ಕಲಬುರಗಿ: ಡ್ರಗ್ಸ್ ದಂಧೆಯನ್ನು ಬುಡಸಮೇತ ಕಿತ್ತು ಹಾಕಲು ಪಣ ತೊಟ್ಟಿರುವ ಕಲಬುರಗಿ ಮಹಾನಗರ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಕುಖ್ಯಾತ ಡ್ರಗ್ಸ್ ದಂಧೆಕೋರನ ಮೇಲೆ ಬೆಳ್ಳಂಬೆಳಗ್ಗೆ ಫೈರಿಂಗ್ ನಡೆಸಲಾಗಿದೆ.
ಕಲಬುರಗಿಯಲ್ಲಿ ಸುಪ್ರಿತ್ ಎನ್ನುವ ಕುಖ್ಯಾತ ಡ್ರಗ್ಸ್ ದಂಧೆಕೋರನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಕಳೆದ ವಾರದಿಂದ ಪೊಲೀಸರು ಮಾದಕ (ಡ್ರಗ್ಸ್) ವಿರುದ್ದ ಕಾರ್ಯಾಚರಣೆ ನಡೆಸಿದ್ದು, ಈಗಾಗಲೇ ಹತ್ತಾರು ಪ್ರಕರಣಗಳನ್ನು ದಾಖಲಿಸಿಕೊಂಡು 50 ಜನರನ್ನು ಬಂಧಿಸಿದ್ದಾರೆ.
ಶನಿವಾರ ಬೆಳಿಗ್ಗೆ ಡ್ರಗ್ಸ್ ದಂಧೆಕೋರರನನ್ನು ಬಂಧಿಸಲು ಹೋದಾಗ ಫೈರಿಂಗ್ ನಡೆದಿದೆ. ಡ್ರಗ್ಸ್ ದಂಧೆಯ ಮುಖ್ಯ ಕಿಂಗ್ ಪಿನ್ ಸುಪ್ರೀತ್ ಎಂಬಾತನ ಮೇಲೆ ಫೈರಿಂಗ್ ನಡೆದಿದೆ.
ಈತನನ್ನು ಅರೆಸ್ಟ್ ಮಾಡಲು ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಮೇಲೆ ಗುಂಡು ಹಾರಿಸಲಾಗಿದೆ. ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಹೊರವಲಯದ ತಾವರಗೇರಾ ಬಳಿ ಆರೋಪಿ ಮೇಲೆ ಫೈರಿಂಗ್ ನಡೆದಿದೆ. ಚೌಕ್ ಠಾಣೆಯ ಇನ್ಸಪೆಕ್ಟರ್ ರಾಘವೇಂದ್ರ ಅವರಿಂದ ಆರೋಪಿ ಕಾಲಿಗೆ ಗುಂಡೇಟು ಬಿದ್ದಿದೆ. ಗುಂಡೇಟಿನಿಂದ ಗಾಯಗೊಂಡ ಆರೋಪಿ ಸುಪ್ರಿತ್ ನನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ.
ಕಾರಿನಲ್ಲಿ ಅಕ್ರಮವಾಗಿ ಡ್ರಗ್ಸ್ ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಹಿನ್ನೆಲೆ ಪೊಲೀಸ್ ಕಾರ್ಯಾಚರಣೆ ನಡೆಸಿದ್ದಾರೆ.
ಕಲಬುರಗಿ ನಗರದ ಹಿರ ವಲಯ ತಾವರಗೇರಾ ಕ್ರಾಸ್ ಬಳಿ ಕಾರು ನಿಲ್ಲಿಸಿದ ತಕ್ಷಣ ಪೊಲೀಸ್ ಸಿಬ್ಬಂದಿಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಆರೋಪಿ ಯತ್ನಿಸಿದ್ದಾನೆ. ಈ ವೇಳೆ ಚೌಕ್ ಠಾಣೆಯ ಇನ್ಸಪೆಕ್ಟರ್ ರಾಘವೇಂದ್ರ ಅವರಿಂದ ಗುಂಡಿನ ದಾಳಿ ನಡೆದಿದೆ. ಆರೋಪಿ ಸುಪ್ರಿತನ ಎಡಗಾಲಿಗೆ ಗುಂಡೇಟು ತಗುಲಿದೆ. ಆರೋಪಿ ಚಾಕು ಇರಿದ ಕಾರಣ ಹೆಡ್ ಕಾನ್ಸಟೇಬಲ್ ಗುರುಮೂರ್ತಿಗೆ ತೀವ್ರ ಗಾಯವಾಗಿದೆ. ಗುಂಡೇಟಿನಿಂದ ಗಾಯಗೊಂಡ ಆರೋಪಿ ಸುಪ್ರಿತನನ್ನು ಕಲಬುರಗಿ ಟ್ರಾಮಾ ಕೇರ್ ಸೆಂಟರ್ ಗೆ ದಾಖಲು ಮಾಡಲಾಗಿದೆ. ಇನ್ನೊಂದೆಡೆ ಗಾಯಾಳು ಹೆಡ್ ಕಾನ್ಸಟೇಬಲ್ ಗುರುಮೂರ್ತಿಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎರಡೂ ಕಡೆ ಕಲಬುರಗಿ ನಗರ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಢಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














