ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಚಾಮರಾಜನಗರ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ದೊಡ್ಡರಾಯಪೇಟೆ ವಿದ್ಯುತ್ ಉಪಕೇಂದ್ರದಿAದ ಹೊರ ಹೊಮ್ಮುವ ಫೀಡರ್ ನಲ್ಲಿ ತುರ್ತು ಕಾಮಗಾರಿಯನ್ನು ಇಂದು ಜುಲೈ ೧೩ರಂದು ಹಮ್ಮಿಕೊಂಡಿರುವುದರಿAದ ಅಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಜೋಡಿ ರಸ್ತೆ, ಕೋರ್ಟ್ ರಸ್ತೆ, ಪ್ರಗತಿ ನಗರ, ಬುದ್ಧನಗರ, ಹೌಸಿಂಗ್ ಬೋರ್ಡ್, ರಾಮಸಮುದ್ರ, ಕರಿನಂಜನಪುರ, ಹೊಸ ಹೌಸಿಂಗ್ ಬೋರ್ಡ್, ಚನ್ನಿಪುರಮೋಳೆ, ದೊಡ್ಡಬೀದಿ, ತಿಬ್ಬಳ್ಳಿಕಟ್ಟೆ ರಸ್ತೆ ಹಾಗೂ ಸುತ್ತಲಿನ ಪ್ರದೆಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














