ಮನೆ ರಾಷ್ಟ್ರೀಯ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉಗ್ರರನ್ನು ಹೊಡೆದುರುಳಿಸಿದ ಪೊಲೀಸರು

ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉಗ್ರರನ್ನು ಹೊಡೆದುರುಳಿಸಿದ ಪೊಲೀಸರು

0

ಲಕ್ನೋ(ಉತ್ತರಪ್ರದೇಶ): ಪಂಜಾಬ್‌ ನ ಗುರುದಾಸ್‌ ಪುರ್‌ ಪೊಲೀಸ್‌ ಚೆಕ್‌ ಪಾಯಿಂಟ್‌ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಭಯೋತ್ಪಾದಕರನ್ನು ಉತ್ತರಪ್ರದೇಶದ ಪಿಲಿಭಿಟ್‌ ಪೊಲೀಸರು ಎನ್‌ ಕೌಂಟರ್‌ ನಲ್ಲಿ ಹೊಡೆದುರುಳಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

Join Our Whatsapp Group

ಕಳೆದ ತಡರಾತ್ರಿ ಉತ್ತಪ್ರದೇಶ ಪೊಲೀಸರು ಮತ್ತು ಪಂಜಾಬ್‌ ಪೊಲೀಸರ ಜಂಟಿ ತಂಡ ಹಾಗೂ ಮೂವರು ಖಲಿಸ್ತಾನಿ ಭಯೋ*ತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಪೊಲೀಸರು ಮೂವರನ್ನು ಬಂಧಿಸಲು ಯತ್ನಿಸಿದ್ದರು, ಆದರೆ ಈ ಸಂದರ್ಭದಲ್ಲಿ ಖಲಿಸ್ತಾನಿಗಳು ಗುಂಡಿನ ದಾಳಿ ನಡೆಸಿದ್ದರು.

ಅದಕ್ಕೆ ಉತ್ತರಪ್ರದೇಶ ಮತ್ತು ಪಂಜಾಬ್‌ ಪೊಲೀಸರು ಪ್ರತಿದಾಳಿ ನಡೆಸಿದ್ದು, ಗುರ್ವಿಂದರ್‌ ಸಿಂಗ್‌, ವೀರೇಂದ್ರ ಸಿಂಗ್‌ ಮತು ಜಸನ್‌ ಪ್ರೀತ್‌ ಸಿಂಗ್‌ ಎನ್‌ ಕೌಂಟರ್‌ ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಸಂದರ್ಭದಲ್ಲಿ ಎರಡು ಎಕೆ 47 ರೈಫಲ್ಸ್‌ ಹಾಗೂ ಹಲವು ಗ್ಲೋಕ್‌ ಪಿಸ್ತೂಲ್ಸ್‌ ವಶಪಡಿಸಿಕೊಳ್ಳಲಾಗಿದೆ. ಈ ಮೂವರು ಪಾಕಿಸ್ತಾನ ಪ್ರಾಯೋಜಿತ ಖಲಿಸ್ತಾನ್‌ ಜಿಂದಾಬಾದ್‌ ಪಡೆಯ ಸದಸ್ಯರಾಗಿರುವುದಾಗಿ ವರದಿ ತಿಳಿಸಿದೆ.

ಪಂಜಾಬ್‌ ಗಡಿಭಾಗದ ಚೆಕ್‌ ಪೋಸ್ಟ್‌ ಮೇಲೆ ಈ ಮೂವರು ಗ್ರೆನೇಡ್‌ ದಾಳಿ ನಡೆಸಿದ ಘಟನೆಯಲ್ಲಿ ಶಾಮೀಲಾಗಿದ್ದರು ಎಂದು ಪಂಜಾಬ್‌ ಡಿಜಿಪಿ ಗೌರವ್‌ ಯಾದವ್‌ ಎಕ್ಸ್‌ ನಲ್ಲಿ ತಿಳಿಸಿದ್ದಾರೆ.