲ ಕಾರಣವೆನ್ನಲಾಗಿದೆ. ಈ ಆಮ್ಲಗಳಿಗೆ ಆೄಂಟಿಆಕ್ಸಿಡೆಂಟ್ ಗುಣವಿರುವುದರಿಂದ,ಪಿತ್ತ ಜನಾಂಗ ಹಾನಿಯಾಗಲು ಕಾರಣವಾದ ಕ್ರಿಯಾತ್ಮಕ ಆಮ್ಲಜನಕವನ್ನು ನಿರ್ಮೂಲನೆ ಮಾಡಿ ಪಿತ್ತಜನಕಾಂಗವನ್ನು ಕಾಪಾಡುತ್ತವೆ.

2. ನೀರು ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ ಸತ್ವವನ್ನು.ಇಲಿಗಳ ಪ್ರತಿ ಕಿಲೊ ಗ್ರಾಂ ದೇಹದ ತೂಕಕ್ಕೆ 50,100,200, ಮಿ. ಗ್ರಾಂ ಪ್ರಮಾಣದಷ್ಟು ಸೇವಿಸಲು ಒಂದು ಗುಂಪಿನ ಇಲಿಗಳಿಗೆ ಕೊಡಲಾಯಿತು. ಮತ್ತೊಂದು ಗುಂಪಿನ ಇಲಿಗಳಿಗೆ 100 ಮಿ.ಗ್ರಾಂ ಪ್ರಮಾಣದ ಗ್ಯಾಲಿಕ್ ಆಮ್ಲವನ್ನು ಐದು ದಿನಗಳವರೆಗೆ ಸೇವಿಸಲು ಕೊಡಲಾಯಿತು. ನಂತರ ಪಿತ್ತ ಜನಾಂಗವನ್ನು ಹಾನಿಗೊಳಿಸುವ ಉದ್ದೇಶದಿಂದ ಟರ್ಷಿಯರಿ ಬುಟೈಲ್ ಹೈಡ್ರೊಜನ್ ಪರಾಕ್ಸೈಡ್ ದ್ರಾವಣವನ್ನು ಇಂಜೆಕ್ಷನ್ ಮೂಲಕ ಕೊಡಲಾಯಿತು.ಇಂಜೆಕ್ಷನ್ ಕೊಟ್ಟ ಹದಿನೆಂಟು ಗಂಟೆಗಳ ನಂತರ ಪಿತ್ತಜನಾಕಾಂಗವನ್ನು ಪರೀಕ್ಷಿಸಿದಾಗ ಅಳಲೆಕಾಯಿ ಸುತ್ತ ಮತ್ತು ಗ್ಯಾಲಿಕ್ ಆಮ್ಲದ ಪ್ರಭಾವದಿಂದ ಪಿತ್ತ ಜನಾಕಾಂಗಕ್ಕೆ ರಾಸಾಯನಿಕದಿಂದ ಯಾವುದೇ ರೀತಿಯ ಹಾನಿಯಾಗಿಲ್ಲವೆಂದು ಕಂಡು ಬಂದಿದೆ. ಅಳಲೆಕಾಯಿಗೆ ಒಟ್ಟಾರೆ ಪಿತ್ತಜನಕಾಂಗವನ್ನು ಕಾಪಾಡುವ ಸಾಮರ್ಥ್ಯವಿದೆ ಯೆಂದು ದೃಢಪಟ್ಟಿದೆ.

3. ಮುದಿತನದಲ್ಲಿ ಉಂಟಾಗಬಹುದಾದ ಪಿತ್ತ ಜಕಾಂಗದ ಹಾನಿಯನ್ನು ತಡೆಯುವ ಸಾಮರ್ಥ್ಯ, ನೀರು ಉಪಯೋಗಿಸಿ ಅಳಲೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಇದೆಯೆಂದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ

4. ಅಸಿಟಮಿನೊಫೆನ್ ಎಂಬ ರಾಸಾಯನಿಕ ಉಂಟು ಮಾಡುವ  ಹಾನಿಯಿಂದ ಪಿತ್ತಜನಕಾಂಗವನ್ನು  ಕಾಪಾಡುವ ಗುಣ ಅಳಲೆಕಾಯಿ ಸತ್ವಕ್ಕೆ ಇದೆ ಯೆಂದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ.