ಮನೆ ಅಪರಾಧ ಮೈಸೂರು: ಡೇಟಿಂಗ್​ಗೆ ಹುಡುಗಿಯರು ಸಿಗುತ್ತಾರೆ ಎಂದು ವಂಚಿಸುತ್ತಿದ್ದ ಆರೋಪಿಯ ಬಂಧನ

ಮೈಸೂರು: ಡೇಟಿಂಗ್​ಗೆ ಹುಡುಗಿಯರು ಸಿಗುತ್ತಾರೆ ಎಂದು ವಂಚಿಸುತ್ತಿದ್ದ ಆರೋಪಿಯ ಬಂಧನ

0

ಮೈಸೂರು (Mysuru): ಡೇಟಿಂಗ್​ಗೆ ಹುಡುಗಿಯರು ಸಿಗುತ್ತಾರೆ ಎಂದು ಜಾಹೀರಾತು ನೀಡಿ ವಂಚಿಸುತ್ತಿದ್ದ ಆರೋಪಿಯನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಲೋಕ್ಯಾಂಟೋ ಎಂಬ ಡೇಟಿಂಗ್‌ ಆ್ಯಪ್‌ ಮೂಲಕ  ಯುವತಿಯರ ಫೋಟೋಗಳನ್ನು ಹಾಕಿ ಡೇಟಿಂಗ್​ಗೆ ಹುಡುಗಿಯರು ಸಿಗುತ್ತಾರೆ ಎಂದು ಜಾಹೀರಾತು ನೀಡುತ್ತಿದ್ದ.

ಸಿಂಗಲ್ ಕಾಲೇಜು ಹುಡುಗಿಯರು ಸಿಗುತ್ತಾರೆ. ನಗ್ನ ವಿಡಿಯೋ ಕಾಲ್ ಸರ್ವಿಸ್ ಇದೆ. ಹುಡುಗಿಯರೇ ನೇರವಾಗಿ ನಿಮ್ಮನ್ನು ಭೇಟಿ ಮಾಡುತ್ತಾರೆ ಎಂದೆಲ್ಲಾ ಹೇಳಿ ಸುಮಾರು 80 ರಿಂದ 100 ಜನರ ಬಳಿ 8 ಲಕ್ಷಕ್ಕೂ ಅಧಿಕ ಹಣ ವಂಚಿಸಿದ್ದಾನೆ.

ಈತ ತಾನು ಸರ್ವಿಸ್ ನೀಡುವ ಮೊದಲು ಶೇ.50 ಹಣ ಪಾವತಿಸಬೇಕು ಎಂದು ನಿರ್ಬಂಧ ವಿಧಿಸುತ್ತಿದ್ದನಂತೆ. ಯುವತಿಯರ ಫೋಟೋ ನೋಡಿ ಕಾಮದಾಸೆಗೆ ಅದೆಷ್ಟೋ ಜನರು 50 ಪರ್ಸೆಂಟ್ ಹಣವನ್ನು ಫೋನ್ ಪೇ, ಗೂಗಲ್ ಪೇ ಹಾಗೂ ಆನ್​ಲೈನ್​​ ಪೇಮೆಂಟ್ ಪಾವತಿಸುತ್ತಿದ್ದರು. ಆರೋಪಿ ಹಣ ಬಂದ ಮೇಲೆ ಫೋನ್ ರಿಸೀವ್ ಮಾಡುತ್ತಿರಲಿಲ್ಲ.

ಈ ಬಗ್ಗೆ ಬಂದ ದೂರಿನ ಆಧಾರದ ಮೇಲೆ ಕೂಡಲೇ ಕಾರ್ಯಪ್ರವೃತ್ತರಾದ ಸೈಬರ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಲ್ಯಾಪ್‌ಟಾಪ್, 4 ಮೊಬೈಲ್ ವಶಪಡಿಸಿಕೊಂಡಿದ್ದು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರು ಆರೋಪಿಯ ಹೆಸರು ಬಹಿರಂಗಪಡಿಸಿಲ್ಲ.

ಹಿಂದಿನ ಲೇಖನಯುವ ಜನತಾದಳದಲ್ಲಿ ಸಂಘಟನಾತ್ಮಕವಾಗಿ, ಸಾಂಸ್ಥಿಕವಾಗಿ ಅಮೂಲಾಗ್ರ ಬದಲಾವಣೆ: ನಿಖಿಲ್ ಕುಮಾರಸ್ವಾಮಿ
ಮುಂದಿನ ಲೇಖನದಶಕದ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