ಮನೆ ಅಪರಾಧ ಪೊಲೀಸ್ ಪೇದೆ ನೇಣಿಗೆ ಶರಣು: ನಂಜನಗೂಡು ಹೌಸಿಂಗ್ ಬೋರ್ಡ್ ಕಾಲೂನಿಯಲ್ಲಿ ಘಟನೆ

ಪೊಲೀಸ್ ಪೇದೆ ನೇಣಿಗೆ ಶರಣು: ನಂಜನಗೂಡು ಹೌಸಿಂಗ್ ಬೋರ್ಡ್ ಕಾಲೂನಿಯಲ್ಲಿ ಘಟನೆ

0

ನಂಜನಗೂಡು: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸವಿದ್ದ ಪೊಲೀಸ್ ಪೇದೆ ಒಬ್ಬರು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಬೀರೇಶ್ (೩೭) ಮೃತ ದುರ್ದೈವಿ. ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದ ಬೀರೇಶ್ ಮೈಸೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಹುಲ್ಲಹಳ್ಳಿಯ ೧೧೨ ವಾಹನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬೀರೇಶ್ ಅವರ ಪತ್ನಿ ತಮ್ಮ ಮಗುವಿನೊಂದಿಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ. ಪ್ರತಿ ದಿನ ಪತ್ನಿ, ಬೀರೇಶ್‌ಗೆ ಫೋನಿನ ಮೂಲಕ ಕರೆ ಮಾಡಿ ಮಾತನಾಡುತ್ತಿದ್ದರು.
ಆದರೆ ಇಂದು ಬೆಳಿಗ್ಗೆ ಕರೆ ಸ್ವೀಕರಿಸಿದಿರುವ ಸಂದರ್ಭದಲ್ಲಿ ಪತಿಯ ಸ್ನೇಹಿತರಿಗೆ ಕರೆ ಮಾಡಿ ಮನೆಗೆ ತೆರಳಿ ನೋಡುವಂತೆ ತಿಳಿಸಿದರು.

ಬಳಿಕ ಸ್ನೇಹಿತ ಬಂದು ಕಿಟಕಿಯಲ್ಲಿ ನೋಡಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ತಕ್ಷಣವೇ ನಾನು ಕೂಡ ಮನೆಗೆ ಬಂದು ನೋಡಿದಾಗ ಪತಿ ಸೀರೆಯಿಂದ ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಕುಟುಂಬದಲ್ಲಿ ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂದು ಠಾಣೆಯಲ್ಲಿ ಪತ್ನಿ ನಿರ್ಮಲ ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವೀಂದ್ರ, ಪಿಎಸ್‌ಐ ಕೃಷ್ಣಕಾಂತ ಕೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲ ಮಾಡಿಕೊಂಡು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.