ಬೆಂಗಳೂರು: ವಿಧಾನಸೌಧಕ್ಕೆ ಕಳೆದ ವಾರ ಶಾಸಕ ಸೋಗಿನಲ್ಲಿ ವ್ಯಕ್ತಿಯೋರ್ವ ತೆರಳಿ ಸದನದೊಳಗೆ ಪ್ರವೇಶಿಸಿದ ಪ್ರಕರಣ ಬೆಳಕಿಗೆ ಬಂದ ನಂತರ ತಪಾಸಣೆ ಚುರುಕುಗೊಳಿಸಿದ್ದ ಪೊಲೀಸರು ಕಳೆದ ನಾಲ್ಕು ದಿನಗಳಲ್ಲಿ 250ಕ್ಕಿಂತ ಹೆಚ್ಚು ನಕಲಿ ಪಾಸ್ ಗಳನ್ನು ಪತ್ತೆ ಹಚ್ಚಿದ್ದಾರೆ.
ವಿಧಾನಸೌದಕ್ಕೆ ಎಂಟ್ರಿಯಾಗುವ ಎಲ್ಲಾ ಗೇಟ್ ಗಳಲ್ಲಿ ಪ್ರತಿಯೊಬ್ಬರನ್ನು ಪರಿಶೀಲನೆ ಮಾಡುತ್ತಿದ್ದಾರೆ. ನಕಲಿ ಪಾಸ್ ಬಳಸಿ ವಿಧಾನಸೌಧ ಒಳ ಪ್ರವೇಶ ಮಾಡುತ್ತಿದ್ದವರನ್ನು ತಡೆದಿದ್ದಾರೆ. ಇದೀಗ ಪೊಲೀಸರು ಅವಧಿ ಮುಗಿದಿರುವ ಪಾಸ್, ಕಲರ್ ಜೆರಕ್ಸ್ ಪಾಸ್ಗಳನ್ನು ಸೀಜ್ ಮಾಡಿದ್ದಾರೆ. ಹಲವು ರಾಜಕಾರಣಿಗಳ ಬೆಂಬಲಿಗರಿಂದ ನಕಲಿ ಪಾಸ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಸದ್ಯ ನಕಲಿ ಪಾಸ ಬಳಸುತ್ತಿದ್ದ ಎಲ್ಲರ ಮಾಹಿತಿ ಸಂಗ್ರಹಿಸಿದ್ದಾರೆ.
ಇನ್ನು ಮಾಜಿ ಎಂಎಲ್ ಎ, ಎಂಎಲ್ ಸಿ ಪಾಸ್ ಗಳೇ ನಕಲಿಯಾಗಿದ್ದು, ಈ ನಕಲಿ ಪಾಸ್ಗಳ ಹಿಂದಿನ ಉದ್ದೇಶ ಏನಾಗಿತ್ತು ಎಂದು ತನಿಖೆ ನಡೆಸುತ್ತಿದ್ದಾರೆ.