ಮನೆ ಯೋಗಾಸನ ಪ್ರಾಣಾಯಾಮ ವಿಧಾನ

ಪ್ರಾಣಾಯಾಮ ವಿಧಾನ

0

 ಸಾಮಾನ್ಯವಾಗಿ ಪ್ರಾರಂಭದ ಹಂತದ ಕನಿಷ್ಠ ಆರು ತಿಂಗಳು ಅಥವಾ ಒಂದು ವರ್ಷದವರೆಗಿನ ಕುಂಭಕ ರಹಿತ ಸಾಮಾನ್ಯ ಪ್ರಾಣಾಯಾಮ ಮತ್ತು ಅದೇ ರೀತಿಯ ಕುಂಭಕ ರಹಿತ ನಾಡಿಶೋಧನ ಪ್ರಾಣಾಯಾಮಗಳ ಸರಿಯಾದ ಮತ್ತು ನಿರಂತರ ಅಭ್ಯಾಸದ ಮುಂದುವರಿದ ಭಾಗವಾಗಿ ಮೊದಲು ಲಘು ಅಂತರ ಕುಂಭಕದೊಂದಿಗೆ ಅಂದರೆ ಅದು (6:3:6) ಅನುಪಾತದಿಂದ, ಅಂದರೆ ʼ1,2,3,……..,6ʼ ಎನ್ನುತ್ತಾ, ಆರು ಎಣಿಕೆಗಳ ಪೂರಕ ʼ1,2,3ʼ ಎನ್ನುತ್ತಾ ಮೂರು ಎಣಿಕೆಗಳ ಲಘು ಅಂತರ ಕುಂಭಕ ಮತ್ತು ʼ1, 2, 3, ……,6ʼ ಎನ್ನುತ್ತಾ ಆರು ಎಣಿಕೆಗಳ ರೇಚಕಗಳೊಂದಿಗೆ ಈ ಪ್ರಾಣಯಾಮವನ್ನು ಅಂದರೆ, ಆರು ಎಣಿಸುವವರಿಗೆ ಅಥವಾ ಆರು ಸೆಕೆಂಡುಗಳ ವರೆಗೆ ಶ್ವಾಸಕೋಶಗಳು ಸಂಪೂರ್ಣ ತುಂಬುವವರೆಗೆ ಉಸಿರು ಒಳಗೆ ತೆಗೆದುಕೊಂಡು ಮೂರು ಎಣಿಸುವವರೆಗೆ, ಉಸಿರನ್ನು ಒಳಗೆ ಹಿಡಿದಿಟ್ಟುಕೊಂಡು ಮತ್ತೆ ಆರು ಎಣಿಸುವವರಿಗೆ ಅಥವಾ ಆರು ಸೆಕೆಂಡುಗಳವರೆಗೆ ಸಂಪೂರ್ಣವಾಗಿ ಉಸಿರನ್ನು ಹೊರ ಬಿಡಬೇಕು.

ಅಲ್ಲಿಗೆ ಇದು ಒಂದು ಸುತ್ತು ಪ್ರಾಣಾಯಾಮ ಮುಗಿಯಿತು. 5 ರಿಂದ 10 ನಿಮಿಷಗಳವರೆಗೆ ನಿರಂತರವಾಗಿ ಅತ್ಯಂತ ಕಾಳಜಿ ಪೂರ್ವಕವಾಗಿ ಮತ್ತು ನಿಧಾನವಾಗಿ ಅದನ್ನು ಅಭ್ಯಾಸಿಸಬಹುದು. ಈ ಸಮಯದಲ್ಲಿ ಯಾವುದೇ ರೀತಿಯ ಒತ್ತಡ ಅಥವಾ ಗಡಿಬಿಡಿ ಇಲ್ಲದ ಶಾಂತ ಸ್ಥಿತಿಯನ್ನು ಇರುವುದು ತುಂಬಾ ಮುಖ್ಯ ಇನ್ನೂ ಸಂಖ್ಯೆಗಳ ಎಣಿಕೆ (ಈ ಸಂಖ್ಯೆಗಳ ಎಣಿಕೆ ಅವಧಿ ಅಂದಾಜು ಸೆಕೆಂಡ್ ಗಳ ಒಂದರಂತೆ ಇರಲಿ) ಅಥವಾ ಗೋಡೆ ಗಡಿಯಾರದ “ಟಿಕ್, ಟಿಕ್, ಟಿಕ್, ಟಿಕ್” ಸದ್ದು ಅಥವಾ ನಿಮಗೆ ಸರಿ ಅನಿಸಿದರೆ ಯಾವುದೇ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬಹುದು, ಇದನ್ನು ಇನ್ನೊಬ್ಬರು ನೋಡಿ ನಾನೇನು ಕಡಿಮೆ ಎಂದು ಜಿದ್ದಿನಿಂದ ಅವಸರವಾಗಿ ಹೆಚ್ಚಿಸುತ್ತಾ ಹೋಗಬಾರದು.

