ಮೈಸೂರು(Mysuru): ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆ ಕಾರ್ಯಕ್ರಮದ ನಂತರ ರಾಜವಂಶಸ್ಥರೊಂದಿಗೆ ಮಂಗಳವಾರ ಉಪಾಹಾರ ಸೇವಿಸಿದರು.
ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಹ್ವಾನದ ಮೇರೆಗೆ ಅರಮನೆಗೆ ಹೊಂದಿಕೊಂಡಂತಿರುವ ರಾಜವಂಶಸ್ಥರ ನಿವಾಸದಲ್ಲಿ ಉಪಾಹಾರ ಸೇವಿಸಿದರು.
ದಕ್ಷಿಣ ಭಾರತದ ಜನಪ್ರಿಯ ಇಡ್ಲಿ, ಉಪ್ಪಿಟ್ಟು, ಅವಲಕ್ಕಿ ಹಾಗೂ ಮೈಸೂರು ಪಾಕ್ ಮತ್ತು ಹಣ್ಣುಗಳನ್ನು ಮೋದಿ ಅವರು ಸೇವಿಸಿದರು ಎನ್ನಲಾಗಿದೆ.
ಬಳಿಕ ಅವರು ಮಂಡಕಳ್ಳಿ ವಿಮಾನ ನಿಲ್ದಾಣದ ಮೂಲಕ ತಿರುವನಂತಪುರಂಗೆ ತೆರಳಿದರು.