ಮನೆ ಅಪರಾಧ ಓವರ್ ಹೆಡ್ ಟ್ಯಾಂಕ್​ನಲ್ಲಿ ಮಹಿಳೆಯ ಮೃತದೇಹ ಪತ್ತೆ: ಒಂದು ವರ್ಷದ ಹಿಂದಿನ ಪ್ರಕರಣ ಬೇಧಿಸಿರುವ ಪೊಲೀಸರು

ಓವರ್ ಹೆಡ್ ಟ್ಯಾಂಕ್​ನಲ್ಲಿ ಮಹಿಳೆಯ ಮೃತದೇಹ ಪತ್ತೆ: ಒಂದು ವರ್ಷದ ಹಿಂದಿನ ಪ್ರಕರಣ ಬೇಧಿಸಿರುವ ಪೊಲೀಸರು

0

ರಾಮನಗರ: ಚನ್ನಪಟ್ಟಣ ಕೋರ್ಟ್ ಪಕ್ಕದಲ್ಲಿ ಸಿಕ್ಕಿರುವ ಅಪರಿಚಿತ ಮಹಿಳೆಯ ಮೃತ ದೇಹದ ಚಹರೆ ಕೊನೆಗೂ ಪತ್ತೆಯಾಗಿದೆ. ಪ್ರಕರಣ ಭೇದಿಸುವಲ್ಲಿ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದು, ಕೆಲವೇ ದಿನಗಳಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ನೀಡುತ್ತೇವೆಂದು ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ.

ಪ್ರಕರಣದ ವಿವರ:
ಕಳೆದ ವರ್ಷ 2021 ಅಕ್ಟೋಬರ್ ತಿಂಗಳಿನಲ್ಲಿ ಚನ್ನಪಟ್ಟಣ ಹೃದಯ ಭಾಗವಾದ ಕೋರ್ಟ್ ಪಕ್ಕದ ಓವರ್ ಟ್ಯಾಂಕ್​ನಲ್ಲಿ ಅಪರಿಚಿತ ಮಹಿಳೆಯ ತುಂಡಾದ ಕಾಲು ಪತ್ತೆಯಾಗಿತ್ತು. ಆದರೆ ಮಹಿಳೆಯ ಗುರುತು ಪತ್ತೆಯಗದ ಕಾರಣ ಈ ಪ್ರಕರಣ ಪೋಲೀಸರಿಗೆ ಸವಾಲಾಗಿತ್ತು.

ಇದರ ಜೊತೆ ಜೊತೆಗೆ ಮಹಿಳೆಯ ಕಾಲು ಸಿಕ್ಕ ನಾಲ್ಕೈದು ದಿನಗಳ ಮಧ್ಯೆ ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅದೇ ಮೃತ ದೇಹದ ಅಂಗಾಂಗಳು ಪತ್ತೆಯಾಗಿದ್ದವು. ನಗರದ ಮಂಗಳವಾರಪೇಟೆಯ 10ನೇ ಕ್ರಾಸ್ ನ ಕುಡಿಯುವ ನೀರಿನ ಪೈಪ್ ನಲ್ಲಿ ಮತ್ತೆ ಮಾಂಸದ ಮುದ್ದೆ, ಮೂಳೆಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.

ಓವರ್ ಹೆಡ್ ವಾಟರ್ ಟ್ಯಾಂಕ್​ನಲ್ಲಿ ಅಪರಿಚಿತ ಮಹಿಳೆಯ ಶವದ ಕಾಲೊಂದು ಪತ್ತೆಯಾಗಿತ್ತು. ನೀರಿನ ಟ್ಯಾಂಕ್ ಬಳಿ ಮಹಿಳೆಯ ಬಟ್ಟೆ ಹಾಗೂ ಚಪ್ಪಲಿ ಮಾತ್ರ ಇದ್ದವು. ಟ್ಯಾಂಕ್ ಮೇಲೇರಿ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಅಥವಾ ಕೊಲೆ ಮಾಡಿ ದೇಹವನ್ನ ತುಂಡು-ತುಂಡು ಮಾಡಿ ಟ್ಯಾಂಕಿನ ಒಳಗಡೆ ಹಾಕಿರಬಹುದೆಂದು ಶಂಕಿಸಲಾಗಿತ್ತು. ಕಳೆದ ಹಲವು ತಿಂಗಳಿಂದ ಟ್ಯಾಂಕ್​ನಿಂದ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಎಲ್ಲೆಲ್ಲಿ ವಾಲ್ ಪೈಪ್​​ಗಳಿವೆಯೋ ಅಲ್ಲಲ್ಲಿ ಪೈಪುಗಳನ್ನು‌ ಕತ್ತರಿಸಿ ದೇಹ ಒಂದು ವೇಳೆ ನೀರಿನ ಪೈಪ್​​ನಲ್ಲಿ ಅಂಗಾಂಗಗಳು ಸಿಕ್ಕಿ ಹಾಕಿಕೊಂಡಿರಬಹುದೆಂದು ಹೊರ ತೆಗೆಯುವ ಕಾರ್ಯಾಚರಣೆ ಕೂಡ ನಡೆದಿತ್ತು.

ನಂತರ ಅಂದು ಸಿಕ್ಕ ಮಾಂಸದ ಮುದ್ದೆಯನ್ನ ಪೊಲೀಸರು ವಶಕ್ಕೆ ತೆಗೆದುಕೊಂಡು ಎಫ್​​ಎಸ್​ಎಲ್​ಗೆ ಕಳುಹಿಸಿಕೊಟ್ಟಿದ್ದರು.

ಕೋಡಿಹಳ್ಳಿ ಠಾಣೆಯ ಪಿಎಸ್‌ಐ ಹಾಗೂ ಕನಕಪುರ ಗ್ರಾಮಾಂತರ ಠಾಣೆಯ ಸಿಪಿಐ ನೇತೃತ್ವದಲ್ಲಿ ‌ವಿಶೇಷ ತಂಡ ರಚನೆ ಮಾಡಿದ್ದು, ತಂಡವು ಮಹಿಳೆ ಚಹರೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಕೆಲವೇ ದಿನಗಳಲ್ಲಿ ಆರೋಪಿಗಳು ಹಾಗೂ ಸತ್ತ ಮಹಿಳೆಯ ಸಂಪೂರ್ಣ ದಾಖಲೆ ತಿಳಿಸುತ್ತೇವೆ ಎಂದು ರಾಮನಗರ ಎಸ್ಪಿ ಸಂತೋಷ ಬಾಬು ತಿಳಿಸಿದ್ದಾರೆ.