 ಮಾಡುವಾಗ ಆಯಾಸ ಅಥವಾ ಶ್ರಮವೆನ್ನಿಸಿದರೆ ತಕ್ಷಣ ನಿಲ್ಲಿಸಬೇಕು. ಆಯಾಸ ಪರಿಹರಿಸಕೊಂಡು  ನಿಧಾನವಾಗಿ ಮುಂದುವರಿಸಬಹುದು. ಪ್ರಣಾಯಾಮ ಯಾವುದೇ ಇರಲಿ ಆಯಾಸವೆನ್ನಿಸಿದರೆ ಉದಾಹರಣೆಯನ್ನು ಹೇಳುವುದು ಹೆಚ್ಚು ಸಮಂಜಸವೆನಿಸುತ್ತದೆ.

ಅವರು 20 ವರ್ಷಗಳ ಹಿಂದೆ ಬೇರೊಂದು ಸಂದರ್ಭದಲ್ಲಿ (6:3:6:3) ರ ಅನುಪಾತದಲ್ಲಿ ಪ್ರತಿದಿನ ಕೇವಲ ಐದು ನಿಮಿಷಗಳ ಸಾಮಾನ್ಯ ಪ್ರಣಯ ವಾಮವನ್ನು ಸುಮಾರು ಎರಡು ವರ್ಷಗಳ ಕಾಲ ಮಾಡಿದರು. ಈಗ ಮತ್ತೆ 2015-16ರಲ್ಲಿ ಮೇಲಿನಂತೆ ಪ್ರಾರಂಭಿಸಿ ಸುಮಾರು ಆರು ತಿಂಗಳ ಕಾಲ (6:3:6) ರ ಅನುಪಾತದಲ್ಲಿ ಪ್ರತಿದಿನ 10 ನಿಮಿಷ ಮಾಡಿ, (6+3+6=15) ಸೆಕೆಂಡ್ ಗಳು ಅಂದರೆ 15:4=60 ನಿಮಿಷಕ್ಕೆ ಉಸಿರಾಟಗಳು ನಂತರ ಮತ್ತೆ ಆರು ತಿಂಗಳು 20 ನಿಮಿಷಗಳ ಅಭ್ಯಾಸ ಮಾಡಿ 8:4:8 ರ ಅನುಪಾತಕ್ಕೆ ಏರಿಸಿ ಆನಂತರ ನಿಧಾನವಾಗಿ ಏರಿಸುತ್ತಾ ಮತ್ತೆ ಎರಡು ವರ್ಷಗಳ ಅವಧಿಯಲ್ಲಿ (10:10:10) ರ ಅನುಪಾತಕ್ಕೆ ಬಂದು ನಂತರ ಬಾಹ್ಯಕುಂಭಕ ಸೇರಿಸಿಕೊಂಡು, ನಿಧಾನವಾಗಿ ಮುಂದುವರಿದು ಮತ್ತೆ ಮೂರು ವರ್ಷಗಳಾಗುತ್ತಿದ್ದಂತೆ ನಿರಾಯಾಸವಾಗಿ ತಲಾ 15 ನಿಮಿಷಗಳ ಕಾಲ (10:10:10:10)  ರ ಅನುಪಾತದಲ್ಲಿ(ಇದು ಗಣಿತಶಾಸ್ತ್ರದ ಪ್ರಕಾರ ಅನುಪಾತ ಎಂದರೆ 1:1:1:1 ಅಷ್ಟೇ ಅದನ್ನು ಪ್ರಸ್ತುತದಲ್ಲಿ ಸೆಕೆಂಡ್ ಗಳು ಅನ್ನೋದು ಹೆಚ್ಚು ಸಮಂಜಸ) ಸಾಮಾನ್ಯ ಪ್ರಣಯಮ ಮತ್ತು ನಾಡಿ ಶೋಧನಾ ಪ್ರಾಣಾಯಾಮಗಳನ್ನು ಮಾಡುತ್ತಿದ್ದರೆ. ಮತ್ತು ಸಂಜೆ ಸಮಯದಲ್ಲಿ 10 -0-10-10 ಅನುಪಾತದಲ್ಲಿ ಅಂದರೆ ಅಂತರ ಕುಂಭಕ ಹೊರತುಪಡಿಸಿ ಸಲ 10 ಸೆಕೆಂಡ್ ಗಳ ಪೂರಕ ರೇಚಕ ಮಾಡಿ 10 ಸೆಕೆಂಡ್ ನ ಬಾಹ್ಯಕುಂಭಕ ಸಹಿತ 15 ನಿಮಿಷಗಳ ಸಾಮಾನ್ಯ ಪ್ರಣಾಯಾಮ ಮತ್ತು 10 ನಿಮಿಷಗಳ ನಾಡಿ ಶೋಧನ ಪ್ರಾಣಯಾಮ ಮಾಡುತ್ತಾರೆ.

