ಮೈಸೂರು(Mysuru) : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ವಿಧ್ವಂಸಕ ಕೃತ್ಯ ತಡೆ ( ಬಾಂಬ್ ಪತ್ತೆ ದಳ) ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಚಾಮುಂಡಿ ಬೆಟ್ಟದಲ್ಲಿ ವಿಐಪಿ ಸಂಚರಿಸುವ ಮಾರ್ಗಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ಮಾಡಲಾಯಿತು.
ತಪಾಸಣೆಯು ಬಾಂಬ್ ಸ್ಕ್ವಾಡ್ ಇನ್ ಚಾರ್ಜ್ ಇನ್ಸ್ ಪೆಕ್ಟರ್ ಮೂರ್ತಿ ಅವರ ನೇತೃತ್ವದಲ್ಲಿ ಪೊಲೀಸ್ ಆಯುಕ್ತರಾದ ಚಂದ್ರಗುಪ್ತ ಅವರ ನಿರ್ದೇಶನದಂತೆ ನಡೆಯಿತು.
ಕಳೆದ ಒಂದು ವಾರದಿಂದಲೂ ಬಾಂಬ್ ಪತ್ತೆದಳದವರು ವಿಐಪಿ ಭೇಟಿ ನೀಡುವ ಸ್ಥಳಗಳನ್ನು ನಿರಂತರವಾಗಿ ಬಾಂಬ್ ಪತ್ತೆ ಉಪಕರಣಗಳು ಮತ್ತು ಶ್ವಾನಗಳೊಂದಿಗೆ ನಗರದ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ.