ಔಷಧೀಯ ಗುಣಗಳು :
೧ ಮಲಬದ್ಧತೆಯಿಂದ ಬಳಲುವವರು ಪುಂಡಿಸೊಪ್ಪಿನ ಚಟ್ಟಿ ತಯಾರಿಸಿ ಆಹಾರದೊಂದಿಗೆ ಸೇವಿಸಬೇಕು.
★ಆಮ್ಲಪಿತ್ತ (ಅಸಿಡಿಟಿ) ದಿಂದ ವಾಂತಿಯಾಗುತ್ತಿದ್ದಲ್ಲಿ 4ರಿಂದ 6 ಚಮಚೆ ಪುಂಡಿ ಹೂವಿನ ರಸಕ್ಕೆ ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ಕಲ್ಲುಸಕ್ಕರೆ ಬೆರೆಸಿ ಎರಡು ಇಲ್ಲವೇ ಮೂರು ಗಂಟೆಗಳಿಗೊಮ್ಮೆ ಕುಡಿಯಬೇಕು.
★ಕೆಮ್ಮು ಹಾಗೂ ನೆಗಡಿಯಾಗಿರುವಾಗ ಪುಂಡಿಸೊಪ್ಪಿನ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿಸಬೇಕು.
★ಊತ, ನೋವುಗಳಿದ್ದಲ್ಲಿ ಪುಂಡಿಯ ಬೀಜಗಳನ್ನು ನೀರಿನಲ್ಲಿ ಅರೆದು ಲೇಪಿಸುವುದರಿಂದ ಊತ, ನೋವು ಕಡಿಮೆಯಾಗುತ್ತದೆ.
★ಇತರೆ ಉಪಯೋಗಗಳು : ಪುಂಡಿಸೊಪ್ಪನ್ನು ನಾರು, ಹಗ್ಗ, ಗೋಣಿಚೀಲಗಳಿಗೆ ಆಧಾರ ವಸ್ತುವಾಗಿಯೂ ಮತ್ತು ಕಾಗದ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಪುಂಡಿಯ ಒಣಗಿದ ಹೂಗಳನ್ನು ಸ್ವಾಭಾವಿಕವಾದ ಬಣ್ಣ ತಯಾರಿಸಲು ಬಳಸುತ್ತಾರೆ.
ಅಡುಗೆ
ಪುಂಡಿಚಟ್ಟಿ : ಎರಡು ಬಗೆಯ ಚಟ್ಟಿ ತಯಾರಿಸಬಹುದು. ಹಸಿಮೆಣಸಿನಕಾಯಿ ಹಾಕಿ ತಯಾರಿಸಬಹುದು ಮತ್ತು ಒಣಮೆಣಸಿನಕಾಯಿ ಹಾಕಿಯೂ ತಯಾರಿಸಬಹುದು.
ಪುಂಡಿಸೊಪ್ಪು 2-3ಕಟ್ಟು (ದಪ್ಪ ಕಟ್ಟಾದರೆ 1. ಚಿಕ್ಕದಾದರೆ 2-3), ಹಸಿಮೆಣಸಿನಕಾಯಿ
6ರಿಂದ 8, ಜೀರಿಗೆ 1 ಚಮಚೆ, ಬೆಳ್ಳುಳ್ಳಿ 10-12 ಎಸಳು, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 2ರಿಂದ 3
ಪುಂಡಿಸೊಪ್ಪನ್ನು ಬಿಡಿಸಿಕೊಂಡು ಚೆನ್ನಾಗಿ ತೊಳೆದು ನೀರು ಬಸಿದು ತೆಗೆದಿಟ್ಟುಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿಯಾದ ಮೇಲೆ ಹಸಿಮೆಣಸಿನಕಾಯಿ ಹಾಕಿ ಹುರಿದುಕೊಳ್ಳಬೇಕು. ನಂತರ ಬೆಳ್ಳುಳ್ಳಿ, ಜೀರಿಗೆ ಹಾಕಿ ಹುರಿದುಕೊಂಡು ಅದನ್ನು ತೆಗೆದಿಟ್ಟುಕೊಂಡು ಪುಂಡಿಸೊಪ್ಪನ್ನು ಎಣ್ಣೆಯಲ್ಲಿ ಹಾಕಿ ಹುರಿದುಕೊಳ್ಳಬೇಕು. ನಂತರ ಉಪ್ಪು ಬೆರೆಸಿ ಎಲ್ಲವನ್ನೂ ಸೇರಿಸಿ ರುಬ್ಬಿಕೊಳ್ಳಬೇಕು. ಈ ಚಟ್ಟಿ ತುಂಬ ರುಚಿಕರವಾಗಿರುತ್ತದೆ. ಇದನ್ನು ಚಪಾತಿ, ರೊಟ್ಟಿ, ದೋಸೆಯೊಂದಿಗೆ ಉಪಯೋಗಿಸಬಹುದು ಕೆಲದಿನಗಳ ಕಾಲ ಈ ಚಟ್ಟಿಯನ್ನು ಸಂಗ್ರಹಿಸಿಡಬಹುದು .
