ಮನೆ ಮನೆ ಮದ್ದು ಕಸಕಸೆ (POPPY)

ಕಸಕಸೆ (POPPY)

0

ಕಸಕಸೆ ಬೀಜಗಳು ಶಕ್ತಿದಾಯಕ ಮತ್ತು ಪೋಷದಾಯಕವಾಗಿದೆ. ಇವು ಅಫೀಮಿನ ಬೀಜಗಳು, ಇದೊಂದು ವಿಷಯುಕ್ತ ಪದಾರ್ಥವಾಗಿದೆ. ಆದರೆ ಇದರ ಬೀಜಗಳಲ್ಲಿ ಯಾವುದೇ ವಿಷಯುಕ್ತತೆ ಕಂಡು ಬರುವುದಿಲ್ಲ. ಹಾಗಾಗಿ ಇದನ್ನು ತಿನ್ನಲು ಉಪಯೋಗಿಸುತ್ತಾರೆ. ಹಲವು ಸ್ಥಳಗಳಲ್ಲಿ ಇದನ್ನು ಕುದಿಸಿ ಸ್ವಲ್ಪ ಎಣ್ಣೆ ಉಪ್ಪು ಹಚ್ಚಿ, ಕಿಚಡಿಯಂತೆ ಮಾಡಿ ತಿನ್ನುತ್ತಾರೆ ಅಥವಾ ಸಕ್ಕರೆ ಬೆರೆಸಿ ಪಾಯಸ ಮಾಡುತ್ತಾರೆ. ಇದು ಭೇದಿ ರೋಗಿಗಳಲ್ಲಿ ಇದರ ಶಾಖೆಗಳಲ್ಲಿ ಹಾಲಿನಂತಹ ಜಿಗುಟು ದ್ರವಕ್ಕೆ ಅಫೀಮು ಎನ್ನುತ್ತಾರೆ. ಕಾಯಿಯಲ್ಲಿರುವ ಬಿಳಿ ಬಣ್ಣದ ಬೀಜಗಳಿಗೆ ಕಸಕಸೆ ಎನ್ನುತ್ತಾರೆ.

ಔಷಧೀಯ ಗುಣಗಳು :-

*  ಪೌಷ್ಟಿಕ – ಕಸಕಸೆ ಪಾಯಸ ಸೇವಿಸುವುದರಿಂದ ಶರೀರದ ಶಕ್ತಿ ಹೆಚ್ಚುತ್ತದೆ. ಎರಡು ಚಮಚ ಕಸಕಸೆ ರಾತ್ರಿ ನೀರಿನಲ್ಲಿ ನೆನೆ ಇಟ್ಟು ಮುಂಜಾನೆ ಚೆನ್ನಾಗಿ ಅರೆದು ಅವಶ್ಯಕತೆಗನುಸಾರ ಕಲ್ಲು ಸಕ್ಕರೆ ಬೆರಸಿ ಚೆನ್ನಾಗಿ ಕಲಸಿ ಕುಡಿಯುವುದರಿಂದ ಮೆದುಳು, ಶರೀರ ತಂಪಾಗಿರುತ್ತದೆ.

*  ಬೇಧಿ, ಆಮಶಂಕೆ – ಎರಡು ಚಮಚ ಕಸಕಸೆಯಲ್ಲಿ ನೀರು ಬೆರೆಸಿ ಚೆನ್ನಾಗಿ ಅರೆದು ಕಾಲು ಕಪ್ಪು ಮೊಸರು ಬೆರೆಸಿ, ದಿನಕ್ಕೆ ಎರಡು ಬಾರಿ ಎರಡು ಸಲ ಸೇವಿಸಲು ಅತಿಸಾರ, ಆಮಶಂಕೆ, ಉದರ ನೋವು ಗುಣವಾಗುತ್ತದೆ. ಕಸಕಸೆ ಪಾಯಸ ಮಾಡಿ ಸೇವಿಸಿದರು ಕೂಡ ಲಾಭ ದೊರೆಯುತ್ತದೆ.

*  ಮೆದುಳು ರೋಗ – ಕಸಕಸೆ 5 ಗ್ರಾಂ, ಬಾದಾಮಿ ಬೀಜ 7, ನೀರಿನಲ್ಲಿ ಚೆನ್ನಾಗಿ ಅರೆದು ಸೋಸಿ ಕುಡಿಯುವುದರಿಂದ ಮೆದುಳು ಶಕ್ತಿದಾಯಕವಾಗುತ್ತದೆ. ಮೆದುಳಿಗೆ ತೇವಾಂಶ ಒದಗಿ ಚೆನ್ನಾಗಿ ನಿದ್ರೆ ಬರುತ್ತದೆ.

* ಊತ ನೋವು – ಕಸಕಸೆ ಸಿಪ್ಪೆಯನ್ನು ನೀರಲ್ಲಿ ಕುದಿಸಿ ಅದರ ಬಿಸಿ ಕಾಢಾದಲ್ಲಿ ಬಟ್ಟೆ ಅದ್ದಿ ಕಾವು ಕೊಡುವುದರಿಂದ ಊತ, ನೋವು  ಕಡಿಮೆಯಾಗುತ್ತದೆ.

ಹಿಂದಿನ ಲೇಖನನೀನಿರುವತನಕ
ಮುಂದಿನ ಲೇಖನಉತ್ತಾನಾಸನ