ಇದು ದೊಡ್ಡ ಮರವಾಗಬಲ್ಲ ಸುಂದರ ಎಲೆ ಜೋಡಣೆಯ ಹೊಂಗೆ ಛತ್ರಿಯಾಕಾರ ಹರಡ ಬಲ್ಲವಂತಹದು. ಸಂಯುಕ್ತ ಎಲೆ, ನೀಲಿ, ಕೆಂಪು, ಬಿಳಿ ಹೂ, ಚಪ್ಪಟೆಕಾಯಿಯಲ್ಲಿ ಚಪ್ಪಟೆ ಬೀಜ, ಅದು ತೈಲಾಂಶ ಭರಿತವಾಗಿರುತ್ತದೆ.
ಹಿಂದೆ ಹೇರಳವಾಗಿ ಲಭ್ಯವಿದ್ದ ದೀಪದ ಎಣ್ಣೆಯಾಗಿತ್ತು .ಹೊಂಗೆ ಎಣ್ಣೆ ಚರ್ಮ ಕಾಯಿಲೆ, ಗಂಟು ನೋವು ನಿವಾರಕವಾಗಿ ಹೊಂಗೆ ಎಣ್ಣೆ ಬಳಕೆ ಮುಖ್ಯ. ಮೂಲವ್ಯಾಧಿ, ಜಂತುಹುಳ, ಹೊಟ್ಟೆ ಉಬ್ಬರ, ಹಳೆ ಗಾಯ, ಪರಿಹರಕ್ಕೆ ಹೊಂಗೆಯ ಬಳಕೆ ಉಲ್ಲೇಖವಿದೆ. ಸರ್ಪ ಸುತ್ತಿಗೆ ಸಹ ಎಣ್ಣೆ ಬಳಕೆ ಉತ್ತಮ ಪರಿಣಾಮ ನೀಡುತ್ತದೆ. ಹಳೆಯ ಗಾಯಕ್ಕೆ ಎಣ್ಣೆ ಹಚ್ಚಲಾಗುತ್ತದೆ.
ಔಷಧೀಯ ಗುಣಗಳು :-
- ಉರಿಯುತವಿರುವ ಗಾಯ, ಕುರು ಕರಗಿಸಲು ಕರಂಜದ ಎಲೆ ಕಾಸಿ ಹಚ್ಚುವುದು ಸೂಕ್ತವಾಗಿದೆ. ಪೋಲ್ಟೀಸು ಹಾಕಿದರೆ ಬಹಳ ಲಾಭಕಾರಿಯಾಗಿದೆ.
- ಹಸುವಿನ ಮೂತ್ರದಲ್ಲಿ ಬೇರನ್ನು ಅರೆದು ಕುಡಿಸಿದರೆ ರಕ್ತ ಬೀಳುವ, ನೋವು ಪರಿಹರಿಸುವ ಚಿಕಿತ್ಸೆ ಸುಲಭ ಸಾಧ್ಯ.
- ಮಧುಮೇಹಿ ರೋಗಿಯು ಹೂವಿನ ಪುಡಿ ಹಾಕಿ ಕುದಿಯುವ ನೀರು ತಣ್ಣಗಾದ ಮೇಲೆ ಕುಡಿಯುವುದರಿಂದ ಹಿತಕರ.
- ಬೇವಿನ ಪುಡಿ ಸಹಿತ ಕುಡಿದರೆ ಮೈ, ಕೈ, ವಾತ, ಪರಿಹಾರವಾಗುತ್ತದೆ.
- ಜ್ವರದಲ್ಲಿ ಬೀಜಗಳನ್ನು ನಯವಾಗಿ ಪುಡಿ ಮಾಡಿ ಸೇವಿಸುವುದರಿಂದ ತುಂಬಾ ಹಿತಕಾರಿಯಾಗಿದೆ.














