ಕಾಡು ನಾಡಿನ ಪೊದರು ಸಸ್ಯ ಇದಾಗಿದೆ. ಇದು 5 ಅಡಿ ಚಾಚುವ ಕುರುಚಲು ಪೊದರು ಇರುತ್ತದೆ. ಬೇಸಿಗೆಯಲ್ಲಿ ಕಡಿಮೆ ಎಲೆಗಳು, ಬಿಳಿ, ನೀಲಿ, ಕೆಂಪು ಹೂ ಜಾತಿಗಳು. ಮಳೆಗಾಲದಲ್ಲಿ ಚಂದದ ಹಸಿರೆಲೆ ಗೊಂಚಲು, ಬಾರ್ಲಿ ಆಕಾರದ ಬೀಜ. ಬಲಿತ ರೆಂಬೆ ನೆಟ್ಟರೂ ಹೊಸ ಗಿಡ ಚಿಗುರುತ್ತದೆ. ಇದರ ಔಷಧಿಯಾಗಿ ಬಳಕೆಯಾಗುವ ಭಾಗ ಹಿಂಕಿರಿ ಬೇರು. ಚಿಗುರೆಲೆ ರಸ ಅಡುಗೆ ಉಪಯುಕ್ತವಾಗಿದೆ. ಒಣಗಿದ ಸುಟ್ಟು ಬೂದಿ ಕದರಿ ತಳದ ಪುಡಿ ಸಂಗ್ರಹಿಸಿದಾಗ ಅದು ಚಿತ್ರಕ ಕ್ಷಾರವಾಗುತ್ತದೆ.
ಬೇರಿನಲ್ಲಿ ಪ್ಲಂಬಾಜಿನ್, ಪೀತತ್ವ, ಸುಡುವ ಸ್ವಭಾವದ ರಾಸಾಯನಿಕ ಇರುತ್ತದೆ. ಒಣ ಭೂಮಿಯ, ಒಣಹವೆಯ ಮೂಲಿಕೆಯಲ್ಲಿ ಅತ್ಯಧಿಕ ಶಕ್ತಿಯಿರುತ್ತದೆ. ಅಗ್ನೀ, ಪಾಠೀ, ವ್ಯಾಲ, ವಿಷಣ ಎಂಬ ಹೆಸರುಳ್ಳಾ ಚಿತ್ರಮೂಲವನ್ನು ಬೆಂಕಿಯಂತಹ ಸುಡುಗುಣದ ಮೂಲಿಕೆ ಎಂದು ಪ್ರಾಚೀನ ಋಷಿಗಳು ಗುರುತಿಸಿದ್ದಾರೆ, ಉಪಯೋಗಿಸಿದ್ದಾರೆ. ಅಜೀರ್ಣ, ಒಣ ಮೂಲವ್ಯಾಧಿ, ಜ್ವರ, ಭೇದಿ, ಚರ್ಮವ್ಯಾಧಿ, ರಕ್ತ ಹೀನತೆ, ಕೈಕಾಲು ಊತ, ಬಾವು ಪರಿಹಾರಕ್ಕೆ ಚಿತ್ರಮೂಲ ತುಂಬಾ ಪರಿಣಾಮಕಾರಿಯಾಗಿದೆ. ಕೆಮ್ಮು, ಕಫ, ಅಸ್ತಮಾ ತೊಂದರೆಗೆ ಕೂಡ ಒಳ್ಳೆಯ ಮುದ್ದಾಗಿದೆ.
ಔಷಧೀಯ ಗುಣಗಳು :-
* ಚಿಗುರೆಲೆ, ಎಲೆ ಅರೆದು ತಂಬುಳಿ, ಗೊಜ್ಜಿನಂತೆ ಬಳಸಿದರೆ ಹಸಿವೆ ಹೆಚ್ಚಾಗುತ್ತದೆ.
* ಮಣ್ಣಿನ ಮಡಿಕೆಗೆ ಚಿತ್ರಮೂಲ ಬೇರು ತೇಯ್ದು ಲೇಪಿಸಿ ಅದರಲ್ಲಿ ಹಾಲು ಕಾಯಿಸಿರಿ, ಹೆಪ್ಪು ಹಾಕಿರಿ, ಮೊಸರು ಕಡೆದು ತೆಗೆಯಿರಿ, ಅದರಲ್ಲಿ ತೆಗೆದ ಬೆಣ್ಣೆಗೆ ಚಿತ್ರಕ ನಿವನೀತವೆನ್ನುತ್ತಾರೆ.
* ಲಿವರ್, ಪ್ಲೀಹ್ ಉರಿಯೂತಕ್ಕೆ ಬೇರಿನ ಪುಡಿ ಸೇವಿಸುವುದರಿಂದ ಪರಿಣಾಮಕಾರಿ ಲಾಭವಾಗುತ್ತದೆ.
* ಹೊಟ್ಟೆ ಹಸಿವೆ ಹೆಚ್ಚಿಸಲು ದಿನಾಲು ಒಂದೆರಡು ಚಿಟಿಕೆ ಪುಡಿ ಬೇರು ಮಜ್ಜಿಗೆ ಸಂಗಡ ಸೇವಿಸುವುದು ಹಿತಕಾರಿಯಾಗಿದೆ.