ಮೈಸೂರು : ಇಂದು ಮತ್ತು ನಾಳೆ ಜೂನ್ 28 ರಿಂದ ಜೂನ್ 30 ರವರೆಗೆ ಬೆಳಿಗ್ಗೆ 09:00 ರಿಂದ ಸಂಜೆ 05:00 ಗಂಟೆಯವರೆಗೆ 66/11 ಕೆ . ವಿ ವರಕೋಡು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ ಹಾಗೂ ಕ . ವಿ . ಪ್ರ . ನಿ . ನಿ ವತಿಯಿಂದ ಮಧ್ಯಂತರ ವಿದ್ಯುತ್ ಗೋಪುರ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು , ವರಕೋಡು ಗೇಟ್ , ಬ್ಲೂ ಓಸಿಯನ್ , ವರುಣ ವುಡ್ ಬಡಾವಣೆ , ಅಕ್ಷಯ ವುಡ್ ಬಡಾವಣೆ , ಶಿಕ್ಷಾ ಶಾಲೆ , ಪಿಲ್ಲಹಳ್ಳಿ ರಸ್ತೆ ಹಾಗೂ ಶಿವರಾಂಪೇಟೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ವ್ಯತ್ಯಯವಾಗಲಿದ್ದು , ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ಚಾ . ವಿ . ಎಸ್ . ನಿ . ನಿ . ಯ ನ . ರಾ . ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆಯ ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ), ಅವರ ಪ್ರಕಟಣೆಯಲ್ಲಿ ಪ್ರಾರಂಭವಾಯಿತು .
ಮೈಸೂರು : ನಾಳೆ ಜೂನ್ 29 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ವಿ . ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ 220/66/11 ಕೆ . ವಿ ಹೂಟಗಳ್ಳಿ ಸ್ವೀಕರಣ ಕೇಂದ್ರದಲ್ಲಿ 1 ನೇ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ಈ ಕೆಳಕಂಡ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗುವುದು .
ವಿದ್ಯುತ್ ವ್ಯತ್ಯಯವಾಗುವಪ್ರದೇಶಗಳು :-
ಆಟೋಮೋಟಿವ್ ಆಕ್ಸಿಲ್ ಸುತ್ತಮುತ್ತ , ರಾಣೆ ಮದ್ರಾಸ್ ಪಕ್ಕದ ರಸ್ತೆ , ಹೆಚ್ . ಟಿ . ರೆಕೆಟ್ ಬೆನ್ ಸರ್ , ಕೂರ್ಗಳ್ಳಿ ಕೈಗಾರಿಕ ಪ್ರದೇಶ , ಹೂಟಗಳ್ಳಿ ಕೈಗಾರಿಕ ಪ್ರದೇಶ , ಹಳೇ ಲೂನರ್ಸ್ , ತಿಯೋರೆಮ್ಸ್ , ಸ್ಪೆಕ್ಟಾ ç ಪೈಪ್ಸ್ , ವರ್ಷ ಕೇಬಲ್ , ಎಲ್ & ಟಿ , ವಿಪ್ರೋ ಲೈಟ್ಸ್ , ಶ್ರೀರಾಮ್ ಇಂಜಿನಿಯರ್ಸ್ , ರಜತ್ ಬ್ಯಾಟರಿ , ಆರ್ . ಪಿ . ಜಿ ಕೇಬಲ್ , ಜಿಮ್ ಕೋ , ಸ್ಟೆಕ್ಟ್ರಾ , ಎಂಪ್ರೋ ಕಾಂಕ್ರಿಟ್ , ಡ್ಯಾಮ್ ಡನ್ ಆಪಾರ್ಟ್ ಮೆಂಟ್ , ಹಿನಕಲ್ ಆಶ್ರಯ ಯೋಜನೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ , ಸಾರ್ವಜನಿಕರು ಸಹಕರಿಸಬೇಕು ಎಂದು ಚಾ . ವಿ . ಎಸ್ . ನಿ . ನಿ ., ಯ ವಿ . ವಿ ಮೊಹಲ್ಲಾ ವಿಭಾಗ , ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ), ಅವರ ಪ್ರಕಟಣೆಯಲ್ಲಿ ಪ್ರಾರಂಭವಾಯಿತು .














