ಮನೆ ರಾಜ್ಯ ತಾಯಿ ಕಳೆದುಕೊಂಡ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪ್ರಧಾನಿ ಮೋದಿ ಸಾಂತ್ವನ

ತಾಯಿ ಕಳೆದುಕೊಂಡ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪ್ರಧಾನಿ ಮೋದಿ ಸಾಂತ್ವನ

0

ಬಾಗಲಕೋಟೆ: ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡಿರುವ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳಿದ್ದಾರೆ.

ತಮ್ಮ ತಾಯಿ ಸುಶಿಲಾತಾಯಿ ಅವರು ವಿಧಿವಶರಾದ ಸುದ್ದಿ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬಕ್ಕೆ ಅಗಲಿಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ, ಪತ್ರದ ಮೂಲಕ ಸಾಂತ್ವನ ಹೇಳಿದ್ದಾರೆ.

ತಾಯಿ ಹೃದಯಕ್ಕೆ ಈ ಜಗತ್ತಿನಲ್ಲಿ ಯಾವುದನ್ನು ಹೋಲಿಸೋದಕ್ಕೆ ಸಾಧ್ಯವಿಲ್ಲ. ತಾಯಿ ಎಂದು ಮರಳಿ ಸಿಗದ ಕೊಡುಗೆ ಇದ್ದ ಹಾಗೆ. ತಾಯಿ ಸದಾ ನೆರಳು ನೀಡುವ ಮರದಂತೆ. ಅವರು ಕುಟುಂಬದ ಜೊತೆ ತಮ್ಮ ನೆನಪನ್ನು ಬಿಟ್ಟು ಹೋಗಿದ್ದಾರೆ. ಅವರು ಅಜರಾಮರ ಎಂದು ಮೋದಿ ಪತ್ರದ ಮೂಲಕ ಸಾಂತ್ವನ ಹೇಳಿದ್ದಾರೆ. ಈ ಸಾಂತ್ವದ ಪತ್ರವನ್ನು ಮುರುಗೇಶ್ ನಿರಾಣಿ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡು, ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಜನವರಿ 15ರಂದು ಸುಶಿಲಾಬಾಯಿ ನಿಧನ

ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಅವರ ತಾಯಿ ಸುಶಿಲಾಬಾಯಿ(78) ಅವರು ಜನವರಿ 15ರಂದು ನಿಧನರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಸುಶಿಲಾಬಾಯಿ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಪತಿ‌ ರುದ್ರಪ್ಪ ನಿರಾಣಿ, ಐವರು ಗಂಡು ಮಕ್ಕಳು,ಇಬ್ಬರು ಹೆಣ್ಣು‌ಮಕ್ಕಳು, ಐವರು ಸೊಸೆಯಂದಿರು 14 ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ.