ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಮಸಣಾಪುರ ಎನ್.ಜೆ.ವೈ ಫೀಡರ್ ನ ತುರ್ತು ನಿರ್ವಹಣೆ ಕಾಮಗಾರಿಯನ್ನು ನಾಳೆ ಮೇ ೩೧ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹೊಂಗನೂರು, ಮಸಣಾಪುರ, ಕಳ್ಳೀಪುರ, ಗಂಗವಾಡಿ, ಇರಸವಾಡಿ, ಸುತ್ತೂರು, ಚಾಟಿಪುರ, ರೇಚಂಬಳ್ಳಿ, ಹೆಚ್. ಮೂಕಳ್ಳಿ, ಬೂದಂಬಳ್ಳಿ, ಬೂದಂಬಳ್ಳಿ ಮೋಳೆ, ಹೊಮ್ಮ, ಗೂಳಿಪುರ, ಜ್ಯೋತಿಗೌಡನಪುರ, ನಲ್ಲೂರು ಮೋಳೆ, ನಂಜರಾಜಪುರ, ಕುರುಬರಹುಂಡಿ, ಕಾಗಲವಾಡಿಮೋಳೆ, ಅಮ್ಮನಪುರ ಹಾಗೂ ಕೋಟಂಬಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














