ಮನೆ ಅಪರಾಧ ಪ್ರಜ್ವಲ್ ಅಲಿಯಾಸ್ (ಪಾಪು) ಕೊಲೆ ಪ್ರಕರಣ: ಇಬ್ಬರು ಪ್ರಮುಖ ಆರೋಪಿಗಳ ಬಂಧನ ?

ಪ್ರಜ್ವಲ್ ಅಲಿಯಾಸ್ (ಪಾಪು) ಕೊಲೆ ಪ್ರಕರಣ: ಇಬ್ಬರು ಪ್ರಮುಖ ಆರೋಪಿಗಳ ಬಂಧನ ?

0

ಶ್ರೀರಂಗಪಟ್ಟಣ:  ತಾಲೂಕು ಪಾಲಹಳ್ಳಿ ಗ್ರಾಮದಲ್ಲಿ ನಡೆದ ಪ್ರಜ್ವಲ್ ಅಲಿಯಾಸ್ (ಪಾಪು) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳ ಪೈಕಿ ಇಬ್ಬರು ಪ್ರಮುಖ ಆರೋಪಿಗಳನ್ನು ಶ್ರೀರಂಗಪಟ್ಟಣ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ವಾಹಿನಿಯ ಬಾತ್ಮೀದಾರರು ಮಾಹಿತಿ ನೀಡಿದ್ದಾರೆ.

 ಪಾಲಹಳ್ಳಿ ಗ್ರಾಮದ ಪ್ರಮೋದ್ ಹಾಗೂ ಬೆಂಗಳೂರಿನ ಮುಬಾರಕ್ ಎಂಬ ಆರೋಪಿಗಳನ್ನು ಶ್ರೀರಂಗಪಟ್ಟಣ ಠಾಣಾ ಪೊಲೀಸರು ಬುಧವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,

ಉಳಿದ 4 ಆರೋಪಿಗಳಾದ ಪ್ರಕಾಶ್ ಅಲಿಯಾಸ್ (ಬೆಳ್ಳಿ), ಅಭಿಷೇಕ್ ಅಲಿಯಾಸ್ (ಕೋಳಿ ಅಭಿ),ರಕ್ಷಿತ್ ಅಲಿಯಾಸ್ (ಕುಂಟ ರಕ್ಷಿತ್),ಕೀರ್ತಿ ಅಲಿಯಾಸ್ (ಹೇರಗನಹಳ್ಳಿ ಕೀರ್ತಿ) ತಲೆ ಮರೆಸಿಕೊಂಡಿದ್ದು ಪೊಲೀಸರು ಉಳಿದ ಆರೋಪಿಗಳ ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