ಮನೆ ಅಪರಾಧ ಬೈಕ್ ಅಪಘಾತದಲ್ಲಿ ಪೊಲೀಸ್ ಪೇದೆ ಸಾವು

ಬೈಕ್ ಅಪಘಾತದಲ್ಲಿ ಪೊಲೀಸ್ ಪೇದೆ ಸಾವು

0

ಹುಣಸೂರು: ಸ್ನೇಹಿತನ ಮದುವೆಯ ಚಪ್ಪರದ ಊಟಕ್ಕೆ ಹೋಗಿ ರಾತ್ರಿ ಬರುವಾಗ ಕೆಳಗೆ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್ಸ್‌ಟೇಬಲ್ ಸಾಗರ್.ಕೆ (೩೧) ಎಂಬವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಅಪಘಾತದಲ್ಲಿ ವಾಸು ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ನಿವಾಸಿ ಸೀಮೆಣ್ಣೆ ಕುಳ್ಳಯ್ಯ ನವರ ಮಗ ಸಾಗರ್.ಕೆ ಪೊಲೀಸ್ ಇಲಾಖೆ ನೌಕರನಾಗಿದ್ದು (ಕೆ.ಎಸ್.ಆರ್.ಪಿ) ಬೆಂಗಳೂರು ಬೆಟಾಲಿಯನ್ ೪ರಲ್ಲಿ ಕೋರಮಂಗಲ ಸ್ಟೇಷನ್ ನಂ:೨೦೬ ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈತ ಅದೇ ಗ್ರಾಮದ ತನ್ನ ಸ್ನೇಹಿತ ಸುನಿಲ್ ಅವರ ವಿವಾಹ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರೆಲ್ಲರೂ ಬುಧವಾರ ರಾತ್ರಿ ಅರತಕ್ಷತೆಗೆ ಹೋಗಿ ಬರುವ ಸಮಯದಲ್ಲಿ ಬೈಕಿನಲ್ಲಿ ಸಾಗರ್ ಹಿಂದೆ ಕುಳಿತು ವಾಸು ಓಡಿಸುತ್ತಿದ್ದರು. ಅವರು ಚಿಟ್ಟಕ್ಯಾತನಹಳ್ಳಿ ಸರ್ಕಲ್ ಪಕ್ಕ ಕೆಳಗೆ ಬಿದ್ದಿದ್ದ ಮರಕ್ಕೆ ಡಿಕ್ಕಿ ಹೊಡೆದು ಸಾಗರ್ ಕೆ., ಮೃತ ಪಟ್ಟಿದ್ದಾರೆ.

ಕೆಎಸ್‌ಆರ್‌ಪಿ ಪೊಲೀಸ್ ಇಲಾಖೆಯವರು ಬೆಂಗಳೂರಿನಿಂದ ಆಗಮಿಸಿ ಸರ್ಕಾರಿ ಗೌರವ ಸಲ್ಲಿಸಿದರು. ನಂತರ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.