ಒಣಮೆಣಸಿನಕಾಯಿ ಚಟ್ರಿ : ಪುಂಡಿಸೊಪು 2ರಿಂದ 3 ಕಟ್ಟು, ಒಣಮೆಣಸಿನಕಾಯಿ ಎರಡು ಹಿಡಿ, ಉದ್ದಿನಬೇಳೆ ! ಟೇಬಲ್ ಚಮಚೆ, ಮಂತ್ರ 2 ಚಮಚೆ, ಜೀರಿಗೆ 1 ಚಮಚ ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 2-4 ಚಮಚೆ.
ಪುಂಡಿಯ ಸೋಪ್ಪನ್ನು ಕಟ್ಟಿನಿಂದ ಬಿಡಿಸಿಕೊಂಡು ಚೆನ್ನಾಗಿ ತೊಳೆದು ನೀರು ಚೆನ್ನಾಗಿ ಬಸಿದ ಮೇಲೆ ಎಣ್ಣೆ ಹಾಕಿ ಹುರಿಯಬೇಕು. ನಂತರ ಉದ್ದಿನಬೇಳೆ, ಒಣಮೆಣಸಿನಕಾಯಿಗಳನ್ನು ಬೇರೆ ಬೇರೆಯಾಗಿ ಹುರಿದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಹುರಿದ ಸೊಪ್ಪು ಬೇನೆಯಣಸಿನಕಾಯಿ ಪುಡಿ, ಉದ್ದಿನಬೇಳೆ ಪುಡಿ, ಮೆಂತ್ಯ, ಜೀರಿಗೆ, ಉಪ್ಪು ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನು ಚಪಾತಿ, ರೊಟ್ಟಿ, ದೋಸೆ, ಅನ್ನದೊಂದಿಗೆ ಉಪಯೋಗಿಸಬಹುದು ಈ ಚಟ್ಟಿಯನ್ನು ಕೆಲದಿನಗಳ ಕಾಲ ಕೆಡದಂತೆ ಇಡಬಹುದು.
ಪುಂಡಿಪಲ್ಯ : ಇದರಲ್ಲಿ ಎರಡು ವಿಧಗಳಿವೆ. ಒಂದು ತಾಜಾಸೊಪ್ಪಿನಿಂದ ತಯಾರಿಸ ಬಹುದು ಇನ್ನೊಂದು ಎಲೆಗಳನ್ನು ಒಣಗಿಸಿಟ್ಟುಕೊಂಡು ಬೇಕಾದಾಗ ಅದನ್ನು ಉಪಯೋಗಿಸ ಬಹುದು. ಒಣಗಿಸಿದ ಎಲೆಗಳಿಗೆ ‘ಬಾಳಕಾ’ ಎನ್ನುತ್ತಾರೆ.
