ನವದೆಹಲಿ(Newdelhi): ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ’ದ ಸ್ಮರಣಾರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಿಶೇಷ ಸರಣಿಯ ನಾಣ್ಯಗಳನ್ನು ಬಿಡುಗಡೆ ಮಾಡಿದರು. ದೃಷ್ಟಿಹೀನರೂ ಗುರುತಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿರುವುದು ಈ ನಾಣ್ಯಗಳ ವಿಶೇಷತೆಯಾಗಿದೆ. ₹1, 2, 5, 10 ಮತ್ತು ₹20 ಮುಖಬೆಲೆಯ ನಾಣ್ಯಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಬಿಡುಗಡೆ ಮಾಡಲಾಗಿದ್ದು, ಚಲಾವಣೆಗೂ ತರಲಾಗುತ್ತಿದೆ.
ಹಣಕಾಸು ಸಚಿವಾಲಯ ಆಯೋಜಿಸಿದ್ದ ‘ಐಕಾನಿಕ್ ವೀಕ್’ ಕಾರ್ಯಕ್ರಮದಲ್ಲಿ ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಹೊಸ ಸರಣಿಯ ನಾಣ್ಯಗಳು ‘ಅಮೃತ ಕಾಲ’ದ ಗುರಿಯನ್ನು ಜನರಿಗೆ ನೆನಪಿಸುತ್ತವೆ. ದೇಶದ ಅಭಿವೃದ್ಧಿಗೆ ಶ್ರಮಿಸಲು ಜನರನ್ನು ಪ್ರೇರೇಪಿಸುತ್ತವೆ ಎಂದು ಮೋದಿ ಹೇಳಿದರು.
12 ಸರ್ಕಾರಿ ಯೋಜನೆಗಳನ್ನು ಒಳಗೊಂಡ ‘ಜನ್ ಸಮರ್ಥ್ ಪೋರ್ಟಲ್’ಗೆ ಮೋದಿ ಅವರು ಇದೇ ವೇಳೆ ಚಾಲನೆ ನೀಡಿದರು.