ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ನಾಗ ದೇವರ ಸನ್ನಿಧಿಗೆ ಅನ್ಯಮತೀಯ ವ್ಯಕ್ತಿಯೊಬ್ಬರು ಹಾನಿ ಮಾಡಿದ ಘಟನೆ ಡಿ.4ರ ಬುಧವಾರ ರಾತ್ರಿ ನಡೆದಿದೆ. ಘಟನೆ ತಿಳಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಜಿಡೆಕಲ್ಲು ನಿವಾಸಿ ಸಲಾಂ ನಾಗ ದೇವರ ಸನ್ನಿಧಿಯ ಆವರಣಕ್ಕೆ ಹಾನಿ ಮಾಡಿದವನು ಎನ್ನಲಾಗಿದೆ.
ಆತನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾತ್ರಿ ವೇಳೆ ವ್ಯಕ್ತಿಯೊಬ್ಬರು ನಾಗ ದೇವರ ಸನ್ನಿಧಿಯ ಆವರಣಕ್ಕೆ ಅಳವಡಿಸಿದ ಕಬ್ಬಿಣದ ಗ್ರಿಲ್ಸ್ ತೆರವು ಮಾಡಿ ಒಳ ಹೋಗುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.