ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಇದ್ದಂತಹ ಪೋಕ್ಸೋ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಮುಡಾ ಹಗರಣದ ವಿಚಾರದ ಬೆನ್ನಲ್ಲೇ ಬಿಎಸ್ವೈ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಸರ್ಕಾರ ತೀವ್ರಗೊಳಿಸಿದೆ.
ಮಧ್ಯಂತರ ರಕ್ಷಣೆ ತೆರವು ಮಾಡಲು ಹೈಕೋರ್ಟ್ಗೆ ಸಿಐಡಿ ಮೆಮೋ ಸಲ್ಲಿಕೆ ಮಾಡಲಾಗಿದೆ. ನ್ಯಾ. ನಾಗಪ್ರಸನ್ನ ಅವರಿದ್ದಂತಹ ಏಕಸದಸ್ಯ ಪೀಠ ಮಧ್ಯಾಹ್ನ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಹೈಕೋರ್ಟ್ ನೀಡಿದ ತಡೆಯಾಜ್ಞೆ ತೆರವಿಗೆ ಸರ್ಕಾರ ಈಗ ಕಸರತ್ತು ಆರಂಭಿಸಿದೆ. ಸಿಐಡಿ ಪರವಾಗಿ ಎಸ್ಪಿಪಿ ಅಶೋಕ್ ನಾಯ್ಕ್ ಮೆಮೋ ಸಲ್ಲಿಕೆ ಮಾಡಿದ್ದಾರೆ. ತಡೆಯಾಜ್ಞೆ ತೆರವುಗೊಳಿಸಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್ ಇದೀಗ ಸರ್ಕಾರ ಮಾಡಿದೆ.
Saval TV on YouTube