ಮನೆ ಯೋಗಾಸನ ಪ್ರತಿದಿನ 15 ನಿಮಿಷ ಈ ಯೋಗಾಭ್ಯಾಸ ಮಾಡುವುದರಿಂದ ಸಾಕಷ್ಟು ಲಾಭವಿದೆ

ಪ್ರತಿದಿನ 15 ನಿಮಿಷ ಈ ಯೋಗಾಭ್ಯಾಸ ಮಾಡುವುದರಿಂದ ಸಾಕಷ್ಟು ಲಾಭವಿದೆ

0

ಭಾರತೀಯರು ಅನಾದಿ ಕಾಲದಿಂದಲೂ ತಮ್ಮ ಆರೋಗ್ಯ ಹಾಗೂ ಮಾನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅನುಸರಿಸಿಕೊಂಡು ಬರುತ್ತಿದ್ದ ಯೋಗಾಭ್ಯಾಸವು ಇಂದು ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.

ವಿಶ್ವದೆಲ್ಲೆಡೆಯಲ್ಲಿ ಜೂನ್ 21ರಂದು ವಿಶ್ವ ಯೋಗ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದು ಕೇವಲ ದೈಹಿಕವಾಗಿ ಮಾತ್ರ ವ್ಯಾಯಾಮವಲ್ಲದೆ, ಮನಸ್ಸಿನ ಮೇಲೆ ನಿಗ್ರಹ ಮತ್ತು ಧ್ಯಾನವೂ ಇದರಲ್ಲಿ ಒಳಗೊಂಡಿದೆ.

ಯೋಗದಿಂದ ಸಿಗುವಂತಹ ಲಾಭಗಳು

ಆಧುನಿಕ ಜಗತ್ತಿನಲ್ಲಿ ಕಾಡುತ್ತಿರುವಂತಹ ಒತ್ತಡ ನಿವಾರಣೆಗೆ ಯೋಗವು ಅತ್ಯುತ್ತಮ ವಿಧಾನ. ಯೋಗ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿಯೂ ಪರಿಣಾಮ ಬೀರುವುದು. ಇದು ಏಕಾಗ್ರತೆ ಹೆಚ್ಚಿಸುವುದು ಮತ್ತು ದೇಹದ ಬಗ್ಗೆ ಆತ್ಮವಿಶ್ವಾಸ ವೃದ್ಧಿಸುವುದು.

ದಿನನಿತ್ಯವೂ ಯೋಗಾಭ್ಯಾಸ ಮಾಡಿದರೆ ಅದರಿಂದ ಹಲವಾರು ರೀತಿಯ ದೈಹಿಕ ಹಾಗೂ ಮಾನಸಿಕ ಲಾಭಗಳು ಸಿಗುವುದು. ಯೋಗ ದಿನಾಚರಣೆ ಸಂದರ್ಭದಲ್ಲಿ ಯೋಗದಿಂದ ಸಿಗುವಂತಹ ಕೆಲವು ಲಾಭಗಳ ಬಗ್ಗೆ ತಿಳಿಸಲಿದ್ದೇವೆ.

ಒತ್ತಡ ನಿವಾರಣೆ

ಪ್ರತಿನಿತ್ಯವೂ ಯೋಗಾಭ್ಯಾಸ ಮಾಡಿದರೆ ಅದರಿಂದ ಒತ್ತಡವು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದು. ಯೋಗವು ಧ್ಯಾನ ಮತ್ತು ಕೆಲವೊಂದು ಉಸಿರಾಟದ ಭಂಗಿಗಳನ್ನು ಹೊಂದಿದೆ. ಇದು ಮಾನಸಿಕ ಆರೋಗ್ಯವನ್ನು ಕಾಪಾಡುವುದು.

ಯೋಗ ಖಿನ್ನತೆ ಮತ್ತು ನಿದ್ರೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಒತ್ತಡ ಉಂಟು ಮಾಡುವಂತಹ ಕಾರ್ಟಿಸೊಲ್ ಮಟ್ಟವನ್ನು ಯೋಗ ಕಡಿಮೆ ಮಾಡುವುದು. ಇದರಿಂದ ಯೋಗವು ಮಾನಸಿಕ ಆರೋಗ್ಯ ಮತ್ತು ಸಂಪೂರ್ಣ ಒತ್ತಡ ನಿವಾರಣೆಗೆ ಸಹಕಾರಿ ಆಗಿರುವುದು.

ಪ್ರತಿರೋಧಕ ಶಕ್ತಿ ವೃದ್ಧಿ

ಯೋಗದಿಂದ ಪ್ರತಿರೋಧಕ ಶಕ್ತಿಯು ವೃದ್ಧಿಸುವುದು ಮತ್ತು ಇದರಿಂದಾಗಿ ಶ್ವಾಸಕೋಶ, ಹೃದಯ ಮತ್ತು ಇತರ ಜೀರ್ಣಕ್ರಿಯೆ ಸಮಸ್ಯೆಗಳು ದೂರವಾಗುವುದು. ಇದು ದೇಹದಲ್ಲಿನ ಪ್ರತಿಯೊಂದು ಅಂಗಾಂಶಗಳನ್ನು ಶಮನಗೊಳಿಸುವುದು. ಆರೋಗ್ಯಕಾರಿ ಆಹಾರ ಸೇವನೆಗೆ ಪ್ರೇರೇಪಿಸುವುದು ಮತ್ತು ಚಯಾಪಚಯ ವೃದ್ಧಿಸುವುದು.

ಉರಿಯೂತ ಕಡಿಮೆ ಮಾಡುವುದು

ದೀರ್ಘಕಾಲಿಕ ಉರಿಯೂತದಿಂದಾಗಿ ಮಧುಮೇಹ, ಕ್ಯಾನ್ಸರ್ ಅಥವಾ ಹೃದಯದ ಕಾಯಿಲೆಗಳು ಕಂಡುಬರುವುದು. ಪ್ರತಿನಿತ್ಯ ಯೋಗ ಮಾಡಿದರೆ ಅದರಿಂದ ಉರಿಯೂತ ಕಡಿಮೆ ಆಗುವುದು. ಇದು ಹಲವಾರು ವಿಧದಿಂದ ದೇಹದಲ್ಲಿನ ಉರಿಯೂತವನ್ನು ನಿಯಂತ್ರಣದಲ್ಲಿ ಇಡುವುದು.

ಸ್ಥಿತಿಸ್ಥಾಪಕತ್ವ ವೃದ್ಧಿಸುವುದು

ಯೋಗದಿಂದ ದೇಹದ ವಿವಿಧ ಮಾಂಸಖಂಡಗಳು ಎಳೆಯಲ್ಪಡುವುದು. ಇದಕ್ಕೆ ಸ್ವಲ್ಪ ಸಮಯ ಬೇಕಾಗಿರುವುದು. ಆದರೆ ಪ್ರತಿನಿತ್ಯವೂ ಯೋಗ ಮಾಡಿದರೆ ಅದರಿಂದ ಬದಲಾವಣೆಗಳು ಆಗುವುದು.

ಹಿಂದಕ್ಕೆ ಬಾಗುವುದು ಅಥವಾ ಪಾದಗಳನ್ನು ಮುಟ್ಟುವುದು ಕೆಲವು ದಿನಗಳಲ್ಲಿ ತುಂಬಾ ಸುಲಭವಾಗಲಿದೆ. ಸ್ನಾಯುಗಳು ಬಲಗೊಂಡರೆ ಆಗ ಮಾಂಸಖಂಡಗಳ ಮೇಲೆ ಒತ್ತಡ ಬೀಳುವುದು ಕಡಿಮೆ ಆಗುವುದು.

ಭಂಗಿ ಸುಧಾರಣೆ

ಕುಳಿತುಕೊಂಡೇ ಕೆಲಸ ಮಾಡುತ್ತಿದ್ದರೆ ಆಗ ಅದರಿಂದ ಬೆನ್ನಿಗೆ ನೋವುಂಟು ಮಾಡುವುದು ಮಾತ್ರವಲ್ಲದೆ, ದಿನವಿಡಿ ಬಳಲಿದಂತೆ ಆಗುವುದು.

ಯೋಗದ ವಿವಿಧ ರೀತಿಯ ಆಸನಗಳು ನಿಮ್ಮ ಭಂಗಿಯನ್ನು ಸುಧಾರಣೆ ಮಾಡುವುದು ಮತ್ತು ಬೆನ್ನಿನ ಮೇಲಿನ ಒತ್ತಡ ಕಡಿಮೆ ಮಾಡುವುದು. ಕುತ್ತಿಗೆ ಮತ್ತು ಬೆನ್ನಿನ ಕೆಳಭಾಗದ ನೋವನ್ನು ಇದು ತಡೆಯುವುದು.

ತೂಕ ನಿರ್ವಹಣೆ

ವ್ಯಾಯಾಮಕ್ಕೆ ಯೋಗವು ಅತ್ಯುತ್ತಮವಾದದ್ದು ಮತ್ತು ಇದು ದೇಹದ ತೂಕ ಕಡಿಮೆ ಮಾಡುವುದು. ಇದರಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇಡಲು ಮತ್ತು ಕಾಪಾಡಲು ನೆರವಾಗುವುದು. ಇದು ತೂಕ ಇಳಿಸಲು ಅದ್ಭುತವಾಗಿ ಕೆಲಸ ಮಾಡುವುದು ಮತ್ತು ಪರಿಣಾಮಕಾರಿ ತೂಕ ಪಡೆಯಬಹುದು.

ಹೃದಯದ ಆರೋಗ್ಯ

ಯೋಗವು ಹೃದಯಕ್ಕೆ ಸರಿಯಾಗಿ ರಕ್ತ ಸರಬರಾಜು ಮಾಡಿ ಹೃದಯದ ಆರೋಗ್ಯ ಕಾಪಾಡುವುದು. ಇದು ಹೃದಯದ ಕಾಯಿಲೆ ಅಪಾಯವನ್ನು ಕಡಿಮೆ ಮಾಡುವುದು.

ಇದು ರಕ್ತದೊತ್ತಡ ಕಡಿಮೆ ಮಾಡುವುದು ಮತ್ತು ಇದರಿಂದ ಹೃದಯದ ಕಾಯಿಲೆಗಳು ಬೆಳೆಯುವುದು ನಿಧಾನವಾಗುವುದು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ್ನು ಯೋಗ ಕಡಿಮೆ ಮಾಡುವುದು.

ಹೆಚ್ಚು ಶಕ್ತಿ ನೀಡುವುದು

ಯೋಗಾಭ್ಯಾಸ ಮಾಡಿದರೆ ಅದರಿಂದ ದಿನಪೂರ್ತಿ ನೀವು ಹೆಚ್ಚು ಶಕ್ತಿಯಿಂದ ಇರಬಹುದು. ಇದು ದೇಹದಲ್ಲಿ ಶಕ್ತಿ ಮಟ್ಟ ಹೆಚ್ಚು ಮಾಡುವುದು.

ದೇಹದಲ್ಲಿ ರಕ್ತ ಸರಬರಾಜು ಹೆಚ್ಚಿಸುವ ಮೂಲಕ ಶಕ್ತಿ ನೀಡುವುದು. ಯೋಗಾಭ್ಯಾಸ ವೇಳೆ ಹೆಚ್ಚಿನ ಆಮ್ಲಜನಕವು ಸಿಗುವುದು. ಇದು ಸಂಪೂರ್ಣ ದೇಹದ ಶಕ್ತಿಗೆ ನೆರವಾಗುವುದು.