ಮನೆ ಸ್ಥಳೀಯ ನಾಳೆ ವಿದ್ಯುತ್ ವ್ಯತ್ಯಯ!

ನಾಳೆ ವಿದ್ಯುತ್ ವ್ಯತ್ಯಯ!

0

ಮೈಸೂರು: ನಾಳೆ ಮೇ ೧೫ ರಂದು ಬೆಳಗ್ಗೆ ೧೦:೦೦ ಗಂಟೆಯಿಂದ ಸಂಜೆ ೫:೩೦ ಗಂಟೆಯವರೆಗೆ ಕುವೆಂಪುನಗರ ಉಪವಿಭಾಗ ವ್ಯಾಪ್ತಿಯ ೬೬/೧೧ ಕೆ.ವಿಆರ್.ಕೆ ನಗರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ೧೧ ಕೆ.ವಿ ಅರವಿಂದ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸದ ನಮಿತ್ತ ಈ ಕೆಳಕಂಡ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದು.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಕುವೆಂಪುನಗರ ಕೆ.ಹೆಚ್.ಬಿ ೧,೨,೩,೪ನೇ ಹಂತ, ಅರವಿಂದ ನಗರ, ಕೆ.ಎಸ್.ಆರ್.ಟಿ.ಸಿ ಡಿಪೋ ಸುತ್ತ ಮುತ್ತಲಿನ ಪ್ರದೇಶ, ಕಾಲಭೈರವೇಶ್ವರ ಛತ್ರ ಸುತ್ತ ಮುತ್ತಲಿನ ಪ್ರದೇಶ, ಐಶ್ವರ್ಯ್ಯ ಲೇಔಟ್, ಕುವೆಂಪು ನಗರ ಎನ್. ಮತ್ತು ಎಂ. ಬ್ಲಾಕ್, ನೃಪತುಂಗ ರಸ್ತೆ, ಭಾಗಶಃ ಆದಿಚುಂಚನಗಿರಿ ರಸ್ತೆ, ಆರ್.ಎಂ.ಪಿ ಕ್ವಾಟ್ರಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಾಗುವುದು, ಸಾರ್ವಜನಿಕರು ಸಹಕರಿಸಬೇಕು ಎಂದು ಚಾ.ವಿ.ಸ.ನಿ.ನಿ., ವಿ.ವಿ.ಮೊಹಲ್ಲಾ ವಿಭಾಗ, ಕಾರ್ಯನಿರ್ವಾಹಕ ಇಂಜಿನಿಯರ್ (ವಿ.), ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.