ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಯೂಟ್ಯೂಬರ್ ಸಮೀರ್ ಅವರ ಬಳ್ಳಾರಿ ನಿವಾಸಕ್ಕೆ ಧರ್ಮಸ್ಥಳದ ಪೊಲೀಸರು ನೋಟಿಸ್ ನೀಡಿದ್ದಾರೆ.
ಮನೆಗೆ ಬೀಗ ಜಡಿದಿದ್ದ ಹಿನ್ನೆಲೆ ಬಂಡಿಹಟ್ಟಿ ಏರಿಯಾದಲ್ಲಿರುವ ಅವರ ಮನೆ ಗೋಡೆಗೆ ನೋಟಿಸ್ ಅಂಟಿಸಿದ್ದು, ನಾಳೆ (ಆ.24) ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ನಿನ್ನೆ ಸಂಜೆಯೇ ಧರ್ಮಸ್ಥಳ ಠಾಣೆ ಪೊಲೀಸರು ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಇದು ಈ ಪ್ರಕರಣದಲ್ಲಿ ಸಮೀರ್‌ಗೆ ಮೂರನೇ ನೋಟಿಸ್ ಆಗಿದೆ.
ಧರ್ಮಸ್ಥಳಕ್ಕೆ ಹೋಗಲು ತನಗೆ ಜೀವ ಭಯವಿದೆ ಎಂದಿದ್ದ ಸಮೀರ್ ಸುರಕ್ಷತೆ ದೃಷ್ಟಿಯಿಂದ ಧರ್ಮಸ್ಥಳ ಠಾಣೆಗೆ ನಾನು ಬರಲಾರೆ ಎಂದಿದ್ದ. ಈ ಹಿನ್ನೆಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ವಿಚಾರಣೆ ಎದುರಿಸುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ.