ಪಲ್ಕೆ ತಯಾರಿಸಲು ಬೇಕಾದ ವಸ್ತುಗಳು : ಪುಂಡಿಸೊಪ್ಪು 2-3ಕಟ್ಟು, ಅಕ್ಕಿ ನುಚ್ಚು ಅರ್ಧ ಬಟ್ಟಲು, ಕಡಲೆಬೀಜ (ಶೇಂಗಾ) 2 ಹಿಡಿ, ಹುರಿಗಡಲೆ 2 ಹಿಡಿ, ಜೀರಿಗೆ 1 ಚಮಚ ಹಸಿಮೆಣಸಿನಕಾಯಿ 6-8, ಎಣ್ಣೆ 3 ಟೇಬಲ್ ಚಮಚೆ, ಉಪ್ಪು ರುಚಿಗೆ ತಕ್ಕಷ್ಟು, ಬೆಳ್ಳುಳ್ಳಿ 15-20 ಎಸಳು, ಅಥವಾ ಹಿಂಗು ಹೆಸರುಕಾಳು ಗಾತ್ರ.
ಸೊಪ್ಪನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು. ಒಲೆಯ ಮೇಲೆ ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಇಡಬೇಕು. ನೀರು ಕುದಿಯಲು ಬಂದಾಗ ಸೊಪ್ಪು ಹಾಕಬೇಕು. ಸೊಪ್ಪು ಸ್ವಲ್ಪ ಬೆಂದ ಮೇಲೆ ಅಕ್ಕಿನುಚ್ಚು, ಕಡಲೆಬೀಜ, ಬೆಳ್ಳುಳ್ಳಿ, ಹುರಿಗಡಲೆ, ಹಸಿಮೆಣಸಿನಕಾಯಿ ಹಾಕಿ ಕುದಿಸ ಬೇಕು. ಅಕ್ಕಿ ಮತ್ತು ಸೊಪ್ಪು ಚೆನ್ನಾಗಿ ಬೆಂದಾಗ ಜೀರಿಗೆ ಪುಡಿ, ಉಪ್ಪು, ಹಾಕಿ ಚೆನ್ನಾಗಿ ಮಗುಚ ಬೇಕು. ನಂತರ ಸಣ್ಣಗೆ ಉರಿಯ ಮೇಲೆ ಎಲ್ಲವನ್ನೂ ಸ್ವಲ್ಪ ಹೊತ್ತು ಬೇಯಿಸಬೇಕು. ನಂತರ ಒಗ್ಗರಣೆ ತಯಾರಿಸಿ ಅದಕ್ಕೆ ಬೆರೆಸಿ ಕೆಳಗಿಳಿಸಬೇಕು. ಇದನ್ನು ರೊಟ್ಟಿ, ಚಪಾತಿ, ಅನ್ನದೊಂದಿಗೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಎರಡು-ಮೂರು ದಿನಗಳವರೆಗೆ ಕೆಡದಂತೆ ಇಡಬಹುದು.
ಇತರ ಭಾಷೆಗಳಲ್ಲಿ
ಸಂಸ್ಕೃತ — ಅಂಬಾಸ್ತಕಿ
ಮರಾಠಿ — ಲಾಲ್ ಅಂಬಾರಿ
ಹಿಂದಿ — ಲಾಲಂಬರಿ, ಪಾತ್ವ
ತಮಿಳು — ಗೋಗು ಪಲ್ಟಾಯಿ, ಕಿರಾಯೆ
ತೆಲುಗು — ಯರಗೋಂಗುರು, ಯರಂಗೋಕಾ
ಮಲಯಾಳಂ — ಪೊಲೆಚಿ, ಪುಲ್ಟಿರ
ಕನ್ನಡ — ಕೆಂಪು ಪುಂಡಿ, ಪುಂಡ್ರಿಕೆ, ಪುಲ್ಟಿಕೇರಿ
ವೈಜ್ಞಾನಿಕ ಹೆಸರು — Hibiscus sabdariffa L.
22/ಮನೆಯಂಗಳದಲ್ಲಿ ಔಷಧಿವನ















