ಮನೆ ಅಪರಾಧ ಯೂಟ್ಯೂಬರ್‌ ಸಮೀರ್‌ ಮನೆ ಮೇಲೆ ಪೊಲೀಸರ ದಾಳಿ, ಪರಿಶೀಲನೆ..!

ಯೂಟ್ಯೂಬರ್‌ ಸಮೀರ್‌ ಮನೆ ಮೇಲೆ ಪೊಲೀಸರ ದಾಳಿ, ಪರಿಶೀಲನೆ..!

0

ಬೆಂಗಳೂರು : ಧರ್ಮಸ್ಥಳ ದೇವಸ್ಥಾನದ ವಿರುದ್ಧ ಎಐ ವಿಡಿಯೋ ನಡೆಸಿ ಅಪಪ್ರಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಯೂಟ್ಯೂಬರ್‌ ಸಮೀರ್‌ ಮನೆ ಮೇಲೆ ಇಂದು ದಾಳಿ ನಡೆಸಿದ್ದಾರೆ. ಪೊಲೀಸರ ಜೊತೆ ವಿಧಿ ವಿಜ್ಞಾನ ಪ್ರಯೋಗಾಲಯದ ಸೋಕೊ ಸಿಬ್ಬಂದಿಯೂ ಇದ್ದು ಸಮೀರ್‌ ವಿಡಿಯೋ ಮಾಡುತ್ತಿದ್ದ, ಸ್ಥಳವನ್ನು ಮಹಜರು ಮಾಡುತ್ತಿದ್ದಾರೆ.

ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ತಂಡ ನ್ಯಾಯಾಲಯದಿಂದ ಸರ್ಚ್‌ ವಾರಂಟ್‌ ಪಡೆದು ಬೆಂಗಳೂರಿನ ಬನ್ನೇರುಘಟ್ಟದ ಹುಳ್ಳಹಲ್ಲಿಯಲ್ಲಿರುವ ಬಾಡಿಗೆ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಂಪ್ಯೂಟರ್‌, ಹಾರ್ಡ್‌ಡಿಸ್ಕ್‌ ಸೇರಿದಂತೆ ವಿಡಿಯೋ ಮಾಡಲು ಬಳಸುತ್ತಿದ್ದ ಸಾಧನಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಪೊಲೀಸರು ಮನೆಗೆ ಬರುವ ಸಮಯದಲ್ಲಿ ಸಮೀರ್‌ ಮನೆಯಲ್ಲೇ ಇದ್ದ ಎಂಬ ವಿಚಾರ ಹೊರಬಂದಿದೆ.