ಇದು ಅಷ್ಟು ವಯಸ್ಸಾದ ಒಬ್ಬ ವ್ಯಕ್ತಿಯು ತನ್ನ 64-65 ನೆಯ ವರ್ಷ ಪ್ರಾಣಾಯಾಮಗಳನ್ನು ಪ್ರಾರಂಭಿಸಿ ಆರು ಸುದೀರ್ಘವರ್ಷಗಳ ಅವಧಿಯಲ್ಲಿ ಇಷ್ಟು ಮಾಡಿರುವುದು ಅಂತ ವಿಶೇಷ ಸಾಧನೆ ಅಲ್ಲವಾದರೂ, ಚಿಕ್ಕ ವಯಸ್ಸಿನಲ್ಲಿಯೇ ಯೋಗ್ಯಭ್ಯಾಸ ಪ್ರಾರಂಭಿಸಿದ್ದಾರೆ. ಅಷ್ಟೇ ಅವಧಿಯಲ್ಲಿ ಏನೆಲ್ಲ ಸಾಧನೆ ಮಾಡಬಹುದು ಆರಾಮಾಗಿ 15+15+15+15 ರ ಅನುಪಾತವನ್ನು ನಿರಾಯವಾಗಿ ತಲುಪಬಹುದಾಗಿತ್ತು. ಎಂದು ಅನಿಸುವುದಿಲ್ಲವೇ. ಹೆಚ್ಚಿನ ಎಂದರೆ ನಿಮಿಷಕ್ಕೆ ಸಾಧಾರಣ ಸ್ಥಿತಿಯಲ್ಲಿ ನಡೆಯುವ 15 ಉಸಿರಾಟಗಳಿಂದ ಒಂದು ಉಸಿರಾಟದವರೆಗಿನ ಸಾಧನೆ. ಅದು ಅಷ್ಟು ಸುಲಭವಲ್ಲವಾದರೂ ಅಸಾಧ್ಯಾವೇನಲ್ಲ. ಅದನ್ನು ಉನ್ನತಮಟ್ಟದ ಸಾಧಕರು ನಿರಾಯಾಸವಾಗಿ ಸಾಧಿಸಬಲ್ಲರು. ಅದಕ್ಕೆ ಅತಿ ಶ್ರಾದ್ಧೆ, ದೃಢನಿರ್ಧಾರ ಮತ್ತು ನಿರಂತರ ಪ್ರಯತ್ನ ಬೇಕು ಅಷ್ಟೇ.

ಇರಲಿ ಅವರ ಈ ಮೇಲಿನ ಅನುಭವವನ್ನು ಹೇಳಿದ್ದು, ಇದರ ತಾತ್ಪರ್ಯವಿಷ್ಟೇ ನಮ್ಮ ಸಾಧನೆ ನಿರಾಸಾಯವಾಗಿ ನಡೆಯಲಿ, ನಿಧಾನವಾಗಿರಲಿ ಮತ್ತು ನಿರಂತರವಾಗಿರಲಿ. ಸೂಕ್ಷ್ಮ ಗಮನ ಸದಾ ಕಾಲಕ್ಕೂ ಉಸಿರಾಟದ ಮೇಲಿರಲಿ ಯಾವ ಕಾಲಕ್ಕೂ ಆತುರ ಗಡಿಬಿಡಿ ಬೇಡವೇ ಬೇಡ. ಇನ್ನೊಂದು ವಿಷಯ ಸಂಜೆ ಸಮಯದಲ್ಲಿ ಅಂತರ ಕುಂಭಕ ಮಾಡಬಾರದು ಕಾರಣವಿಷ್ಟೇ ಅದು ತುಂಬಾ ಚೈತನ್ಯದಾಯಕವಾಗಿದ್ದು ಅದರಿಂದ ರಾತ್ರಿ ನಿದ್ರೆ ಬರದೇ ಇರಬಹುದು. ಅಲ್ಲದೆ ಬಾಯಿಹ ಕುಂಭಕದೊಂದಿಗೆ ಪ್ರಾಣಾಯಾಮವು ನಿದ್ರಾಹೀನತೆಗೆ (ಇನ್ಸೋಮ್ನೀಯಾ ಕಾಯಿಲೆಗೆ) ತುಂಬಾ ಪರಿಣಾಮಕಾರಿಯೆಂದು ಹೇಳಲಾಗುತ್ತದೆ. ಆಸಕ್ತರು ಪ್ರಯತ್ನಿಸಬಹುದು.

