ಮನೆ ಕಾನೂನು ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ: ಐವರ ಅಮಾನತು

ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ: ಐವರ ಅಮಾನತು

0

ಮಂಡ್ಯ: ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಸುತ್ತಿದ್ದ ಆರೋಪದ ಮೇರೆಗೆ, ಮಂಡ್ಯ ತಾಲ್ಲೂಕಿನ ಹಳೇಬೂದನೂರು ಗ್ರಾಮದ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರದ (ಮಂಡ್ಯ ಮತ್ತು ದುದ್ದ ಎಂ.ಎಸ್‌.ಪಿ.ಸಿ.) ಐವರು ಸಿಬ್ಬಂದಿಯನ್ನು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ ಅವರ ಸೂಚನೆ ಮೇರೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮಾನತುಗೊಳಿಸಿದ್ದಾರೆ.

Join Our Whatsapp Group


ಸುಧಾ ಜಿ.ಎಲ್‌. (ಕಾರ್ಯದರ್ಶಿ), ಕಾಳಮ್ಮ (ಅಧ್ಯಕ್ಷೆ) ಹಾಗೂ ಅಂಬಿಕಾ ಡಿ, ನಯನಾ ಕೆ.ಟಿ., ಕಾವ್ಯಾ ಕೆ.ಸಿ (ಮೂವರು ಸದಸ್ಯರು) ಅಮಾನತುಗೊಂಡವರು.