ಮನೆ ಮನರಂಜನೆ ಪ್ರಣಾಮ್ ದೇವರಾಜ್ ಅಭಿನಯದ ವೈರಂ ಟೀಸರ್ ಬಿಡುಗಡೆ

ಪ್ರಣಾಮ್ ದೇವರಾಜ್ ಅಭಿನಯದ ವೈರಂ ಟೀಸರ್ ಬಿಡುಗಡೆ

0

ಒಬ್ಬ ಆಂಗ್ರಿ ಯಂಗ್ ಮ್ಯಾನ್ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ಚಿತ್ರ ವೈರಂ. ಹಿರಿಯನಟ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಅಭಿನಯದ ದ್ವಿತೀಯ ಚಿತ್ರ ಇದಾಗಿದ್ದು, ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಟೀಸರ್ ಬಿಡುಗಡೆ ಮಾಡಿದರು.

ನಾಯಕ ಪ್ರಣಾಮ್ ದೇವರಾಜ್ ಮಾತನಾಡಿ, ಸಾಯಿಶಿವನ್‌ ಈ ಚಿತ್ರದ ನಿರ್ದೇಶಕ. ಚಿಕ್ಕ ವಯಸ್ಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. 4 ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ. ಹಿಂದಿನ ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿದ್ದೆ. ಈ ಸಿನಿಮಾದಲ್ಲಿ ಆ್ಯಕ್ಷನ್‌ ಹೀರೋ ಆಗಿದ್ದೇನೆ. ಸಾಯಿ ಶಿವನ್ ಅವರಲ್ಲಿ ತುಂಬಾ ಕಾನ್ಫಿಡೆನ್ಸ್ ಇದೆ ಎಂದರು.

ನಿರ್ಮಾಪಕರಾಗಿ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ತುಂಬಾ ಬೆಂಬಲಿಸಿದ್ದಾರೆ. ಛಾಯಾಗ್ರಹಣವೂ ಅದ್ಭುತವಾಗಿದೆ. ನಾನು ಇಷ್ಟು ಚೆನ್ನಾಗಿ ತೆರೆಮೇಲೆ ಕಾಣಿಸಲು ಅವರೇ ಕಾರಣ. ಒಬ್ಬ ಹೀರೋ ಗುರುತಿಸಿಕೊಳ್ಳುವುದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ. ನನಗೆ ಎರಡನೇ ಚಿತ್ರದಲ್ಲೇ ಗರುಡರಾಮ್ ಅವರಂಥ ಖಳನಟರೆದುರು ಅಭಿನಯಿಸುವ ಅವಕಾಶ ಸಿಕ್ಕಿತು. ಶಂಕರ್ ಅಶ್ವಥ್ ಹಾಗೂ ವೀಣಾಸುಂದರ್ ನನ್ನ ತಂದೆ, ತಾಯಿ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿವೆ. ಕವಿರಾಜ್, ನಾಗೇಂದ್ರ ಪ್ರಸಾದ್, ರಾಮ್ ನಾರಾಯಣ್ ಹಾಡುಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.

ಹಿಂದಿನ ಲೇಖನಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ, ಬಿಎಂಆರ್’ಸಿಎಲ್’ನಿಂದ 20 ಲಕ್ಷ ರೂ. ಪರಿಹಾರ
ಮುಂದಿನ ಲೇಖನಹರಿವರಾಸನ ಕೇಳಿ ಮಲಗಿದ