ಇನ್ನು ಅಂತರ ಕುಂಭಕವನ್ನು ಪೂರ್ತಿ ಕರಗತ ಮಾಡಿಕೊಳ್ಳದೆ ಬಾಹ್ಯ ಕುಂಭಕವನ್ನು ಪ್ರಾರಂಭಿಸಲೇ ಕೂಡದು. ಇದನ್ನು ಯೋಗ್ಯ ಯೋಗ ಗುರುವಿನ ಮಾರ್ಗದರ್ಶನದಲ್ಲಿ ಮಾಡುವುದು ಇನ್ನೂ ಉತ್ತಮ.

ಈಗ, ಅಸಲಿ ವಿಷಯಕ್ಕೆ ಬರೋಣ. ಇಲ್ಲಿ ಮೇಲೆ ತಿಳಿಸಿದ ಕುಂಭಕಗಳ ವಿಷಯ ನಿಮ್ಮ ಜ್ಞಾನಾರ್ಜನೆಗಾಗಿ ಮತ್ತು ಅದು ಮಾಧ್ಯಮ ಕ್ರಮಾಂಕದ ಮತ್ತು ಸ್ವಲ್ಪ ಮಟ್ಟಿಗೆ ಉನ್ನತ ಮಟ್ಟದ ಸಾಧಕರಿಗಾಗಿ ಮಾತ್ರ ಸಾಮಾನ್ಯರಿಗೆ ಮತ್ತು ಹೊಸದಾಗಿ ಪ್ರಾರಂಭ ಮಾಡುವವರಿಗೆ (ಹಿರಿಯ ನಾಗರಿಕರು ಮತ್ತು 18 ವರ್ಷದೊಳಗಿನ ಮಕ್ಕಳ ಸಹಿತವಾಗಿ) ಕುಂಭಕ ಬೇಡವೇ ಬೇಡ. ಸಾಮಾನ್ಯ ಆರೋಗ್ಯ ಮತ್ತು ಯಾವುದೇ ರೀತಿಯ ದೈಹಿಕ ಚಿಕಿತ್ಸೆಗಳಿಗೆ ಕುಂಭಕರಹಿತ ಪ್ರಾಣಾಯಾಮ ಸಾಕು. ಅದರೊಂದಿಗೆ ಈ ಹಿಂದೆ ಚರ್ಚಿಸಿದಂತೆ ʼಯಾವುದೇ ರೀತಿ ಅಳೆತವಿಲ್ಲದ ಶಾಂತ ಸ್ಥಿತಿಯಲ್ಲಿʼ ಮತ್ತು ʼಸೋಹಂʼದೊಂದಿಗೆ, ಅಂದ್ರೆ ಉಸಿರು ಒಳಗಡೆದುಕೊಳ್ಳುವಾಗ “ಸೋ” ಅಂದ್ರೆ ಆ ದೈವೀ ಪ್ರಣಾಶಕ್ತಿ ನಮ್ಮೊಳಗೆ ಪ್ರವೇಶಿಸುವುದರ ಸಂಪೂರ್ಣ ಅರಿವಿನಿಂದ ಇರುವುದು ಮತ್ತು ಹೊರಬಿಡುವಾಗ ನಮ್ಮ “ಅಹಂ” ತ್ಯಜಿಸುವುದು, ಜೊತೆಗೆ ಈ ಜೀವಾತ್ಮನು ಪರಮಾತ್ಮನನ್ನು ಸೇರುವುದರ ಸಂಕೇತ ಅರಿವಿರುವುದು ಮತ್ತು ಕುಂಭಕ ರಹಿತ ಪ್ರಾಣಯಾಮವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕೆಂದೇನೂ ಇಲ್ಲ ಮತ್ತು ಅದನ್ನು ಯಾವಾಗಬೇಕು ಆಗ, ಎಷ್ಟು ಬೇಕು ಅಷ್ಟು ಮಾಡಬಹುದು, ಯಾವ ತೊಂದರೆಯೂ ಇಲ್ಲ. ಅದು ಆದಾಗ್ಯೂ ಹೊಸಬರು ಖಾಲಿ ಹೊಟ್ಟೆಯಲ್ಲಿ ಪ್ರಾರಂಭಿಸುವುದು ಹೆಚ್ಚು ಸೂಕ್ತ.