ಮನೆ ಮನರಂಜನೆ ಪ್ರಜ್ವಲ್‌ ಚಿತ್ರದ ʼರಾ ರಾ ರಾಕ್ಷಸ’ ಹಾಡು ಬಿಡುಗಡೆ

ಪ್ರಜ್ವಲ್‌ ಚಿತ್ರದ ʼರಾ ರಾ ರಾಕ್ಷಸ’ ಹಾಡು ಬಿಡುಗಡೆ

0

ಪ್ರಜ್ವಲ್‌ ದೇವರಾಜ್‌ ನಟನೆಯ “ರಾಕ್ಷಸ’ ಚಿತ್ರ ಜನವರಿಯಲ್ಲಿ ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. “ರಾ ರಾ ರಾಕ್ಷಸ’ ಎಂಬ ಹಾಡು ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಚಿತ್ರ ಸೆನ್ಸಾರ್‌ ಆಗಿ, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ.

Join Our Whatsapp Group

ಸಿನಿಮಾದ ಫ‌ಸ್ಟ್‌ಲುಕ್‌, ಟೀಸರ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಚಿತ್ರದ ಮೇಲೆ ನಿರೀಕ್ಷೆ ಇದೆ. ಇದು ಪ್ರಜ್ವಲ್‌ ಕರಿಯರ್‌ನ ಭಿನ್ನ ಸಿನಿಮಾಗಳ ಸಾಲಿನಲ್ಲಿ ನಿಲ್ಲಲಿದೆ. ಏಕೆಂದರೆ “ರಾಕ್ಷಸ’ ರೆಗ್ಯುಲರ್‌ ಹೊಡೆದಾಟ-ಬಡಿದಾಟದ ಆ್ಯಕ್ಷನ್‌ ಸಿನಿಮಾವಲ್ಲ. ಇಡೀ ತಂಡದ ಅದರಾಚೆ ಹೊಸದನ್ನು ಪ್ರಯತ್ನಿಸಿದೆ. ಲೋಹಿತ್‌ ಈ ಸಿನಿಮಾದ ನಿರ್ದೇಶಕರು.

ಇದೊಂದು ಹಾರರ್‌ ಹಿನ್ನೆಲೆಯಲ್ಲಿ ಸಾಗುವ ಚಿತ್ರವಾಗಿದ್ದು, ಟೈಮ್‌ ಲೂಪ್‌ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಟೈಮ್‌ ಲೂಪ್‌ನಡಿ ಹಾರರ್‌ ಕಥೆ ಬಂದಿರೋದು ತೀರಾ ವಿರಳ. ಈಗ ಲೋಹಿತ್‌ ಇಂತಹ ಪ್ರಯತ್ನ ಮಾಡಿದ್ದಾರೆ. ಇಡೀ ಸಿನಿಮಾವನ್ನು ರಾಮೋಜಿ ರಾವ್‌ ಫಿಲಂ ಸಿಟಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ವಿಶೇಷವಾಗಿ ಚಿತ್ರೀಕರಿಸಲಾಗಿದ್ದು, ಅಂಡರ್‌ವಾಟರ್‌ನಲ್ಲಿ ಶೂಟಿಂಗ್‌ ಮಾಡಲಾಗಿದೆ.

ಶಾನ್ವಿ ಎಂಟರ್‌ಟೈನ್ಮೆಂಟ್ಸ್‌ನಡಿ ದೀಪು ಬಿ.ಎಸ್‌, ನವೀನ್‌ ಗೌಡ ಹಾಗೂ ಮಾನಸ ಅವರು ರಾಕ್ಷಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇನ್ನು ಪ್ರಜ್ವಲ್‌ ಜೊತೆಯಾಗಿ ಅರುಣ್‌ ರಾಥೋಡ್‌, ಶ್ರೀಧರ್‌, ಗೌತಮ್, ಸೋಮಶೇಖರ್‌, ವಿಹಾನ್‌ ಕೃಷ್ಣ ಜಯಂತ್‌ ಇನ್ನು ಅನೇಕರು ಅಭಿನಯಿಸಿದ್ದಾರೆ. ನೋಬಿನ್‌ ಪೌಲ್‌ ಸಂಗೀತ ನಿರ್ದೇಶನ, ಜೇಬಿನ್‌ ಪಿ. ಜೋಕಬ್‌ ಛಾಯಾಗ್ರಹಣ ಸಿನಿಮಾಗಿದೆ.