ಮನೆ ರಾಜ್ಯ ಬಡವರು ಬಡವರಾಗಿಯೇ ಉಳಿದಿದ್ದರೇ ಅದಕ್ಕೆ ಕಾಂಗ್ರೆಸ್ ಕಾರಣ: ಬಿ ವೈ ವಿಜಯೇಂದ್ರ

ಬಡವರು ಬಡವರಾಗಿಯೇ ಉಳಿದಿದ್ದರೇ ಅದಕ್ಕೆ ಕಾಂಗ್ರೆಸ್ ಕಾರಣ: ಬಿ ವೈ ವಿಜಯೇಂದ್ರ

0

ಹಾಸನ: ಬಡವರು ಬಡವರಾಗಿಯೇ ಉಳಿದಿದ್ದರೇ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

Join Our Whatsapp Group

ಇಂದು ಹಾಸನ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿ ಮಾತನಾಡಿದ ಬಿವೈ ವಿಜಯೇಂದ್ರ,  ಇದು ಎರಡು ಪಕ್ಷಗಳ ನಡುವಿನ ಹೋರಾಟ ಅಲ್ಲ. ದೇಶದಲ್ಲಿ ಮತ್ತೆ ಮೋದಿ ಪ್ರಧಾನಿಯಾಗಬೇಕು. ಕಾಂಗ್ರೆಸ್ ನವರು ರಾಜ್ಯದಲ್ಲಿ  ಹೆಚ್ಚಿನ  ಸ್ಥಾನ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೇ ಏನು ಆಗುವುದಿಲ್ಲ.  ಹಾಗಾಗಿ ಪ್ರಜ್ವಲ್ ರೇವಣ್ಣರನ್ನ ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.

ಇದೇ ವೇಳೆ ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ವಿರುದ್ದ ಗುಡುಗಿದ ಬಿವೈ ವಿಜಯೇಂದ್ರ, ಶಿವಮೊಗ್ಗಕ್ಕೆ ಈಶ್ವರಪ್ಪ ಕೊಡುಗೆ ಏನು..?  ರಾಘವೇಂದ್ರ ಕೊಡುಗೆ ಏನೆಂದು ಜನರಿಗೆ ಗೊತ್ತಿದೆ. ಈಶ್ವರಪ್ಪ ವಿರುದ್ದ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಹಿಂದಿನ ಲೇಖನಇರಾನ್ ವಶದಲ್ಲಿರುವ 17 ಮಂದಿ ಭಾರತೀಯರ ಬಿಡುಗಡೆಗೆ ಸಕಾರಾತ್ಮಕ ಪ್ರತಿಕ್ರಿಯೆ: ಎಸ್. ಜೈ ಶಂಕರ್
    ಮುಂದಿನ ಲೇಖನಅಪ್ರಾಪ್ತ ವಯಸ್ಕ ಗರ್ಭಿಣಿಯ ಚಿಕಿತ್ಸೆಗಾಗಿ ಪೊಲೀಸ್ ದೂರು ಅಗತ್ಯವೆಂದು ಆಸ್ಪತ್ರೆ ಒತ್ತಾಯಿಸಕೂಡದು: ಬಾಂಬೆ ಹೈಕೋರ್ಟ್